newsfirstkannada.com

ಸೆಂಟ್ರಲ್ ಜೈಲ್​​ನಲ್ಲಿ 150 ಗ್ರಾಂ ಗಾಂಜಾಕ್ಕಾಗಿ ಗಲಾಟೆ! ಸಿಬ್ಬಂದಿ ಹಾಗೂ ವಿಚಾರಣಾಧೀನ ಖೈದಿ ಮಧ್ಯೆ ವಾಗ್ವಾದ

Share :

Published January 16, 2024 at 5:45pm

Update January 16, 2024 at 5:47pm

    ಸೆಂಟ್ರಲ್ ಜೈಲೊಳಗೆ ಬಿದ್ದಿದ್ದ 150 ಗ್ರಾಂ ಗಾಂಜಾ

    ಅಪರಿಚಿತ ವ್ಯಕ್ತಿಗಳು ಎಸೆದಿದ್ದ ಎರಡೂ ಪ್ಯಾಕೆಟ್ ಗಾಂಜಾ

    ಗಾಂಜಾ ಬೇಕು ಅಂತ ವಿಚಾರಣಾಧೀನ ಖೈದಿಯಿಂದ ಗಲಾಟೆ

ಕಲಬುರಗಿ: ಸೆಂಟ್ರಲ್ ಜೈಲ್ ನಲ್ಲಿ ಗಾಂಜಾಕ್ಕಾಗಿ ಗಲಾಟೆ ನಡೆದಿದೆ. 150 ಗ್ರಾಂ ಗಾಂಜಾಗಾಗಿ ಜೈಲು ಸಿಬ್ಬಂದಿ ಹಾಗೂ ವಿಚಾರಣಾಧೀನ ಖೈದಿಯ ಮಧ್ಯೆ ವಾಗ್ವಾದವಾಗಿದೆ.

ಜೈಲೊಳಗೆ ಬಿದ್ದಿದ್ದ 150 ಗ್ರಾಂ ಗಾಂಜಾ ವಶಪಡಿಸಿಕೊಳ್ಳುವಾಗ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಗಳು ಎರಡೂ ಪ್ಯಾಕೆಟ್ ಗಾಂಜಾ ಎಸೆದಿದ್ದರು. ಪ್ಯಾಕೆಟ್ ತೆಗೆದು ನೋಡಿದ್ರೆ 150 ಗ್ರಾಂ ಗಾಂಜಾ, ಎರಡು ಮೊಬೈಲ್ ಸಿಕ್ಕಿದೆ. ಈ ವೇಳೆ ವಿಚಾರಣಾಧೀನ ಖೈದಿ ಶಾಹೀದ್ ಖುರೇಷಿಯಿಂದ ಗಲಾಟೆ ನಡೆದಿದೆ. ಗಾಂಜಾ ಬೇಕು ಅಂತ ಗಲಾಟೆ ಮಾಡಿದ್ದಾನೆ.

ಎಲ್ಲಿಂದ ಬಂತು ಗಾಂಜಾ?

ಇನ್ನು ಈ ಬಗ್ಗೆ ಫರತಹಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಇಷ್ಟೊಂದು ಬಿಗಿ ಭದ್ರತೆ ಇದ್ರು ಜೈಲೊಳಗೆ ಗಾಂಜಾ ಬಂದಿದ್ದು ಹೇಗೆ? ಎಂಬ ಹೊಸ ಚರ್ಚೆ ಹುಟ್ಟಿಕೊಂಡಿದೆ.

ಇದಲ್ಲದೆ, ಜೈಲು ಭದ್ರತೆಗಿದ್ದ ಕೆಎಸ್ಐಎಸ್ ಏಫ್ ಅಧಿಕಾರಿಗಳು ಏನ್ ಮಾಡ್ತಿದ್ದರು?. ಜೈಲಿನೊಳಕ್ಕೆ ಓರ್ವ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಭದ್ರತಾ ಪಡೆ ಇದ್ದು, ಜೈಲು ಸುತ್ತ ಕಣ್ಗಾವಲಿದೆ. ಆದರೂ ಜೈಲೊಳಗೆ ಗಾಂಜಾ ಎಸೆದಿದ್ದು ಯಾರು? ಎಂಬ ಅನುಮಾನ ಕಾಡಿದೆ.

ಸಿಬ್ಬಂದಿಗಳು ಕೆಎಸ್ ಐಎಸ್ ಎಫ್ ಇನ್ಸಪೆಕ್ಟರ್ ವಿರುದ್ದ ದೂರುತ್ತಿದ್ದು, ಅವರೇ ಲಂಚ ತೆಗೆದುಕೊಂದು ನಿಷೇಧೀತ ವಸ್ತು ಸರಬರಾಜು ಮಾಡ್ತಾರೆ ಅಂತ ಸಿಬ್ಬಂದಿಗಳು ಪತ್ರ ಬರೆದಿದ್ದಾರೆ. ಇಲಾಖೆ ತನಿಖೆ ಮಾಡ್ತಿದ್ದಿವಿ ಎಂದು ಹೇಳಿ ಸುಮ್ಮನೆ ಕುಳಿತಿದೆ ಎಂದು ಸಿಬ್ಬಂದಿಗಳು ಗಂಭೀರ ಆರೋಪ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೆಂಟ್ರಲ್ ಜೈಲ್​​ನಲ್ಲಿ 150 ಗ್ರಾಂ ಗಾಂಜಾಕ್ಕಾಗಿ ಗಲಾಟೆ! ಸಿಬ್ಬಂದಿ ಹಾಗೂ ವಿಚಾರಣಾಧೀನ ಖೈದಿ ಮಧ್ಯೆ ವಾಗ್ವಾದ

https://newsfirstlive.com/wp-content/uploads/2024/01/Kalburagi.jpg

Load More