newsfirstkannada.com

Kalki 2898AD ಟ್ರೇಲರ್​ ನೋಡಿದ್ರಾ? ನಿಮಗಿದೆ 1 ಲಕ್ಷ ರೂಪಾಯಿ ಬಹುಮಾನ ಗೆಲ್ಲೋ ಅವಕಾಶ! ಮಿಸ್​​ ಮಾಡ್ಬೇಡಿ

Share :

Published June 22, 2024 at 2:25pm

Update June 22, 2024 at 2:26pm

  ಡಾರ್ಲಿಂಗ್​ ಪ್ರಭಾಸ್ ನಟನೆಯ Kalki 2898AD ಸಿನಿಮಾ

  ನಾಗ್​ ಅಶ್ಚಿನ್ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ

  ಜೂನ್​ 27ರಂದು ತೆರೆಗೆ ಬರಲು ಸಜ್ಜಾದ ಕಲ್ಕಿ ಸಿನಿಮಾ

ಡಾರ್ಲಿಂಗ್​ ಪ್ರಭಾಸ್ ನಟನೆಯ Kalki 2898AD ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ನಿನ್ನೆ ಚಿತ್ರತಂಡ ಕಲ್ಕಿ ಸಿನಿಮಾದ ಟ್ರೇಲರ್​ ಲಾಂಚ್​ ಮಾಡಿದ್ದಾರೆ. ಈಗಾಗಲೇ ಬಿಡುಗಡೆಗೊಂಡ ಟ್ರೇಲರ್​ ದೊಡ್ಡ ಮಟ್ಟದ ಹೈಪ್​ ಕ್ರಿಯೇಟ್​ ಮಾಡಿದ್ದು, ಅಭಿಮಾನಿಗಳನ್ನು ಮತ್ತಷ್ಟು ಕಾತುರರನ್ನಾಗಿಸಿದೆ.

ಬಿಗ್ ಬಜೆಟ್​ನಲ್ಲಿ Kalki 2898AD ಸಿನಿಮಾ ಮೂಡಿಬಂದಿದೆ. ‘ರಾಧೆ ಶ್ಯಾಮ್​’ ನಿರ್ದೇಶಿಸಿದ ನಿರ್ದೇಶಕ ನಾಗ್​ ಅಶ್ಚಿನ್​ ಕಲ್ಕಿ ಅವತಾರದಲ್ಲಿ ಪ್ರಭಾಸ್​ ಅವರನ್ನು ತೋರಿಸಲು ಮುಂದಾಗಿದ್ದಾರೆ. ಭೈರವನ ರೂಪದಲ್ಲಿ ಪ್ರಭಾಸ್​ ಕಾಣಿಸಿಕೊಂಡಿದ್ದಾರೆ. ಅಂದಹಾಗೆಯೇ ಇದೇ ಜೂನ್​ 27ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ಇದನ್ನೂ ಓದಿ: Kalki 2898 ADಗೆ ದೊಡ್ಡ ಸಂಕಷ್ಟ.. ಟ್ರೇಲರ್​ ರಿಲೀಸ್​ ಆಗ್ತಿದ್ದಂತೆ ದಂಗೆ ಎದ್ದ ಹಾಲಿವುಡ್​​ ಕಲಾವಿದರು!

Kalki 2898AD ಟ್ರೇಲರ್​ ರಿಲೀಸ್​ ಆದ ಬಳಿಕ ಎಲ್ಲರ ಯೋಚನೆ ಕಲ್ಕಿ ಸಿನಿಮಾದತ್ತ ನೆಟ್ಟಿದೆ. ಅದರಂತೆಯೇ ರಾಮ್​ ಗೋಪಾಲ್​ ವರ್ಮಾ ಕೂಡ ಕಲ್ಕಿ ಸಿನಿಮಾ ಟ್ರೇಲರ್​ ನೋಡಿ ಪ್ರಶಂಸಿದ್ದಾರೆ. ಟ್ವೀಟ್​ ಮಾಡಿರುವ ಅವರು ಕಲ್ಕಿ ಸಿನಿಮಾದ ಕುರಿತಾಗಿ ಫ್ಯಾನ್ಸ್​ ಬಿಟ್ಟ ಸ್ಥಳ ತುಂಬಿಸಿ ಎಂಬ ಪ್ರಶ್ನೆಯನ್ನಿಟ್ಟಿದ್ದಾರೆ. ಇದಕ್ಕೆ ಮೊದಲು ಉತ್ತರಿಸಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿದ್ದಾರೆ. ಇನ್ನು ರಾಮ್ ಗೋಪಾಲ್​ ವರ್ಮಾರವರು ಮಾಡಿದ ಟ್ವೀಟ್​ ನೋಡಿ ಅನೇಕರು ಉತ್ತರಿಸಿದ್ದಾರೆ.

ಇದನ್ನೂ ಓದಿ: Kalki 2898 AD 2ನೇ ಟ್ರೇಲರ್ ರಿಲೀಸ್.. ಪೌರಾಣಿಕ ಪಾತ್ರದಲ್ಲಿ ಗಮನ ಸೆಳೆದ ಮಾಳವಿಕಾ..!

ಕುತೂಹಲ ಕೆರಳಿಸಿರುವ ಕಲ್ಕಿ ಸಿನಿಮಾದ ತಾರಾಗಣ ನೋಡುವುದಾದರೆ, ಪ್ರಭಾಸ್​ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಸುಮತಿ ರೂಪದಲ್ಲಿ ದೀಪಿಕಾ ನಟಿಸಿದ್ದಾರೆ. ಮಾತ್ರವಲ್ಲದೆ. ಬಾಲಿವುಡ್​ ಬಿಗ್​ ಬಿ ಅಮಿತಾ ಬಚ್ಚನ್​ ಅಶ್ವತ್ಥಾಮನಾಗಿ ಬಣ್ಣ ಹಚ್ಚಿದ್ದಾರೆ. ಇವಿಷ್ಟು ಮಾತ್ರವಲ್ಲ, ಕಮಲ್​ ಹಾಸನ್​, ದಿಶಾ ಪಟಾನಿ. ಶೋಭನಾ, ಬ್ರಹ್ಮಾನಂದಂ, ಅನ್ನಾ ಬೆನ್​ ಹೀಗೆ ಬಹುತಾರಗಣದ ಸಿನಿಮಾ ಇದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kalki 2898AD ಟ್ರೇಲರ್​ ನೋಡಿದ್ರಾ? ನಿಮಗಿದೆ 1 ಲಕ್ಷ ರೂಪಾಯಿ ಬಹುಮಾನ ಗೆಲ್ಲೋ ಅವಕಾಶ! ಮಿಸ್​​ ಮಾಡ್ಬೇಡಿ

https://newsfirstlive.com/wp-content/uploads/2024/06/Prabas.webp

Load More