newsfirstkannada.com

ಹಳಿ ದಾಟುವಾಗ ದುರಂತ.. ಎಕ್ಸ್‌ಪ್ರೆಸ್‌ ರೈಲು ಹರಿದು ಸ್ಥಳದಲ್ಲೇ ನಾಲ್ವರು ಸಾವು

Share :

Published January 19, 2024 at 7:55am

  ದೇಶದಲ್ಲಿ ಮತ್ತೊಂದು ರೈಲು ದುರಂತ ಪ್ರಕರಣ

  ಕಳಿಂಗ ಪುರಿ ಉತ್ಕಲ್ ಎಕ್ಸ್‌ಪ್ರೆಸ್​​ ರೈಲು ಡಿಕ್ಕಿ

  ನಿನ್ನೆ ಸಂಜೆ 6.55ರ ಸುಮಾರಿಗೆ ದುರ್ಘಟನೆ

ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ನಾಲ್ವರು ಜಮ್ಶೆಡ್‌ಪುರದ ಗಮ್ಹಾರಿಯಾದಲ್ಲಿ ರೈಲು ಹಳಿ ದಾಟಲು ಪ್ರಯತ್ನಿಸುತ್ತಿದ್ದರು.

ಈ ವೇಳೆ ಕಳಿಂಗ ಪುರಿ ಉತ್ಕಲ್ ಎಕ್ಸ್‌ಪ್ರೆಸ್‌ (Puri-bound Utkal Express ) ಬಂದು ಡಿಕ್ಕಿ ಹೊಡೆದಿದೆ, ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಮೃತದೇಹಗಳೆಲ್ಲ ರೈಲು ಹಳಿ ಮೇಲೆ ಚೆಲ್ಲಾಪಿಲ್ಲಿಯಾಗಿವೆ ಎನ್ನಲಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಪಶೀಲನೆ ನಡೆಸಿದ್ದಾರೆ. ತನಿಖೆ ಶುರುವಾಗಿದೆ.

ನಿನ್ನೆ ಸಂಜೆ 6.55ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ವಿಚಾರ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಹಾಗೂ ರೈಲ್ವೇ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಾಯಗೊಂಡಿರೊರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಳಿ ದಾಟುವಾಗ ದುರಂತ.. ಎಕ್ಸ್‌ಪ್ರೆಸ್‌ ರೈಲು ಹರಿದು ಸ್ಥಳದಲ್ಲೇ ನಾಲ್ವರು ಸಾವು

https://newsfirstlive.com/wp-content/uploads/2024/01/TRAIN-9.jpg

Load More