newsfirstkannada.com

ಖರ್ಗೆ ಸೋಲಿಸಿದ್ದ ಜಾಧವ್​​ಗೆ ಈ ಸಲ ಟಿಕೆಟ್ ಡೌಟ್.. ಪತ್ನಿ ಕಣಕ್ಕಿಳಿಸಲು ರೆಡಿ ಅಂದ್ರಂತೆ ಬಿಜೆಪಿಯ ಹಾಲಿ ಶಾಸಕ..!

Share :

Published January 16, 2024 at 11:30am

  ಜಾಧವ್​​ಗೆ ಟಿಕೆಟ್​ ನೀಡದಿರಲು ಬಿಜೆಪಿಯಲ್ಲಿ ಚರ್ಚೆ

  ಈ ಬಾರಿ ಖರ್ಗೆ ಕೂಡ ಸ್ಪರ್ಧೆ ಮಾಡೋದು ಡೌಟ್

  ಲೋಕಸಭೆ ಚುನಾವಣೆ ಗೆಲ್ಲಲು ಭಾರೀ ರಣತಂತ್ರ

ಕಳೆದ ಬಾರಿಯ ಲೋಕಸಭೆ ಚುನಾವಣೆ ವೇಳೆ ದೇಶದಲ್ಲಿ ಅತೀ ಹೆಚ್ಚು ಸದ್ದು ಮಾಡಿದ್ದು ಕಲಬುರಗಿ ಲೋಕಸಭೆ ಕ್ಷೇತ್ರ. ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಕಾಂಗ್ರೆಸ್ ಹಾಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಉಮೇಶ್ ಜಾಧವ್ ನಡುವಿನ ಸ್ಪರ್ಧೆ. ಅಂದು ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಿಜೆಪಿ ಹೈಕಮಾಂಡ್, ಕೊನೆಗೂ ಖರ್ಗೆಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಲೇಟೆಸ್ಟ್ ವಿಚಾರ ಅಂದರೆ, ಕಳೆದ ಬಾರಿ ಕಾಂಗ್ರೆಸ್​ನ ಹಿರಿಯ ನಾಯಕನನ್ನು ಮಣಿಸಿದ್ದ ಜಾಧವ್​​ಗೆ ಈ ಸಲ ಟಿಕೆಟ್ ಸಿಗೋದು ಡೌಟ್ ಎನ್ನಲಾಗುತ್ತಿದೆ.

ರಾಜಕೀಯ ವಲಯದಲ್ಲಿ ಎದ್ದಿರುವ ಚರ್ಚೆಗಳ ಪ್ರಕಾರ ಜಾಧವ್​​ಗೆ ಟಿಕೆಟ್ ಸಿಗುವ ಸಾಧ್ಯತೆ ತೀರಾ ಕಡಿಮೆ ಇದೆಯಂತೆ. ಹಾಲಿ ಸಂಸದ ಉಮೇಶ್ ಜಾಧವ್ ವಿರುದ್ಧ ಕ್ಷೇತ್ರದಲ್ಲಿ ತೀವ್ರ ಅಪಸ್ವರ ಕೇಳಿಬಂದಿದೆ. ಇದೇ ಕಾರಣಕ್ಕೆ ಬಿಜೆಪಿ ಜಾಧವ್​​ಗೆ ಟಿಕೆಟ್ ನೀಡಲು ಹಿಂದೆ ಮುಂದೆ ನೋಡುತ್ತಿದ್ದು, ಅವರ ಬದಲಾಗಿ ಶಾಸಕ ಬಸವರಾಜ್ ಮತ್ತಿಮೂಡರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿರುವ ಬಸವರಾಜ್ ಮತ್ತಿಮೂಡರನ್ನು ಕಣಕ್ಕಿಳಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. ಮತ್ತೊಂದು ಕಡೆ ಕಾಂಗ್ರೆಸ್​ನಿಂದ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುವುದು ಡೌಟ್. ಖರ್ಗೆ ಬದಲಾಗಿ, ಅಳಿಯ ರಾಧಾಕೃಷ್ಣರನ್ನ ಕಣಕ್ಕಿಳಿಸಲು ಕಾಂಗ್ರೆಸ್ ಪಾಳೆಯ ಚರ್ಚೆ ನಡೆಸಿದೆ. ಕಾಂಗ್ರೆಸ್ ರಾಧಾಕೃಷ್ಣರನ್ನು ಕಣಕ್ಕಿಳಿಸಿದ್ರೆ ಉಮೇಶ್​ ಜಾಧವ್​ಗಿಂತ ಮತ್ತಿಮೂಡ್ ಗಟ್ಟಿ ಅಭ್ಯರ್ಥಿ ಎನ್ನುವುದು ಬಿಜೆಪಿ ಮುಖಂಡರ ಅಭಿಮತ.

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಜನಾಶೀರ್ವಾದ ಪಡೆದಿದ್ದ ಜಾಧವ್ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಕೆಲಸ ಮಾಡಿಲ್ಲ. ಇದು ಬಿಜೆಪಿ ಸಂಗ್ರಹಿಸಿರುವ ಜನಭಿಪ್ರಾಯದಲ್ಲಿ ಗೊತ್ತಾಗಿದೆ. ಹಾಗಾಗಿ ಸಂಸದ ಜಾಧವ್ ಬದಲಿಗೆ ಬಸವರಾಜ್ ಮತ್ತಿಮೂಡರನ್ನು ಕಣಕ್ಕಿಳಿಸುವುದು ಒಳಿತು ಎನ್ನುವ ಲೆಕ್ಕಾಚಾರಗಳು ಬಿಜೆಪಿಯಲ್ಲಿ ನಡೆದಿವೆ. ಆದರೆ ತನಗಿಂತ ನನ್ನ ಪತ್ನಿಗೆ ಟಿಕೆಟ್ ಕೊಟ್ಟರೆ ಎದುರಾಳಿ ಯಾರೇ ಆಗಲಿ, ಅವರನ್ನು ಸುಲಭವಾಗಿ ಮಣಿಸುತ್ತೇನೆ ಎಂದು ಶಾಸಕ ಬಸವರಾಜ್ ಮತ್ತಿಮೂಡ್ ಬಿಜೆಪಿ ಹೈಕಮಾಂಡ್​ಗೆ ಸಂದೇಶ ರವಾನೆ ಮಾಡಿದ್ದಾರಂತೆ.

ಮತ್ತಿಮೂಡ್ ಅವರ ಪತ್ನಿ ಜಯಶ್ರೀ ಅಥವಾ ಬಸವರಾಜ್ ಮತ್ತಿಮೂಡ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗುತ್ತಾ?. ಇಲ್ಲ ಹಾಲಿ ಸಂಸದ ಡಾ.ಉಮೇಶ ಜಾಧವ್ ಮತ್ತೊಮ್ಮೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗ್ತಾರಾ? ಅನ್ನೋದ್ರ ಬಗ್ಗೆ ಕಲಬುರಗಿ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಜಯಶ್ರೀ, ಜಾಧವ್
ಜಯಶ್ರೀ, ಜಾಧವ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖರ್ಗೆ ಸೋಲಿಸಿದ್ದ ಜಾಧವ್​​ಗೆ ಈ ಸಲ ಟಿಕೆಟ್ ಡೌಟ್.. ಪತ್ನಿ ಕಣಕ್ಕಿಳಿಸಲು ರೆಡಿ ಅಂದ್ರಂತೆ ಬಿಜೆಪಿಯ ಹಾಲಿ ಶಾಸಕ..!

https://newsfirstlive.com/wp-content/uploads/2024/01/KLB-BJP.jpg

Load More