/newsfirstlive-kannada/media/post_attachments/wp-content/uploads/2024/06/bujji1-1.jpg)
ಇಂದು ಡಾರ್ಲಿಂಗ್ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಅಭಿನಯದ ಬಹುನೀರಿಕ್ಷಿತ ಕಲ್ಕಿ 2898 AD ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ರಿಲೀಸ್ ಆದ ಮೊದಲ ದಿನವೇ ಕಲ್ಕಿ 2898 AD ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಅಭಿಮಾನಿಗಳು ಇದು ಪಕ್ಕಾ ಯೂನಿವರ್ಸಲ್ ಸಿನಿಮಾ. ಮೇಕಿಂಗ್ ಅಂತೂ ಹಾಲಿವುಡ್ ರೇಂಜ್‌ನಲ್ಲಿದೆ ಎಂದು ಹಾಡಿ ಹೋಗಳುತ್ತಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಇಂದು ಕಲ್ಕಿ 2898 AD ಸಿನಿಮಾ ಬಿಡುಗಡೆಯಾಗಿದೆ.
ಇದನ್ನೂ ಓದಿ:ಕಲ್ಕಿ ಬುಜ್ಜಿ ಕಾರಿನ ಹಿಂದಿನ ಮಾಸ್ಟರ್ ಮೈಂಡ್ ಇವರೇ! ಆನಂದ್ ಮಹೀಂದ್ರಾ ಪಾತ್ರವೇನು ಗೊತ್ತಾ?
ಈಗಂತೂ ಸಿನಿ ರಸಿಕರ ಬಾಯಲ್ಲಿ ಬುಜ್ಜಿ ಬಗ್ಗೆಯೇ ಕನವರಿಕೆ. ಸದ್ಯ ಬುಜ್ಜಿ ಕಾರು ಸಖತ್ ಟ್ರೆಂಡಿಂಗ್ನಲ್ಲಿದೆ. ಅಷ್ಟಕ್ಕೂ ಈ ಬುಜ್ಜಿ ಇಷ್ಟು ಏಕೆ ಟ್ರೆಂಡಿಂಗ್ನಲ್ಲಿದೆ ಅಂತಾ ಸಾಕಷ್ಟು ಜನರು ಸರ್ಚ್ ಮಾಡುತ್ತಿದ್ದಾರೆ. ಹೌದು, ಈ ಬುಜ್ಜಿ ಹೆಸರು ಸಖತ್ ಟ್ರೆಂಡಿಂಗ್ನಲ್ಲಿ ಇರೋದಕ್ಕೆ ಮುಖ್ಯ ಕಾರಣವೇ ಕಲ್ಕಿ 2898 AD. ಡಾರ್ಲಿಂಗ್ ಪ್ರಭಾಸ್ ಅಭಿನಯದ ಕಲ್ಕಿ 2898 AD ಪ್ರೇಕ್ಷಕರಲ್ಲಿ ಬಹುನಿರೀಕ್ಷೆ ಹುಟ್ಟು ಹಾಕುತ್ತಿದೆ. ಈಗಾಗಲೇ ಟೀಸರ್ ಹಾಗೂ ಟ್ರೈಲರ್ ಮೂಲಕ ಗಮನ ಸೆಳೆದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವನ್ನು ವೀಕ್ಷಕರು ವೀಕ್ಷಿಸಿ ಹಾಡಿ ಹೊಗಳುತ್ತಿದ್ದಾರೆ.
ಇದನ್ನೂ ಓದಿ: Kalki Bujji Car: ಅಬ್ಬಬ್ಬಾ.. ಎಲ್ಲೆಲ್ಲೂ ಕಲ್ಕಿ ಬುಜ್ಜಿ ಕಾರಿನದ್ದೇ ಹವಾ.. ಇದರ ರೇಟ್ ಎಷ್ಟು? ನಿಮಗೂ ಬೇಕಾ?
ಇನ್ನು ಇದರ ಮಧ್ಯೆ ಕಲ್ಕಿ 2898 AD ಸಿನಿಮಾದ ಪ್ರಮುಖ ಆಕರ್ಷಣೆಯಾಗಿರೋ ಬುಜ್ಜಿ ಕಾರನ್ನು ಹೈದರಾಬಾದ್‌ನ ಮಲ್ಟಿಪ್ಲೆಕ್ಸ್‌ನ ಹೊರಗೆ ನಿಲುಗಡೆ ಮಾಡಲಾಗಿದೆ. ಈ ಬುಜ್ಜಿ ಕಾರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ದೌಡಾಯಿಸಿದ್ದರು. ಬುಜ್ಜಿ ಕಾಲ್ಪನಿಕವಾಗಿ ಹಾರುವ ಕಾರು ಇದಾಗಿದೆ. ಮೊಟ್ಟ ಮೊದಲನೇ ಬಾರಿಗೇ ಬುಜ್ಜಿ ಪಾತ್ರದಲ್ಲಿ ಕಾರನ್ನು ಕಲ್ಕಿ ಸಿನಿಮಾದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ.
Bujji at prasads ??#Prabhas#Kalko2898AD@nagashwin7@VyjayanthiFilms#ShreyasMedia#ShreyasGrouppic.twitter.com/hWF9MiTaNP
— Shreyas Sriniwaas (@shreyasmedia)
Bujji at prasads 💥💥#Prabhas#Kalko2898AD@nagashwin7@VyjayanthiFilms#ShreyasMedia#ShreyasGrouppic.twitter.com/hWF9MiTaNP
— Shreyas Sriniwaas (@shreyasmedia) June 27, 2024
">June 27, 2024
ಈ ಮೂಲಕ ಪ್ರಭಾಸ್ ಅಭಿಮಾನಿಗಳಲ್ಲಿ ಅಪಾರ ಆಸಕ್ತಿಯನ್ನು ಗಳಿಸಿದೆ. ಆಟೋಮೋಟಿವ್ ಭಾಗಗಳನ್ನು ತಯಾರಿಸಲು ಹೆಸರುವಾಸಿಯಾದ ಕೊಯಮತ್ತೂರು ಮೂಲದ ಸಂಸ್ಥೆಯಾದ ಜಯಮ್ ಆಟೋಮೋಟಿವ್‌ನ ಸ್ಟೇಬಲ್‌ನಲ್ಲಿ ಹುಟ್ಟಿದೆ. ಹೈದರಾಬಾದ್ ಮಲ್ಟಿಪ್ಲೆಕ್ಸ್‌ನಲ್ಲಿ ಅದರ ಸಂಪೂರ್ಣ ಗಾತ್ರವು ಚಲನಚಿತ್ರ-ವೀಕ್ಷಕರನ್ನು ರೋಮಾಂಚನಗೊಳಿಸಿತು. ಸದ್ಯ ಇದನ್ನು ಸಾರ್ವಜನಿಕರು ನೋಡಲು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಈ ಬುಜ್ಜಿ ಕಾರು ಕಲ್ಕಿ ಚಿತ್ರದಲ್ಲಿ ನಟ ಪ್ರಭಾಸ್ ಅವರು ಸವಾರಿ ಮಾಡುತ್ತಾರೆ. ಕಲ್ಕಿ 2898 AD ಸಿನಿಮಾದ ಕ್ಲೈಮ್ಯಾಕ್ಸ್ ಕೊನೆಯ 30 ನಿಮಿಷ ಅದ್ಭುತವಾಗಿ ಮೂಡಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ