ತಾಯಿಗೆ ಅನಾರೋಗ್ಯ, ತಂಗಿ ಮದುವೆಗೆ ಬಂದಿದ್ದ ಯೋಧ ಸೇನೆಗೆ ವಾಪಸ್​.. ಭಾವುಕ ಕ್ಷಣ

author-image
Bheemappa
Updated On
ತಾಯಿಗೆ ಅನಾರೋಗ್ಯ, ತಂಗಿ ಮದುವೆಗೆ ಬಂದಿದ್ದ ಯೋಧ ಸೇನೆಗೆ ವಾಪಸ್​.. ಭಾವುಕ ಕ್ಷಣ
Advertisment
  • 20 ವರ್ಷದಿಂದ ಸಿಆರ್​ಪಿಎಫ್​​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ
  • ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ, ಸೇನೆಯಿಂದ ಯೋಧನಿಗೆ ಕರೆ
  • ತಾಯಿ ಅನಾರೋಗ್ಯ, ಸಹೋದರಿ ಮದುವೆಗೆಂದು ಮನೆಗೆ ಬಂದಿದ್ದ ಮಗ

ಭಾರತ ಪಾಕಿಸ್ತಾನ ಮಧ್ಯೆ ಘರ್ಷಣೆ ತಾರಕಕ್ಕೇರಿದೆ. ಪಾಪಿ ಪಾಕ್ ಬಿಟ್ಟಿದ್ದಂತಹ ಮಿಸೈಲ್, ಡ್ರೋಣ್​​ಗಳನ್ನ ಭಾರತ ಹೊಡೆದುರುಳಿಸಿದೆ. ಅಲ್ಲದೆ ಪ್ರತಿದಾಳಿ ಮಾಡಿರುವ ಭಾರತ ಸೇನೆ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದೆ. ಇಂಡೋ- ಪಾಕ್ ನಡುವೆ ಉದ್ವಿಗ್ನತೆ ತೀವ್ರಗೊಳ್ಳುತ್ತಿದ್ದಂತೆ ರಜೆಯಲ್ಲಿ ತಮ್ಮ ಊರಿಗೆ ಬಂದಿದ್ದ ಯೋಧರನ್ನ ಭಾರತೀಯ ಸೇನೆ ವಾಪಸ್ ಕರೆಸಿಕೊಳ್ಳುತ್ತಿದೆ.

publive-image

ತಾಯಿಗೆ ಅನಾರೋಗ್ಯ ಹಾಗೂ ಸಹೋದರಿ ಮದುವೆಗೆಂದು ಭಾರತೀಯ ಸೇನೆಯಿಂದ ರಜೆ ತೆಗೆದುಕೊಂಡು ತವರಿಗೆ ಯೋಧ ಬಂದಿದ್ದರು. ಆದರೆ ಈಗ ಪಾಕಿಸ್ತಾನ ಹಾಗೂ ಭಾರತದ ನಡುವೆ ಘರ್ಷಣೆ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆಗಿಂತ ದೇಶ ಮುಖ್ಯವೆಂದು ಭಾರತದ ಗಡಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ತನ್ನ ಗಂಡನನ್ನು ಕಳುಹಿಸಲು ಬಂದಿದ್ದ ಪತ್ನಿಯ ಕಣ್ಣೀರು ಎಲ್ಲರನ್ನು ಭಾವುಕರನ್ನಾಗಿಸಿದೆ.

ಭಾರತೀಯ ಸೇನೆಯ ಯೋಧ ಕನ್ಯಾಕುಮಾರ್ ಚವ್ಹಾಣ್ ಕಲಬುರಗಿಯ ಅಫಜಲಪುರ ತಾಲೂಕಿನ ಅರ್ಜುಣಗಿ ತಾಂಡಾ ನಿವಾಸಿ. ಕಳೆದ 20 ವರ್ಷದಿಂದ ಸಿಆರ್​ಪಿಎಫ್​​ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೆ ತಿಂಗಳು 19 ರಂದು ಸಹೋದರಿ ಮದುವೆ ಹಾಗೂ ತಾಯಿಯ ಅನಾರೋಗ್ಯ ಎಂದು ಹೇಳಿ 1 ತಿಂಗಳು ರಜೆ ಮೇಲೆ ಮೇ 6 ರಂದು ಕಲಬುರಗಿಗೆ ಆಗಮಿಸಿದ್ದರು. ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿರುವಾಗಲೇ ಭಾರತ ಮತ್ತು ಪಾಕಿಸ್ತಾನ ನಡುವೆ ತೀವ್ರ ಉದ್ವಿಗ್ನತೆ ಏರ್ಪಟ್ಟಿದೆ.

publive-image

ಇದರಿಂದ ರಜೆ ಮೇಲೆ ತವರಿಗೆ ಬಂದಿದ್ದ ಎಲ್ಲ ಯೋಧರನ್ನು ಮತ್ತೆ ಕರ್ತವ್ಯಕ್ಕೆ ಹಾಜರು ಆಗಬೇಕು ಎಂದು ಭಾರತೀಯ ಸೇನೆಯಿಂದ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ಅನಾರೋಗ್ಯಕ್ಕೆ ಒಳಗಾದ ತಾಯಿಯನ್ನು ಬಿಟ್ಟು ಹಾಗೂ ಸಹೋದರಿಯ ಮದುವೆ ಅದ್ಧೂರಿಯಾಗಿ ಮಾಡಬೇಕು ಎಂದುಕೊಂಡಿದ್ದನ್ನು ಬಿಟ್ಟು ಭಾರತದ ಗಡಿ ಕಾವಲಿಗೆ ಯೋಧ ಕನ್ಯಾಕುಮಾರ್ ಚವ್ಹಾಣ್ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಕನ್ಯಾಕುಮಾರ್ ಚವ್ಹಾಣ್ ರಜೆ ತೆಗೆದುಕೊಂಡು ಮನೆಗೆ ಬಂದು ಕೇವಲ 3 ದಿನಗಳು ಆಗಿದ್ದವು ಅಷ್ಟೇ. ಅಷ್ಟರೊಳಗೆ ಸೇನೆಗೆ ವಾಪಸ್ ಆಗುವಂತೆ ಕರೆ ಬಂದಿದೆ. ಮನೆಗೆ ಮಗ ಬಂದಿದ್ದಾನೆ ಅಂತ ಇಡೀ ಕುಟುಂಬ ಸಂತಸದ ಕಡಲಲ್ಲಿತ್ತು. ಪ್ರತಿ ಬಾರಿ ರಜೆ ಮೇಲೆ ಮನೆಗೆ ಯೋಧ ಬಂದಾಗ ಪತ್ನಿ ಕಡೆಯವರು ಖುಷಿ ಖುಷಿಯಿಂದ ಕಳುಹಿಸಿಕೊಡುತ್ತಿದ್ದರು. ಆದರೆ ಭಾರತ ಹಾಗೂ ಪಾಕ್ ನಡುವೆ ಘರ್ಷಣೆಯಿಂದ ಗಂಡನನ್ನು ಭಾವುಕದಿಂದ ಪತ್ನಿ ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ:ಪಾಕ್​ನ 500 ಡ್ರೋಣ್ ಹೊಡೆದುರುಳಿಸಿದ್ದು ಹೇಗೆ..? ಭಾರತದ ರಕ್ಷಣಾ ಮೂಲಗಳಿಂದ ವಿಡಿಯೋ ರಿಲೀಸ್

publive-image

ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಯೋಧನನ್ನು ಕಳುಹಿಸಿಕೊಡುವಾಗ ಪತ್ನಿ ದುಃಖದಿಂದ ಕಣ್ಣೀರು ಸುರಿಸಿದರು. ಪತಿ ಗಡಿ ಕಾಯಲು ಹೋಗುತ್ತಿರುವುದರಿಂದ ಏನಾಗುತ್ತೋ, ಏನಿಲ್ಲ ಅನ್ನೋ ಆತಂಕ ಅವರ ಮುಖದಲ್ಲಿ ಭಾಸವಾಗುತ್ತಿತ್ತು. ಯೋಧನ ಕಡೆಯವರು ಕಣ್ಣೀರು ಹಾಕುವುದನ್ನು ನೋಡಿದ ರೈಲು ನಿಲ್ದಾಣದಲ್ಲಿ ಇದ್ದವರೆಲ್ಲರೂ ಭಾವುಕರಾಗಿದ್ದರು. ಕರ್ತವ್ಯಕ್ಕೆ ತೆರಳಿರುವ ಕಲಬುರಗಿ ಯೋಧ ಜಯಶಾಲಿಯಾಗಿ ಹಿಂದಿರುಗಲಿ ಎನ್ನುವುದು ಎಲ್ಲರ ಆಶಯವಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment