KKRTC ಬಸ್​- ಬೈಕ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಉಸಿರು ಚೆಲ್ಲಿದ ಮೂವರು ಯುವಕರು​

author-image
Bheemappa
Updated On
KKRTC ಬಸ್​- ಬೈಕ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಉಸಿರು ಚೆಲ್ಲಿದ ಮೂವರು ಯುವಕರು​
Advertisment
  • ಒಂದೇ ಬೈಕ್​ನಲ್ಲಿ ಕಿಣ್ಣಿ ಸಡಕ್ ಗ್ರಾಮದಿಂದ ಸಿಟಿಗೆ ಹೋಗುತ್ತಿದ್ದರು
  • ಬೈಕ್​- ಬಸ್​ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸಾವು
  • ಮುಗಿಲು ಮುಟ್ಟಿದ ಮೂವರು ಯುವಕರ ಕುಟುಂಬಸ್ಥರ ಆಕ್ರಂದನ

ಕಲಬುರಗಿ: ಬೈಕ್​ ಹಾಗೂ ಕೆಕೆಆರ್​ಟಿಸಿ ಬಸ್​ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಮಲಾಪುರ ತಾಲೂಕಿನ ಬಳಿ ನಡೆದಿದೆ.

ತಾಲೂಕಿನ ಕಿಣ್ಣಿ ಸಡಕ್ ಗ್ರಾಮದ ವಿಶಾಲ್ ಜಾಧವ್ (17), ಚಂದ್ರಕಾಂತ (20) ಮತ್ತು ಸಮೀರ್ (23) ಮೃತರು. ಈ ಯುವಕರು ಕೆಲಸದ ನಿಮಿತ್ತ ಒಂದೇ ಬೈಕ್​ನಲ್ಲೇ ತಮ್ಮ ಗ್ರಾಮದಿಂದ ಕಲಬುರಗಿಗೆ ಹೋಗುತ್ತಿದ್ದರು. ಕಲಬುರಗಿಯಿಂದ ಹುಮನಾಬಾದ್ ಕಡೆಗೆ ಸಾರಿಗೆ ಬಸ್ ತೆರಳುತ್ತಿತ್ತು. ಈ ವೇಳೆ ಕಮಲಾಪುರ ತಾಲೂಕು ಬಳಿ ಬರುತ್ತಿದ್ದಂತೆ ಬೈಕ್​ ಮತ್ತು ಬಸ್​ ನಡುವೆ ಭಯಾನಕವಾದ ಅಪಘಾತ ಸಂಭವಿಸಿದೆ.

ಇದನ್ನೂ ಓದಿ:ಪುಣೆ ಪೋರ್ಶೆ​ ಕಾರು ಆಕ್ಸಿಡೆಂಟ್​​ ಕೇಸ್​ಗೆ ಬಿಗ್​ ಟ್ವಿಸ್ಟ್​.. ಇಬ್ಬರು ವೈದ್ಯರು ಅರೆಸ್ಟ್​; ಯಾಕೆ? 

publive-image

ಪರಿಣಾಮ ಬೈಕ್​ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಮಲಾಪುರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಂಬುಲೆನ್ಸ್​ ಮೂಲಕ ಮೃತದೇಹಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೂವರು ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment