ರಿಲೀಸ್​ಗೂ ಮೊದಲೇ ಕೋಟಿ ಕೋಟಿ ಗಳಿಸಿದ Kalki 2898 AD; ಹತ್ತು, ಇಪ್ಪತ್ತು ಕೋಟಿ ಅಲ್ಲವೇ ಅಲ್ಲ..!

author-image
Ganesh
Updated On
Kalki 2898 AD: ಅಬ್ಬಬ್ಬಾ! ಪ್ರಭಾಸ್​ ಕಲ್ಕಿ ಸಿನಿಮಾದ 3ನೇ ದಿನದ ಕಲೆಕ್ಷನ್​ ಎಷ್ಟು ಕೋಟಿ ಗೊತ್ತಾ?
Advertisment
  • ನಾಳೆ ವಿಶ್ವದಾದ್ಯಂತ ಕಲ್ಕಿ ಚಿತ್ರ ತೆರೆ ಮೇಲೆ ಅಪ್ಪಳಿಸಲಿದೆ
  • ಮೊದಲ ದಿನ ಬರೋಬ್ಬರಿ 200 ಕೋಟಿ ನಿರೀಕ್ಷೆ ಇದೆ
  • ಟೆಕೆಟ್​ಗಳು ಸೋಲ್ಡ್​ ಔಟ್​, ಎಷ್ಟು ಕಲೆಕ್ಷನ್ ಆಗಿದೆ..?

ಸಿನಿ ರಸಿಕರಲ್ಲಿ ಕಲ್ಕಿ 2898 AD ಕುರಿತ ಕ್ರೇಜ್ ಹೆಚ್ಚಾಗಿದೆ. ಚಿತ್ರದ ಟ್ರೇಲರ್ ನೋಡಿದ ಫ್ಯಾನ್ಸ್​ಗೆ ತಮ್ಮ ನಿರೀಕ್ಷೆಗಳು ದುಪ್ಪಟ್ಟಾಗಿದ್ದು, ನಾಳೆ ಥಿಯೇಟರ್​​ಗಳಲ್ಲಿ ಕಣ್ತುಂಬಿಕೊಳ್ಳಲಿದ್ದಾರೆ. ಹೀಗಾಗಿ ಟಿಕೆಟ್ ಮುಂಗಡ ಬುಕ್ಕಿಂಗ್ ಜೋರಾಗಿದೆ.

ವರದಿಗಳ ಪ್ರಕಾರ.. ಕಲ್ಕಿ 2898 ಎಡಿ ಮುಂಗಡ ಬುಕ್ಕಿಂಗ್​ನಲ್ಲೇ ನಿರೀಕ್ಷೆಗೂ ಮೀರಿ ಆದಾಯಗಳಿಸುತ್ತಿದೆ. ಈಗಾಗಲೇ ಬುಕ್ಕಿಂಗ್​ನಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಹಣ ಗಳಿಸಿದೆ. 31.11 ಕೋಟಿ ರೂಪಾಯಿ ಹಣವನ್ನು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಚಿತ್ರವನ್ನು ಮೊದಲ ದಿನ ವೀಕ್ಷಣೆಗಾಗಿ ಸುಮಾರು 11 ಲಕ್ಷದ 30 ಸಾವಿರದ 763 ಟಿಕೆಟ್‌ಗಳು ಮಾರಾಟ ಆಗಿವೆ. ಮೊದಲ ದಿನ ಚಿತ್ರವು 200 ಕೋಟಿ ರೂಪಾಯಿ ಗಳಿಕೆಯೊಂದಿಗೆ ಓಪನಿಂಗ್ ಪಡೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ:ಹಿರಿಯರಿಗೆ ಕೊಕ್, ಗಿಲ್ ಕ್ಯಾಪ್ಟನ್.. ಇದು ನಿವೃತ್ತಿ ಕೇಳುವ ಮುನ್ಸೂಚನೆ.. ಪಾಂಡ್ಯ, ಪಂತ್​ಗೂ ಪರೋಕ್ಷ ಎಚ್ಚರಿಕೆ..

‘ಕಲ್ಕಿ 2898 AD’ ಚಿತ್ರದ ‘ಥೀಮ್ ಆಫ್ ಕಲ್ಕಿ’ಯನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಎರಡು ಹಾಡುಗಳು ಕೂಡ ರಿಲೀಸ್ ಆಗಿದೆ. ‘ಕಲ್ಕಿ 2898 AD’ ಒಂದು ವೈಜ್ಞಾನಿಕ ಕಾಲ್ಪನಿಕ ಚಿತ್ರ. ಚಿತ್ರವು ಭಾರತೀಯ ಪುರಾಣಗಳಿಂದ ಪ್ರೇರಿತವಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಭೈರವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಪೇಪರ್​ ವರ್ಕ್​ ಶುರು ಮಾಡಿದ ಮತ್ತೊಂದು ಟೀಂ.. ದರ್ಶನ್ ಗ್ಯಾಂಗ್​ನ ಮತ್ತಷ್ಟು ಕ್ರೂರತ್ವ ಬಯಲಾದ್ರೂ ಅಚ್ಚರಿ ಇಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment