/newsfirstlive-kannada/media/post_attachments/wp-content/uploads/2024/06/kalki-prabas-1.jpg)
ಡಾರ್ಲಿಂಗ್ ಪ್ರಭಾಸ್ ನಟನೆಯ ಕಲ್ಕಿ 2898 AD ಸಿನಿಮಾ ತೆರೆಗೆ ಬರಲು ಇನ್ನೆರಡೇ ದಿನ ಬಾಕಿ. ಈಗಾಗಲೇ ಫ್ಯಾನ್ಸ್ ಬಹುನಿರೀಕ್ಷೆಯ ಈ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಅವರಿಗಾಗಿಯೇ ಚಿತ್ರತಂಡ ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಆಯ್ಕೆಯನ್ನು ನೀಡಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ 24 ಗಂಟೆಗಳಲ್ಲಿ ಭಾರತದಲ್ಲಿ 2 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದೆ.
6 ಕೋಟಿಗೂ ಅಧಿಕ ಮೊತ್ತ ಸಂಗ್ರಹ
ನಾಗ್ ಅಶ್ಚಿನ್ ನಿದೇರ್ಶನದಲ್ಲಿ ಕಲ್ಕಿ ಸಿನಿಮಾ ಮೂಡಿಬಂದಿದೆ. ಚಲಸಾನಿ ಅಶ್ವಿನಿ ದತ್ ಬಂಡವಾಳ ಹೂಡಿದ್ದಾರೆ. ತಮ್ಮ ವೈಜಯಂತಿ ಸಿನಿಮಾದ ಮೂಲಕ ಕಲ್ಕಿ ಸಿನಿಮಾವನ್ನು ಭರ್ಜರಿ ಮೊತ್ತಕ್ಕೆ ನಿರ್ಮಿಸಿದ್ದಾರೆ. ಅಂದಹಾಗೆಯೇ ಇಷ್ಟೆಲ್ಲಾ ಹೈಪ್ ಕ್ರಿಯೇಟ್ ಮಾಡಿರುವ ಕಲ್ಕಿ ಸಿನಿಮಾ ಸೋಮವಾರ ಮುಂಗಡ ಟಿಕೆಟ್ ಬುಕ್ಕಿಂಗ್ನಲ್ಲಿ ಬೆಳಿಗ್ಗೆ 10.30 ಸುಮಾರಿಗೆ ಬರೋಬ್ಬರಿ 6 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿದೆ. ಈ ಕುರಿತಾಗಿ ಡೇಟಾ- ಟ್ರ್ಯಾಕಿಂಗ್ ಪೋರ್ಟಲ್ ಸ್ಯಾಕ್ನಿಲ್ಕ್ ತಿಳಿಸಿದೆ.
ಇದನ್ನೂ ಓದಿ: ಅಬ್ಬಾ..! ಕಲ್ಕಿ 2898 AD ಸಿನಿಮಾಗಾಗಿ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಗೊತ್ತಾ?
Records Records Records ???#Kalki2898AD Total North America Pre Sales hits $3 MILLION+ Mark and 113K+ tickets sold with 3 more days left until the release… absolute havoc ??????
Nuvvu kummeyyyyy Darling uuuu…#Prabhas ❤️?❤️?#RebelStarOochakotha ?♂️ pic.twitter.com/rK26EXUhVr
— Prathyangira Cinemas (@PrathyangiraUS)
Records Records Records 🔥🔥🔥#Kalki2898AD Total North America Pre Sales hits $3 MILLION+ Mark and 113K+ tickets sold with 3 more days left until the release… absolute havoc 🙏🏻🙏🏻🔥🔥
Nuvvu kummeyyyyy Darling uuuu…#Prabhas ❤️🔥❤️🔥#RebelStarOochakotha 🙇♂️ pic.twitter.com/rK26EXUhVr— Prathyangira Cinemas (@PrathyangiraUS) June 23, 2024
">June 23, 2024
ಇಂದು ಎಷ್ಟು ಟಿಕೆಟ್ ಸೇಲ್ ಆಗಿದೆ
ಭಾನುವಾರದಿಂದ ಮುಂಗಡ ಬುಕ್ಕಿಂಗ್ ಆರಂಭಗೊಂಡಿದೆ. ಕರ್ನಾಟಕ, ತೆಲಂಗಾಣ, ತಮಿಳುನಾಡು ಸೇರಿದಂತೆ ಅನೇಕರು ಡಾರ್ಲಿಂಗ್ ಸಿನಿಮಾದ ಮುಂಗಡ ಬುಕ್ಕಿಂಗ್ ಖರೀದಿಸಿದ್ದಾರೆ. ಸ್ಯಾಕ್ಲಿಂಕ್ ಪ್ರಕಾರ ಜೂನ್ 24ರಂದು ಬೆಳಿಗ್ಗೆ 11 ಗಂಟೆಗೆ 2.1 ಲಕ್ಷ ಟಿಕೆಟ್ ಅನ್ನು ಜನರು ಖರೀದಿಸಿದ್ದಾರೆ. ಸದ್ಯ ಮುಂಗಡ ಟಿಕೆಟ್ನಲ್ಲಿಯೇ 6. 25 ಕೋಟಿ ಆದಾಯ ಮಾಡಿದೆ ಎಂದು ಹೇಳಿದೆ.
ಇದನ್ನೂ ಓದಿ: ಪ್ರೀತಿಸಿ ಮದುವೆಯಾಗ್ತೀನಿ ಕಣೆ ಎಂದು ನಂಬಿಸಿದ ಆರೋಪ.. 18 ಲಕ್ಷ ರೂಪಾಯಿ ಪೀಕಿ ಕೈಕೊಟ್ಟ ಪೊಲೀಸಪ್ಪ!
Witness the future unfold.
Bookings for #Kalki2898AD are open across North India (Hindi) ?️ https://t.co/z9EmiReie8@SrBachchan@ikamalhaasan#Prabhas@deepikapadukone@nagashwin7@DishPatani@Music_Santhosh@VyjayanthiFilms@Kalki2898AD@saregamaglobal@saregamasouth… pic.twitter.com/XOW8J8FcLh
— Kalki 2898 AD (@Kalki2898AD)
Witness the future unfold.
Bookings for #Kalki2898AD are open across North India (Hindi) 🎟️ https://t.co/z9EmiReie8@SrBachchan@ikamalhaasan#Prabhas@deepikapadukone@nagashwin7@DishPatani@Music_Santhosh@VyjayanthiFilms@Kalki2898AD@saregamaglobal@saregamasouth… pic.twitter.com/XOW8J8FcLh— Kalki 2898 AD (@Kalki2898AD) June 24, 2024
">June 24, 2024
ಇದಲ್ಲದೆ ಭಾರತ ಮಾತ್ರವಲ್ಲ, ವಿದೇಶದಲ್ಲಿ ಕಲ್ಕಿ ರಾರಾಜಿಸುತ್ತಿದೆ. ಈಗಾಗಲೇ 1,13,000 ಟಿಕೆಟ್ಗಳನ್ನು ಮಾರಾಟ ಮಾಡಿದೆ. ಉತ್ತರ ಅಮೇರಿಕಾದಲ್ಲಿ USD 3 ಮಿಲಿಯನ್ ಮಾರಾಟ ಕಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ