Advertisment

ಕೊಲೆ ಕೇಸ್‌ಗೆ 10, 20 ಅಲ್ಲ ಬರೋಬ್ಬರಿ 50 ಸಿಸಿಟಿವಿಯಲ್ಲಿ ಸುಳಿವು.. ದರ್ಶನ್ ಗ್ಯಾಂಗ್‌ಗೆ ಹೊಸ ಆಪತ್ತು!

author-image
admin
Updated On
ನನಗೆ ಸಿಗರೇಟ್ ಬೇಕು.. ಟೆನ್ಷನ್​ನಲ್ಲಿರೋ ನಟ ದರ್ಶನ್‌ಗೆ ಪೊಲೀಸ್ರು ಚಾಕಲೇಟ್ ಕೊಟ್ಟು ಖಡಕ್ ವಾರ್ನಿಂಗ್!
Advertisment
  • ಕೊಲೆ ಕೇಸ್‌ ಸಾಕ್ಷ್ಯಾಧಾರಗಳ ಸಂಗ್ರಹಕ್ಕೆ ಪ್ರತ್ಯೇಕ ಪೊಲೀಸ್‌ ತಂಡ
  • ದರ್ಶನ್, ಪವಿತ್ರಾ, ಪವನ್ ಮತ್ತು ವಿನಯ್ ಮೊಬೈಲ್‌ಗಳು ರಿಟ್ರೀವ್!
  • ಪಟ್ಟಣಗೆರೆ ಶೆಡ್​ನಿಂದ ಸುಮನಹಳ್ಳಿವರೆಗೂ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ತನಿಖೆ ಎಷ್ಟು ಚುರುಕಾಗಿತ್ತೋ ಅಷ್ಟೇ ವೇಗವಾಗಿ ಜಾರ್ಜ್‌ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಜೈಲಿನಲ್ಲಿರುವ ದರ್ಶನ್‌ ಗ್ಯಾಂಗ್‌ಗೆ ಕಠಿಣ ಶಿಕ್ಷೆ ಕೊಡಿಸಲು ಖಾಕಿ ಪಡೆ ಮೂರು ತಿಂಗಳ ಒಳಗೆ ತನಿಖಾ ವರದಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲು ಸಿದ್ಧತೆ ನಡೆಸಿದ್ದಾರೆ.

Advertisment

ಕಾಮಾಕ್ಷಿಪಾಳ್ಯ ಪೊಲೀಸರು ಕೊಲೆ ಕೇಸ್‌ನ ತನಿಖೆಯನ್ನು ಬಹಳ ಎಚ್ಚರಿಕೆಯಿಂದ ನಡೆಸಿದ್ದಾರೆ. ಕಮಿಷನರ್ ದಯಾನಂದ ಅವರೇ ಈ ಕೇಸ್‌ನಲ್ಲಿ ಸ್ವಲ್ಪ ತಡವಾಗಿದ್ದರೂ ಈ ಪ್ರಕರಣ ದಾರಿ ತಪ್ಪಿ ಹೋಗುತ್ತಿತ್ತು. ಈ ಕೇಸ್‌ನಲ್ಲಿ ಪೊಲೀಸರು ಸಾಕ್ಷ್ಯಾಧಾರಗಳ ಸಂಗ್ರಹಕ್ಕೆ ಪ್ರತ್ಯೇಕ ತಂಡವನ್ನು ರಚನೆ ಮಾಡಿದ್ದರು. ಮತ್ತೊಂದು ಟೀಂನಿಂದ ಈಗ ಚಾರ್ಜ್‌ಶೀಟ್‌ ವರದಿ ಸಿದ್ಧಪಡಿಸುವ ಪೇಪರ್ ವರ್ಕ್ ನಡೆಯುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ನಿವಾಸಕ್ಕೆ ಬೆಂಗಳೂರು ಪೊಲೀಸರು ದಿಢೀರ್ ಭೇಟಿ.. ಅದೊಂದು ವಸ್ತುವಿಗಾಗಿ ತೀವ್ರ ಹುಡುಕಾಟ..!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಈಗಾಗಲೇ ಪ್ರಮುಖ ಆರೋಪಿಗಳಾದ ದರ್ಶನ್, ಪವಿತ್ರಾ, ಪವನ್ ಮತ್ತು ವಿನಯ್ ಮೊಬೈಲ್‌ ಅನ್ನು ರಿಟ್ರೀವ್ ಮಾಡಲಾಗಿದೆ. ಸಿಐಡಿ ಟೆಕ್ನಿಕಲ್ ಸೆಲ್​ನಲ್ಲಿ 17 ಮೊಬೈಲ್​ಗಳ ರಿಟ್ರೀವ್ ಪ್ರಕ್ರಿಯೆ ನಡೆಯುತ್ತಿದೆ. ಆರೋಪಿಗಳ ಮೊಬೈಲ್‌ನಿಂದಲೇ ಮಹತ್ವದ ಟೆಕ್ನಿಕಲ್ ಎವಿಡೆನ್ಸ್‌ಗಳನ್ನು ಕಲೆ ಹಾಕಲಾಗಿದೆ.

Advertisment

publive-image

50ಕ್ಕೂ ಹೆಚ್ಚು ಸಿಸಿಟಿವಿಗಳೇ ಸಾಕ್ಷಿ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದುವರೆಗೂ 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹ ಮಾಡಲಾಗಿದೆ. ಇದರಲ್ಲಿ ಚಿತ್ರದುರ್ಗದಿಂದ ಪಟ್ಟಣಗೆರೆ ಶೆಡ್​ಗೆ ಬಂದಿದ್ದ ಮಾರ್ಗ, ಶೆಡ್​ನಿಂದ ಸುಮನಹಳ್ಳಿ ಮೋರಿವರೆಗೂ ಕಾರ್ ಮೂಮೆಂಟ್ ಆದ ಸಿಸಿಟಿವಿ ದೃಶ್ಯಗಳೇ ಪ್ರಮುಖವಾಗಿದೆ.

ಇದನ್ನೂ ಓದಿ: EXCLUSIVE: ಒಂದಲ್ಲ.. ಎರಡಲ್ಲ.. 8 ಮಂದಿ ಐ ವಿಟ್ನೆಸ್; ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್‌! 

ಸಿಸಿಟಿವಿಗಳಲ್ಲಿ ರೇಣುಕಾಸ್ವಾಮಿ ಮೃತದೇಹವನ್ನು ಕಾರ್ತಿಕ್ & ಟೀಂ ಕಾರಿನಲ್ಲಿ ಹೊತ್ತೊಯ್ದ ದೃಶ್ಯಗಳು ಸ್ಪಷ್ಟವಾಗಿದೆ. ಕಾರ್ತಿಕ್ ಟೀಂ ಇದ್ದ ಕಾರನ್ನು ಪ್ರದೋಶ್, ವಿನಯ್ ಹಿಂದೆ ಫಾಲೋ ಮಾಡಿಕೊಂಡು ಬಂದಿದ್ದಾರೆ. ಪಟ್ಟಣಗೆರೆ ಶೆಡ್​ನಿಂದ ಸುಮನಹಳ್ಳಿವರೆಗೂ 25ಕ್ಕೂ ಹೆಚ್ಚು ಸಿಸಿಟಿವಿಯಲ್ಲಿ ಈ ದೃಶ್ಯಗಳು ಸಂಗ್ರಹವಾಗಿದೆ ಎನ್ನಲಾಗಿದೆ.

Advertisment

publive-image

ಪಟ್ಟಣಗೆರೆ ಶೆಡ್​ನಿಂದ ಆರ್.ಆರ್ ನಗರ ಮುಖ್ಯರಸ್ತೆಯಲ್ಲಿ ಕಾರು ಪಾಸ್ ಆಗಿದೆ. ಪಟ್ಟಣಗೆರೆ ಶೆಡ್​ನಿಂದ ನಾಯಂಡಹಳ್ಳಿ ಜಂಕ್ಷನ್​ಗೆ ಬಂದಿದ್ದ ಸುಮನಹಳ್ಳಿ ಮಾರ್ಗವಾಗಿ ಹೋಗಿದೆ. ಸುಮನಹಳ್ಳಿ ಮಾರ್ಗವಾಗಿ ನೇರವಾಗಿ ರಾಜ್ ಕುಮಾರ್ ರೋಡ್​ನಲ್ಲಿ ಟರ್ನ್ ಆಗಿದೆ.

ಸುಮನಹಳ್ಳಿ ಬ್ರಿಡ್ಜ್ ಬಳಿ ಆರೋಪಿಗಳು ರೇಣುಕಾಸ್ವಾಮಿ ಮೃತದೇಹವನ್ನು ರಾಜಕಾಲುವೆ ಬಳಿ ಎಸೆದು ಹೋಗಿದ್ದಾರೆ. ಅಪಾರ್ಟ್ಮೆಂಟ್ ರೋಡ್​ನಲ್ಲಿ ಹೋಗಿ ಯೂಟರ್ನ್ ತೆಗೆದುಕೊಂಡಿದ್ದ ಗ್ಯಾಂಗ್ ಮೃತದೇಹವನ್ನು ಎಸೆದು ಅಲ್ಲಿಂದ ಎಸ್ಕೇಪ್ ಆಗಿದೆ. ಹೋಗುವಾಗ ಒಂದೇ ದಾರಿಯಲ್ಲಿ ಹೋಗಿ ಬರುವಾಗ ಆರೋಪಿಗಳು ಮಾರ್ಗ ಬದಲು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment