ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಹತ್ವದ ಉದ್ಯೋಗ.. ಯಾರ್ ಯಾರಿಗೆ ಅವಕಾಶ ಇದೆ?

author-image
Bheemappa
Updated On
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಹತ್ವದ ಉದ್ಯೋಗ.. ಯಾರ್ ಯಾರಿಗೆ ಅವಕಾಶ ಇದೆ?
Advertisment
  • ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದ ಉನ್ನತ ಶಿಕ್ಷಣ ಇಲಾಖೆ
  • ನೈತಿಕ ಮೌಲ್ಯಗಳು ಹಾಗೂ ಸಾಂಸ್ಥಿಕ ಬದ್ಧತೆ ಹೊಂದಿರಬೇಕು
  • ಅರ್ಜಿ ಸಲ್ಲಿಕೆ ಮಾಡಬೇಕಾದ ವಿಳಾಸ, ಇತ್ಯಾದಿ ಮಾಹಿತಿ ಇದೆ

ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಯ ಹುದ್ದೆಗೆ ಪ್ರಾಧ್ಯಾಪಕರು ಹಾಗೂ ಶಿಕ್ಷಣ ತಜ್ಞರುಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ- 2000 ಪ್ರಕರಣ 14(2)ರ ಉಪಬಂಧಗಳ ಅನುಸಾರ ನೇಮಕಾತಿ ಮಾಡಲಾಗುತ್ತಿದೆ.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಯ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಈ ಕೆಳಗೆ ಕೊಟ್ಟಿರುವ ಅರ್ಹತೆಗಳನ್ನು ಒಳಗೊಂಡಿರಬೇಕು. ಅಂತವರು ಮಾತ್ರ ಈ ಕೆಲಸಕ್ಕೆ ಅರ್ಜಿ ಸಲ್ಲಿಕೆ ಮಾಡಲು ಸೂಕ್ತ ಆಗಿರುತ್ತಾರೆ.

  • ಉನ್ನತ ಮಟ್ಟದ ಆಡಳಿತ, ಶೈಕ್ಷಣಿಕ ಹಾಗೂ ಸಂಶೋಧನಾ ಸಾಮರ್ಥ್ಯ, ಪ್ರಾಮಾಣಿಕತೆ. ಸಮಗ್ರತೆ/ ರುಜುತ್ವ ನೈತಿಕ ಮೌಲ್ಯಗಳನ್ನು ಹಾಗೂ ಸಾಂಸ್ಥಿಕ ಬದ್ಧತೆ ಹೊಂದಿರಬೇಕು.
  • ವಿಶ್ವವಿದ್ಯಾಲಯಗಳಲ್ಲಿ ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಕೆ ಮಾಡಿರಬೇಕು.
  • ಯಾವುದೇ ಕ್ರಿಮಿನಲ್​ ವಿಚಾರಣೆಗಳು ಬಾಕಿ ಇರಬಾರದು. ಕಳಂಕಿತ ಸೇವೆಯನ್ನು ಹೊಂದಿರಬಾರದು. ನೇಮಕಾತಿ ವಿವಾದಗಳನ್ನು ಅರ್ಜಿ ಸಲ್ಲಿಕೆ ಮಾಡುವವರು ಹೊಂದಿರಬಾರದು.
  • ಹುದ್ದೆಗೆ ಆಯ್ಕೆ ಆದವರನ್ನು 4 ವರ್ಷಗಳು ಅಥವಾ 67 ವರ್ಷಗಳ ವಯಸ್ಸಾಗುವವರೆಗೆ ಇದರಲ್ಲಿ ಯಾವುದು ಮೊದಲು ಅಲ್ಲಿವರೆಗೆ ಹುದ್ದೆಯಲ್ಲಿ ಇರುತ್ತಾರೆ.

publive-image

ಇದನ್ನೂ ಓದಿ:ಕರ್ನಾಟಕ ವಿಶ್ವವಿದ್ಯಾಲಯ; ಮಹತ್ವದ ಹುದ್ದೆಗೆ ಅರ್ಜಿ ಆಹ್ವಾನ.. ಅರ್ಹತೆಗಳು ಏನೇನು ಇವೆ?

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯ ನೇಮಕಾತಿ ಸಲ್ಲಿಸ ಬಯಸುವ ಆಸಕ್ತರು, ತಮ್ಮ ವಿದ್ಯಾರ್ಹತೆ, ಸಂಶೋಧನೆ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅನುಭವಗಳು ಸಾಧನೆಗಳು ಹಾಗೂ ಇತರೆ ವಿವರಗಳನ್ನು ಯುಜಿಸಿಯಿಂದ ನಿಗದಿ ಪಡಿಸಲಾಗಿರುವ ನಮೂನೆಯಲ್ಲಿ ಭರ್ತಿ ಮಾಡಬೇಕು. ಬಳಿಕ ಮುದ್ರಿತ ಅರ್ಜಿಗಳನ್ನು ತ್ರಿಪ್ರತಿಗಳಲ್ಲಿ (3 ಅರ್ಜಿ ಸೆಟ್​ಗಳು) ಸಲ್ಲಿಕೆ ಮಾಡಬೇಕು. ಈ ಹುದ್ದೆಯ ಪ್ರಕಟಣೆ ಆದ 30 ದಿನದ ಒಳಗೆ ಅಂದರೆ ಫೆಬ್ರುವರಿ 28ರ ಒಳಗೆ ಅಪ್ಲೇ ಮಾಡಬೇಕು.

ಅರ್ಜಿ ಸಲ್ಲಿಕೆ ಮಾಡುವ ವಿಳಾಸ-

ಸರ್ಕಾರದ ಪ್ರಧಾನ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ, ಗೇಟ್​ ನಂಬರ್ 03, 6ನೇ ಮಹಡಿ, ಕೊಠಡಿ ಸಂಖ್ಯೆ- 601, (ಸ್ವೀಕೃತಿ ಮತ್ತು ರವಾನೆ ಶಾಖೆ) ಬಹುಮಹಡಿಗಳ ಕಟ್ಟಡ, ಬೆಂಗಳೂರು- 560001.

ಪಿಡಿಎಫ್ ದಾಖಲೆ ಇದ್ದರೇ ಇಮೇಲ್ ಮಾಡಬಹುದು. ಒಂದು ಪ್ರತಿ ಅರ್ಜಿ ಸಲ್ಲಿಕೆ ಮಾಡಿದರೆ ಸಾಕು- E-Mail- [email protected]

ಅರ್ಜಿ ಪ್ರತಿ ಹಾಗೂ ಸಂಪೂರ್ಣ ಮಾಹಿತಿ ಈ ಲಿಂಕ್​​ನಲ್ಲಿದೆ-https://hed.karnataka.gov.in/storage/pdf-files/Gulbarga.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment