/newsfirstlive-kannada/media/post_attachments/wp-content/uploads/2024/06/RAJMOULI_PRABHAS.jpg)
ಡಾರ್ಲಿಂಗ್ ಪ್ರಭಾಸ್ ಅಭಿನಯದ ಕಲ್ಕಿ ಮೂವಿ ಇಂದು ವಿಶ್ವದ್ಯಾಂತ ರಿಲೀಸ್ ಆಗಿದೆ. ಸಿನಿ ರಸಿಕರಲ್ಲಿ ಕಲ್ಕಿ 2898 AD ಕ್ರೇಜ್ ಹೆಚ್ಚಾಗಿದ್ದು ಸಿನಿಮಾ ಚೆನ್ನಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಥಿಯೇಟರ್ಗಳು ಹೌಸ್ಫುಲ್ ಆಗುತ್ತಿದ್ದು ಮೂವಿಯಲ್ಲಿ ದಿಗ್ಗಜ ನಟರ ನಟನೆ ಅದ್ಭುತವಾಗಿ ಎನ್ನಲಾಗ್ತಿದೆ. ಇದರ ಜೊತೆಗೆ ಇನ್ನೊಂದು ವಿಶೇಷ ಎಂದರೆ, ಬಾಹುಬಲಿ ಸಿನಿಮಾದಂಥ ಹಿಟ್ ಮೂವಿ ಮಾಡಿದ ಸ್ಟಾರ್ ಡೈರೆಕ್ಟರ್ ರಾಜಮೌಳಿ ಕೂಡ ಕಲ್ಕಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಜಸ್ಟ್ ಗುರಾಯಿಸಿದ್ಕೆ.. ಬಿಯರ್ ಬಾಟಲ್ಗಳಿಂದ ತಲೆಗೆ ಹೊಡೆದು ವ್ಯಕ್ತಿಯ ಭೀಕರ ಕೊಲೆ
ಪ್ಯಾನ್ ಇಂಡಿಯಾ ಮೂವಿ ಕಲ್ಕಿ 2898 AD ವಿಶ್ಯದಾದ್ಯಂತ ರಿಲೀಸ್ ಆಗಿದ್ದು ಸಿನಿಮಾ ಬಗ್ಗೆ ಭರ್ಜರಿ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬರುತ್ತಿದೆ. ಕಲ್ಕಿಯಲ್ಲಿ ಪ್ರಭಾಸ್ ಜೊತೆ ಒಂದು ಸೀನ್ನಲ್ಲಿ ಸ್ಟಾರ್ ನಿರ್ದೇಶಕ ರಾಜಮೌಳಿಯವರು ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್, ರಾಜಮೌಳಿಯವರು ವಾಹನವೊಂದರಲ್ಲಿ ಪ್ರಯಾಣಿಸುತ್ತಿರುತ್ತಾರೆ. ಈ ವೇಳೆ ರಾಜಮೌಳಿ ನನ್ನತ್ರ ಕೆಲಸ ಮಾಡುತ್ತೀಯಾ ಎಂದು ತಪ್ಪಿಸಿಕೊಂಡು ಹೋಗಿದ್ದೀಯಾ? ಎಷ್ಟು ದಿನ ತಪ್ಪಿಸಿಕೊಂಡು ಓಡಾಡ್ತೀಯಾ ಎಂದು ಕೇಳುತ್ತಾರೆ. ಇದಕ್ಕೆ ಸಾಂಗ್ಗಳೇ ಅಲ್ವಾ ಮಾಡಿಕೊಡುತ್ತೇನೆ ಅಂತ ಪ್ರಭಾಸ್ ಹೇಳುತ್ತಾರೆ. ಇದಕ್ಕೆ ರಾಜಮೌಳಿ ಹಾಡುಗಳಿಗಾಗಿ ನಾನು ನಾ ಬಂದಿಲ್ಲ. ನೀನಗಾಗಿ ಬಂದಿದ್ದೇನೆ. ಎ.. ಭೈರವ ಮತ್ತೆ ಸಿಗ್ತಿಯಲ್ಲ, ಆವಾಗ 10 ವರ್ಷ ಹಾಕಿ ತುಳಿಯುತ್ತೇನೆ ಅಂತ ಹೇಳುತ್ತಾರೆ.
ಇದನ್ನೂ ಓದಿ: Kalki 2898 AD: ತೆರೆ ಮೇಲೆ ಗ್ರ್ಯಾಂಡ್ ಆಗಿ ಅಪ್ಪಳಿಸಿದ ಕಲ್ಕಿ.. ಸ್ಟಾರ್ ದಿಗ್ಗಜರ ಕಂಡು ಸಿನಿ ರಸಿಕರು ಫುಲ್ ಖುಷ್..!
ss rajamouli 10 years ki deggadaniki ready avithadu anta mari #KALKI2898AD#Kalko2898AD#SSRajamouli#Prabhaspic.twitter.com/vggXquhzay
— ??????? ?????????? (@tfi_efx) June 27, 2024
ಸದ್ಯ ಕಲ್ಕಿ ಮೂವಿಯಲ್ಲಿ ರಾಜಮೌಳಿ, ಪ್ರಭಾಸ್ ನಡುವಿನ ಈ ಸಂಭಾಷಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಒಂದೇ ಬಾರಿಗೆ ಸಿನಿಮಾದಲ್ಲಿ ರಾಜಮೌಳಿಯನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದು ಥಿಯೇಟರ್ನಲ್ಲಿ ಶಿಳ್ಳೆ ಹಾಕಿ ಸಂಭ್ರಮಿಸಿದ್ದಾರೆ. ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಕಮಾಲ್ ಹಾಸನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ದುಲ್ಕರ್ ಸಲ್ಮಾನ್ ಮತ್ತು ವಿಜಯ್ ದೇವರಕೊಂಡ, ರಾಜಮೌಳಿ ಸೇರಿದಂತೆ ದೊಡ್ಡ ತಾರಗಣವೇ ಸಿನಿಮಾದಲ್ಲಿದೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ