Kalki 2898 AD Release: ಶುರುವಾಯ್ತು ಕಲ್ಕಿ 2898 AD ಹವಾ.. ರಿಲೀಸ್ ಆದ ದಿನವೇ ಬಿಗ್ ಟಾರ್ಗೆಟ್..!

author-image
Veena Gangani
Updated On
2ನೇ ದಿನಕ್ಕೆ ಗಳಿಕೆಯಲ್ಲಿ ಶೇ.50ರಷ್ಟು ಕುಸಿದ ಕಲ್ಕಿ ಸಿನಿಮಾ! ಇಲ್ಲಿವರೆಗಿನ ಗಳಿಕೆಯೆಷ್ಟು? ಇಲ್ಲಿದೆ ಮಾಹಿತಿ
Advertisment
  • ಇಂದು ಗ್ರ್ಯಾಂಡ್​ ಆಗಿ ತೆರೆಗೆ ಅಪ್ಪಳಿಸಲಿದ ಕಲ್ಕಿ 2898AD ಸಿನಿಮಾ
  • ದೊಡ್ಡ ಪರದೆ ಮೇಲೆ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳು ಫ್ಯಾನ್ಸ್​ ಕಾತುರ
  • ರಿಲೀಸ್​ಗೂ ಮೊದಲೇ ಕೋಟಿ ಕೋಟಿ ಗಳಿಸಿದ Kalki 2898 AD ಚಿತ್ರ

ಸಿನಿ ರಸಿಕರಲ್ಲಿ ಕಲ್ಕಿ 2898 AD ಕುರಿತ ಕ್ರೇಜ್ ಹೆಚ್ಚಾಗಿದೆ. ಚಿತ್ರದ ಟ್ರೇಲರ್ ನೋಡಿದ ಫ್ಯಾನ್ಸ್​ಗೆ ತಮ್ಮ ನಿರೀಕ್ಷೆಗಳು ದುಪ್ಪಟ್ಟಾಗಿದ್ದು, ಇಂದು ಥಿಯೇಟರ್​​ಗಳಲ್ಲಿ ಕಣ್ತುಂಬಿಕೊಳ್ಳಲಿದ್ದಾರೆ ಡಾರ್ಲಿಂಗ್​ ಪ್ರಭಾಸ್ ಅಭಿಮಾನಿಗಳು. ಈಗಾಗಲೇ ಅಭಿಮಾನಿಗಳು ಕಲ್ಕಿ 2898 AD ಸಿನಿಮಾ ನೋಡಲು ಟಿಕೆಟ್ ಮುಂಗಡ ಬುಕ್ಕಿಂಗ್​ ಮಾಡಿಕೊಂಡಿದ್ದಾರೆ.

publive-image

ಇದನ್ನೂ ಓದಿ:ರಿಲೀಸ್​ಗೂ ಮೊದಲೇ ಕೋಟಿ ಕೋಟಿ ಗಳಿಸಿದ Kalki 2898 AD; ಹತ್ತು, ಇಪ್ಪತ್ತು ಕೋಟಿ ಅಲ್ಲವೇ ಅಲ್ಲ..!

ಇನ್ನು, ಕಲ್ಕಿ 2898 ಎಡಿ ಮುಂಗಡ ಬುಕ್ಕಿಂಗ್​ನಲ್ಲೇ ನಿರೀಕ್ಷೆಗೂ ಮೀರಿ ಆದಾಯಗಳಿಸುತ್ತಿದೆ. ಈಗಾಗಲೇ ಬುಕ್ಕಿಂಗ್​ನಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಹಣ ಗಳಿಸಿದೆ. 31.11 ಕೋಟಿ ರೂಪಾಯಿ ಹಣವನ್ನು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಚಿತ್ರವನ್ನು ಮೊದಲ ದಿನ ವೀಕ್ಷಣೆಗಾಗಿ ಸುಮಾರು 11 ಲಕ್ಷದ 30 ಸಾವಿರದ 763 ಟಿಕೆಟ್‌ಗಳು ಮಾರಾಟ ಆಗಿವೆ. ಮೊದಲ ದಿನ ಚಿತ್ರವು 200 ಕೋಟಿ ರೂಪಾಯಿ ಗಳಿಕೆಯೊಂದಿಗೆ ಓಪನಿಂಗ್ ಪಡೆಯುವ ನಿರೀಕ್ಷೆ ಇದೆ.

publive-image

ಇನ್ನು, ಇಂದು ಕಲ್ಕಿ 2898 AD ಸಿನಿಮಾ ಗ್ರ್ಯಾಂಡ್​ ಆಗಿ ತೆರೆಗೆ ಬರಲಿದೆ. ಕಲ್ಕಿ ರಿಲೀಸ್​ ಆದ ಮೊದಲ ದಿನವೇ 180-200 ಕೋಟಿ ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಈ ಸಿನಿಮಾವು ತೆಲುಗು, ‌ಕನ್ನಡ, ತಮಿಳು, ಮಲಯಾಳಂ, ಹಿಂದಿ‌ಯಲ್ಲಿ ರಿಲೀಸ್ ಆಗುತ್ತಿದೆ. ಡಾರ್ಲಿಂಗ್​ ಪ್ರಭಾಸ್ ನಟನೆಯ ಹೈ ಬಜೆಟ್ ಸಿನಿಮಾ ಇದಾಗಿದೆ. ನಾಗ್ ಅಶ್ವಿನ್‌ ಅವರ  ನಿರ್ದೇಶನದ‌ಲ್ಲಿ ಈ ಸಿನಿಮಾ ರಿಲೀಸ್​ ಆಗುತ್ತಿದೆ. ನಟ ಪ್ರಭಾಸ್​ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಅಮಿತಾಭ್ ಬಚ್ಚನ್, ಕಮಲ್‌ ಹಾಸನ್ ಕೂಡ ನಟಿಸಿದ್ದಾರೆ. ಇನ್ನು, ಕರ್ನಾಟಕದಲ್ಲೂ ಕಲ್ಕಿ ಹವಾ ಜೋರಾಗಿದೆ. ಇಂದು ಬೆಂಗಳೂರಿನಲ್ಲಿ ಹಲವು ಕಡೆ 5.30ಕ್ಕೆ ಫಸ್ಟ್ ಶೋ ಆರಂಭವಾಗಲಿದೆ. ಊರ್ವಶಿಯಲ್ಲಿ ಮುಂಜಾನೆ 6 ಗಂಟೆಗೆ ಮೊದಲ‌ ಪ್ರದರ್ಶನ ಶುರುವಾಗಿದೆ. ಒಟ್ಟಾರೆ 600 ಕೋಟಿ ವೆಚ್ಚದಲ್ಲಿ ಕಲ್ಕಿ ಸಿನಿಮಾದ ತಯಾರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment