/newsfirstlive-kannada/media/post_attachments/wp-content/uploads/2024/07/Kalki-2898-AD-1000-Crore.jpg)
ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾ ಕಳೆದ ಜೂನ್ 27ರಂದು ವಿಶ್ವಾದ್ಯಂತ ರಿಲೀಸ್ ಆಗಿತ್ತು. ಕಲ್ಕಿ 2898 ಎಡಿ ರಿಲೀಸ್ ಆದ ಮೊದಲ ದಿನದಿಂದ ಈಗಿನವರೆಗೂ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಇಂದು ಕಲ್ಕಿ ಸಿನಿಮಾ ಬಾಕ್ಸ್ ಆಫೀಸ್ ಧೂಳಿಪಟ ಮಾಡಿ ರೆಕಾರ್ಡ್ ಬ್ರೇಕ್ ಮಾಡಿದೆ.
ಇದನ್ನೂ ಓದಿ: ಕಲ್ಕಿ OTTಗೆ ಬರಲು ವೇದಿಕೆ ರೆಡಿ.. ಬಿಗ್ ಬಜೆಟ್ ಸಿನಿಮಾ ಬರೋದು ಯಾವಾಗ..?
14 ದಿನ.. ಸಾವಿರ ಕೋಟಿ ಕಲೆಕ್ಷನ್!
ಕೇವಲ 14 ದಿನಗಳಲ್ಲಿ ಪ್ರಭಾಸ್ ಅಭಿನಯದ ಕಲ್ಕಿ 2898 ಎಡಿ ಸಿನಿಮಾ ಸಾವಿರ ಕೋಟಿ ಕಲೆಕ್ಷನ್ ಮಾಡಿದೆ. ಈ ಕುರಿತು ಅಧಿಕೃತ ಅನೌನ್ಸ್‌ಮೆಂಟ್ ಮಾಡಲಾಗಿದೆ. ಈ ಮೈಲಿಗಲ್ಲಿಗೆ ಕಲ್ಕಿ ಚಿತ್ರತಂಡ ಇಡೀ ವಿಶ್ವದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದೆ. ಕಲ್ಕಿ ಸಿನಿಮಾದ 1000 ಕೋಟಿ ಕಲೆಕ್ಷನ್ ಪ್ರಭಾಸ್ ಹಿರಿಮೆಗೆ ಮತ್ತೊಂದು ಗರಿ ಎನ್ನಲಾಗಿದೆ.
ಇದರೊಟ್ಟಿಗೆ ಇನ್ನೂ ಕೂಡ ಕಲ್ಕಿ ಸಿನಿಮಾದ ಪ್ರದರ್ಶನ ಯಶಸ್ವಿಯಾಗಿ ಸಾಗುತ್ತಿದ್ದು, ಮತ್ತಷ್ಟು ಕೋಟಿ ಕೊಳ್ಳೆ ಹೊಡೆಯುವ ಸೂಚನೆ ಕೊಟ್ಟಿದೆ. ಇಷ್ಟರಲ್ಲೇ ಕಲ್ಕಿ 2 ಶೂಟಿಂಗ್ ಆರಂಭಿಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.
ಬಾಹುಬಲಿ ಪ್ರಭಾಸ್, ಬಿಗ್ ಬೀ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾಣಿ ಈ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ. ‘ಕಲ್ಕಿ’ ಪೌರಾಣಿಕ ಕತೆಯ ಜೊತೆಗೆ ಭವಿಷ್ಯದ ಕತೆ ಒಳಗೊಂಡಿರುವುದು ಮೂವಿಯ ಹೈಲೈಟ್ ಆಗಿದೆ. ನಾಗ್ ಅಶ್ವಿನ್ ಅವರು ಈ ಸಿನಿಮಾ ಡೈರೆಕ್ಟ್ ಮಾಡಿದ್ದು ಇವರ ಮಾವ ಅಶ್ವಿನ್ ದತ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಕಲ್ಕಿ ಕಥೆ ಏನು?
ಕಲಿಯುಗದ ಅಂತ್ಯ ಹಾಗೂ ಕಲ್ಕಿ ಆಗಮನದ ನಡುವೆ ನಡೆಯೋ ಕಥೆಯೇ ಕಲ್ಕಿ 2898 AD ಸಿನಿಮಾ. ಅಶ್ವತ್ಥಾಮ ಇಡೀ ಚಿತ್ರದ ಪ್ರಮುಖ ಕಥಾಹಂದರ. ಅಶ್ವತ್ಥಾಮ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅಮೋಘವಾಗಿ ಅಭಿನಯಿಸಿದ್ದಾರೆ. ಇಡೀ ಚಿತ್ರಕ್ಕೆ ಅಮಿತಾಭ್ ಬಚ್ಚನ್ ಅವರೇ ದೊಡ್ಡ ಶಕ್ತಿ ಕಾಣಿಸಿದ್ದಾರೆ.
ಇದನ್ನೂ ಓದಿ: Kalki 2898 AD Review: ಹಾಲಿವುಡ್ ರೇಂಜ್ ಮೇಕಿಂಗ್; ಪ್ರಭಾಸ್ ‘ಕಲ್ಕಿ’ಗೆ ಸಿಕ್ಕ ರೇಟಿಂಗ್ ಎಷ್ಟು?
ಅದ್ಭುತ ಆ್ಯಕ್ಷನ್ ಸೀನ್‌ಗಳು!
ಕಲ್ಕಿ ಸಿನಿಮಾದಲ್ಲಿ ಪ್ರಮುಖವಾಗಿ ಮಾನವ ಸಮಾಜವನ್ನು ಮೀರಿದ ಲೋಕವನ್ನು ಪ್ರೇಕ್ಷಕರ ಮುಂದೆ ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಪಾತ್ರಗಳ ಗೆಟಪ್, ಅವರು ಬಳಸುವ ವಾಹನಗಳೆಲ್ಲವೂ ವಿಶೇಷವಾಗಿದೆ. ಆ್ಯಕ್ಷನ್ ಸೀನ್‌ಗಳಂತೂ ಬೇರೆ ಲೆವೆಲ್‌ನಲ್ಲಿ ಮೂಡಿ ಬಂದಿದೆ. ನಿರ್ದೇಶಕರ ಕಲ್ಪನೆ ಹಾಗೂ ಅದನ್ನ ತೆರೆ ಮೇಲೆ ತಂದಿರುವ ರೀತಿ ಒಂಥರಾ ಸಾಧನೆಯೇ ಸರಿ. ಒಟ್ಟಿನಲ್ಲಿ ಕಲ್ಕಿ ನೋಡಿದ ಅಭಿಮಾನಿಗಳಿಗೆ ಥೇಟ್ ಹಾಲಿವುಡ್ ಸಿನಿಮಾಗಳಲ್ಲಿ ನೋಡುವ ಸೀನ್‌ಗಳು ಕಣ್ಮುಂದೆ ಬಂದಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ