/newsfirstlive-kannada/media/post_attachments/wp-content/uploads/2024/09/kalaburagi-1.jpg)
ಕಲಬುರಗಿ: ಅಣ್ಣನ ಪ್ರೀತಿಗೆ ಒಡಹುಟ್ಟಿದ ತಮ್ಮ ಬಲಿಯಾದ ಘಟನೆ ಕಲಬುರಗಿ ತಾಲ್ಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸುಮಿತ್ ಮಲ್ಲಾಬಾದ್ (18) ಕೊಲೆಯಾದ ವಿದ್ಯಾರ್ಥಿ.
ಸುಮಿತ್ ಮುಂಬೈನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಕಳೆದ ನಾಲ್ಕೈದು ದಿನಗಳ ಹಿಂದೆ ತಾಯಿಯೊಂದಿಗೆ ಕಲಬುರಗಿಗೆ ಆಗಮಿಸಿದ್ದನು.
ಇದನ್ನೂ ಓದಿ: ಬಳ್ಳಾರಿ ಜೈಲಿಗೆ ಕರೆ ಮಾಡಿದ ಮೀನಾ ತೂಗುದೀಪ.. ದರ್ಶನ್​ ಬಳಿ ಏನಂದ್ರು ಗೊತ್ತಾ?
ಸುಮಿತ್ ಕಲಬುರಗಿಯ ನಾಗನಹಳ್ಳಿ ಗ್ರಾಮದಲ್ಲಿ ಕುಟುಂಬಸ್ಥರೊಂದಿಗೆ ಇದ್ದನು. ಆತನ ಸಹೋದರ ಸಚಿನ್ ನಾಗನಹಳ್ಳಿ ಗ್ರಾಮದ ಯುವತಿಯನ್ನು ಪ್ರೀತಿ ಮಾಡುತ್ತಿದ್ದನು. ಹೀಗಾಗಿ ಮದುವೆ ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ಗಲಾಟೆಯಾಗಿದೆ.
ಇದನ್ನೂ ಓದಿ: ನಾಗಮಂಗಲ ಗಲಭೆ ಪ್ರಕರಣದಲ್ಲಿ ಗ್ರಾಮ ತೊರೆದಿದ್ದ ಯುವಕ ಸಾವು.. ಮಗನ ಅಂತ್ಯಕ್ರಿಯೆಗೆ ಜೈಲಿನಿಂದ ಬರಲಿರುವ ತಂದೆ
ಸಚಿನ್ ಮೇಲಿನ ಕೋಪಕ್ಕೆ ಯುವತಿಯ ಕುಟುಂಬಸ್ಥರು ಸುಮಿತ್ ಜೊತೆ ಗಲಾಟೆ ಮಾಡಿದ್ದಾರೆ. ಗಲಾಟೆಯಲ್ಲಿ ಸುಮಿತ್ ತಾಯಿ ಮೇಲೆ ನಾಲ್ಕೈದು ಜನರ ಗುಂಪು ಹಲ್ಲೆ ಮಾಡಿದ್ದಾರೆ. ತಾಯಿಯನ್ನ ದೂರ ಇರುವಂತೆ ಹೇಳಿದ ತಕ್ಷಣ ಸುಮಿತ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us