newsfirstkannada.com

×

ಸೆಕ್ಯೂರಿಟಿ ಕೆಲಸದ ಬದಲಾಗಿ ಯುದ್ಧಭೂಮಿಯಲ್ಲಿ ಕೆಲಸ.. ರಷ್ಯಾದಲ್ಲಿ ಸಿಲುಕಿಕೊಂಡಿದ್ದ ಕಲಬುರಗಿಯ ಮೂವರು ಕೊನೆಗೂ ವಾಪಸ್

Share :

Published September 15, 2024 at 7:52am

    ಸೆಕ್ಯೂರಿಟಿ ಕೆಲಸಕ್ಕೆಂದು ರಷ್ಯಾಗೆಗೆ ಹೋಗಿದ್ದ ಕನ್ನಡಿಗರು

    ಯುವಕರನ್ನು ಯುದ್ಧ ಭೂಮಿಯಲ್ಲಿ ಸೈನ್ಯಕ್ಕೆ ಬಳಸಿಕೊಂಡಿದ್ದ ರಷ್ಯಾ

    ತಾಯ್ನಾಡಿಗೆ ಮರಳಿ ಬಂದ ಒಟ್ಟು ಆರು ಜನ ಭಾರತೀಯರು

ಕಲಬುರಗಿ: ರಷ್ಯಾದಲ್ಲಿ ಸಿಲುಕಿಕೊಂಡಿದ್ದ ಕಲಬುರಗಿಯ ಮೂವರು ಯುವಕರು ವಾಪಸ್ಸಾಗಿದ್ದಾರೆ. ಒಟ್ಟು ಆರು ಜನ ಭಾರತೀಯರು ತಾಯ್ನಾಡಿಗೆ ಹಿಂತಿರುಗಿ ಬಂದಿದ್ದಾರೆ.

ಕಲಬುರಗಿ ನಗರದ ನೂರಾನಿ ಮೊಹಲ್ಲಾ ನಿವಾಸಿ ಸೈಯದ್ ಇಲಿಯಾಸ್ ಹುಸೇನಿ, ಇಸ್ಲಾಮಬಾದ ಕಾಲನಿ ನಿವಾಸಿ ಮೊಹಮ್ಮದ್​​ ಸಮೀರ್, ಮಿಜಗುರಿ ಪ್ರದೇಶದ ಮೊಹಮ್ಮದ್ ನಯೂಮ್ ವಾಪಸ್ ಆದ ಯುವಕರು. ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಭೇಟಿ ನೀಡಿ ವಾಪಸ್ ಆದ ಕೆಲವೇ ದಿನದಲ್ಲಿ ಯುವಕರು ವಾಪಸ್ ಆಗಿದ್ದಾರೆ.

ಯುದ್ಧಭೂಮಿಯಲ್ಲಿ ಕೆಲಸ

ಮುಂಬೈ ಮೂಲದ ಏಜೆಂಟ್​ ಒಬ್ಬನನ್ನು ವೆಬ್‌ಸೈಟ್​ ನಲ್ಲಿ ಪರಿಚಯವಾಗಿ ಬಳಿಕ ಕೆಲಸಕ್ಕಾಗಿ ರಷ್ಯಾಗೆ ಯುವಕರು ತೆರಳಿದ್ದರು. ರಷ್ಯಾದಲ್ಲಿ ಸೆಕ್ಯೂರಿಟಿ ಕೆಲಸ ಕೋಡಿಸುವುದಾಗಿ ಏಜೆಂಟ್ ಕಳುಹಿಸಿದ್ದರು. ಆದ್ರೆ ರಷ್ಯಾ ಸೆಕ್ಯೂರಿಟಿ ಕೆಲಸದ ಬದಲಾಗಿ ಯುವಕರನ್ನ ಯುದ್ಧ ಭೂಮಿಯಲ್ಲಿ ಸೈನ್ಯಕ್ಕೆ ಬಳಸಿಕೊಂಡಿತ್ತು.

ಇದನ್ನೂ ಓದಿ: ಬಸವಣ್ಣನ ನಾಡಲ್ಲೇ ಅಸ್ಪೃಶ್ಯತೆ ಜೀವಂತ! ದೇಗುಲ ಪ್ರವೇಶಿಸಿದ ದಲಿತ ಯುವಕನಿಗೆ ಕಂಬಕ್ಕೆ ಕಟ್ಟಿ ಥಳಿತ

ಇತ್ತ ಯುವಕರು ಯುದ್ದಕ್ಕೆ ಬಳಸಿಕೊಳ್ಳಲಾಗ್ತಿದೆ ಅಂತಾ ವಿಡಿಯೋ ಮಾಡಿ ರಕ್ಷಣೆಗಾಗಿ ಬೇಡಿಕೊಂಡಿದ್ದರು. ಸೈನ್ಯದಲ್ಲಿ ಬಂಕರ್‌ಗಳನ್ನು ಅಗೆಯುವ ಕೆಲಸ ಹಚ್ಚಿದ್ದಾರೆ ಅಂತ ವಿಡಿಯೋ ಮಾಡಿ ಕಷ್ಟ ತೋಡಿಕೊಂಡಿದ್ದರು.

ಇದನ್ನೂ ಓದಿ: ಜೀವಬೆದರಿಕೆ, ಜಾತಿನಿಂದನೆ? 36 ಲಕ್ಷ ಹಣಕ್ಕೆ ಬೇಡಿಕೆ? ಮುನಿರತ್ನಗೆ ಮುಕ್ತಿ ಸಿಗೋದು ಕಷ್ಟವೇ?

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಯುವಕರನ್ನು ಮರಳಿ ತರುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು. ಅದರಂತೆ ಇದೀಗ ಕಲಬುರಗಿಯ ಮೂವರು ಯುವಕರು ವಾಪಸ್ಸಾಗಿದ್ದಾರೆ. ಮಕ್ಕಳು ಮನೆಗೆ ವಾಪಸ್ ಬರುತ್ತಿದ್ದಂತೆ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೆಕ್ಯೂರಿಟಿ ಕೆಲಸದ ಬದಲಾಗಿ ಯುದ್ಧಭೂಮಿಯಲ್ಲಿ ಕೆಲಸ.. ರಷ್ಯಾದಲ್ಲಿ ಸಿಲುಕಿಕೊಂಡಿದ್ದ ಕಲಬುರಗಿಯ ಮೂವರು ಕೊನೆಗೂ ವಾಪಸ್

https://newsfirstlive.com/wp-content/uploads/2024/09/kalaburagi.jpg

Load More