Advertisment

Kalki 2898 AD: ತೆರೆ ಮೇಲೆ ಗ್ರ್ಯಾಂಡ್ ಆಗಿ ಅಪ್ಪಳಿಸಿದ ಕಲ್ಕಿ.. ಸ್ಟಾರ್ ದಿಗ್ಗಜರ ಕಂಡು ಸಿನಿ ರಸಿಕರು ಫುಲ್ ಖುಷ್..!

author-image
Bheemappa
Updated On
Kalki 2898 AD: ತೆರೆ ಮೇಲೆ ಗ್ರ್ಯಾಂಡ್ ಆಗಿ ಅಪ್ಪಳಿಸಿದ ಕಲ್ಕಿ.. ಸ್ಟಾರ್ ದಿಗ್ಗಜರ ಕಂಡು ಸಿನಿ ರಸಿಕರು ಫುಲ್ ಖುಷ್..!
Advertisment
  • ಇಂದು ಬೆಳಗ್ಗೆ 5 ಗಂಟೆಯಿಂದಲೇ ಕೆಲವೆಡೆ ಕಲ್ಕಿ ಚಿತ್ರ ಪ್ರದರ್ಶನ
  • ಸಿನಿಮಾ ರಿಲೀಸ್​ ಆಗಿದ್ದಕ್ಕೆ ಪ್ರಭಾಸ್ ಫ್ಯಾನ್ಸ್​ ಫುಲ್ ಜೋಶ್
  • ಬೆಂಗಳೂರಿನ ಯಾವ ಥಿಯೇಟರ್​​ನಲ್ಲಿ ಕಲ್ಕಿ ಮೂವಿ ಪ್ರದರ್ಶನ

ಪ್ರಭಾಸ್ ಸೇರಿದಂತೆ ಚಿತ್ರರಂಗದ ದಿಗ್ಗಜರು ಅಭಿನಯಿಸಿರುವ ಕಲ್ಕಿ 2898 AD ಮೂವಿ ಗ್ರ್ಯಾಂಡ್​ ಆಗಿ ವಿಶ್ವದ್ಯಾಂತ ಬೆಳ್ಳಿತೆರೆಗೆ ಅಪ್ಪಳಿಸಿದೆ. ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಮೂವಿ ಇದಾಗಿದ್ದು ಅಭಿಮಾನಿಗಳು ಕಾತುರದಿಂದ ಇದ್ದರು. ಸದ್ಯ ಬೆಂಗಳೂರಿನಲ್ಲಿ ಕಲ್ಕಿಗೆ ಬಿಗ್ ವೆಲ್​ಕಾಮ್​ ಮಾಡಲಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದಲೇ ಶೋ ಪ್ರದರ್ಶಿಸಲಾಗಿದ್ದು ಡಾರ್ಲಿಂಗ್​ ಫ್ಯಾನ್ಸ್​ ಫುಲ್ ಜೋಶ್​ನಲ್ಲಿದ್ದಾರೆ.

Advertisment

ಇದನ್ನೂ ಓದಿ: LK Advani : ಬಿಜೆಪಿ ಹಿರಿಯ ನಾಯಕ, ಭಾರತ ರತ್ನ ಪುರಸ್ಕೃತ ಅಡ್ವಾಣಿ ತಡರಾತ್ರಿ ಆಸ್ಪತ್ರೆಗೆ ದಾಖಲು

ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ಕಲ್ಕಿ 2898 AD ಸಿನಿಮಾ ರಿಲೀಸ್ ಆಗಿದೆ. 2D, 3D ವರ್ಸನ್​ನಲ್ಲಿ ತೆರೆಗೆ ಅಪ್ಪಳಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಊರ್ವಶಿ ಚಿತ್ರಮಂದಿರದಲ್ಲಿ ಇಂದು ಬೆಳಗ್ಗೆ 6 ಗಂಟೆಗೆ ಮೊದಲ ಶೋವನ್ನು ಪ್ರದರ್ಶನ ಮಾಡಲಾಗಿದೆ. ಇನ್ನು ಕೆಲ ಚಿತ್ರಮಂದಿರಗಳಲ್ಲಿ ಇಂದು ಬೆಳಗ್ಗೆ 5 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಮಾಡಲಾಗಿದ್ದು ಮೂವಿ ನೋಡಿದ ಪ್ರಭಾಸ್ ಫ್ಯಾನ್ಸ್​ ಸಖತ್ ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 90 ಲಕ್ಷ ರೂಪಾಯಿ ಕದ್ದ ಯುವತಿ 1 ಲಕ್ಷ ದೇವರ ಹುಂಡಿಗೆ ಹಾಕಿ ಸಿಕ್ಕಿಬಿದ್ದಳು; ಇವಳ ಕಥೆ ಕೇಳಿದ ಪೊಲೀಸ್ರೇ ಶಾಕ್‌!

Advertisment

publive-image

ಕಲ್ಕಿ 2898 ಎಡಿ ಸಿನಿಮಾದ 3 ಗಂಟೆ 59 ನಿಮಿಷ ಇದ್ದು ಅತಿ ದೊಡ್ಡ ಸಿನಿಮಾವಾಗಿದೆ. ಅಂದರೆ 1 ನಿಮಿಷ ಕಡಿಮೆ 4 ಗಂಟೆ ಈ ಸಿನಿಮಾ ಥಿಯೇಟರ್​ನಲ್ಲಿ ನೀವು ನೋಡಬಹುದು. ಸಿನಿಮಾದ ಟ್ರೈಲರ್​ನಲ್ಲಿ ಭೂಮಿ ಮೇಲೆ ಎಲ್ಲ ನಾಶ ಆದರು ಕಾಶಿ ಮಾತ್ರ ಉಳಿದುಕೊಳ್ಳುತ್ತದೆ ಎಂಬ ಎಳೆ ಇದೆ. ಸಿನಿಮಾವನ್ನು ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಕಮಾಲ್ ಹಾಸನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ದುಲ್ಕರ್ ಸಲ್ಮಾನ್ ಮತ್ತು ವಿಜಯ್ ದೇವರಕೊಂಡ ಇದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್​ ಅಡಿ ಈ ಅದ್ಭುತ ಚಿತ್ರ ಮೂಡಿ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment