ಶಿವಣ್ಣ ಸಿನಿ ಜರ್ನಿಗೆ 40 ವರುಷ ತುಂಬಿದ ಸಂಭ್ರಮ.. ಕನ್ನಡದಲ್ಲೇ ಶುಭ ಹಾರೈಸಿದ ಕಮಲ್ ಹಾಸನ್..!

author-image
Ganesh
Updated On
ಶಿವಣ್ಣ ಸಿನಿ ಜರ್ನಿಗೆ 40 ವರುಷ ತುಂಬಿದ ಸಂಭ್ರಮ.. ಕನ್ನಡದಲ್ಲೇ ಶುಭ ಹಾರೈಸಿದ ಕಮಲ್ ಹಾಸನ್..!
Advertisment
  • ಕರುನಾಡ ಚಕ್ರವರ್ತಿ ಶಿವಣ್ಣನ ವೃತ್ತಿ ಬದುಕಿಗೆ 40 ವರ್ಷ
  • ‘ಶ್ರೀಮುತ್ತು’ ಹೆಸರಿನಲ್ಲಿ ಶಿವಣ್ಣನ ಚರಿತ್ರೆ ಪುಸ್ತಕ ರಿಲೀಸ್​
  • ಶಿವಣ್ಣನಿಗೆ ಕನ್ನಡದಲ್ಲೇ ಶುಭ ಹಾರೈಸಿದ ಕಮಲ್ ಹಾಸನ್

ಕರುನಾಡ ಚಕ್ರವರ್ತಿ.. ಹ್ಯಾಟ್ರಿಕ್ ಹೀರೋ.. ದೊಡ್ಮನೆಯ ಹಿರಿಯ ಮಗ.. ವಯಸ್ಸು 60 ಆದ್ರೂ ಸ್ಟಿಲ್​ 25ರ ಯುವಕನಂತೆ ಸದಾ ಯಂಗ್ ಅಂಡ್ ಎನರ್ಜಿಟಿಕ್ ಆಗಿರೋ ಶಿವಣ್ಣ, ಮತ್ತೆ ಅಮೆರಿಕಾ ಹೋಗಿದ್ದಾರೆ. ಈ ಸಲ ಚಿಕಿತ್ಸೆಗೆ ಹೋಗಿಲ್ಲ ಬಿಡಿ.. ಬಯೋಪಿಕ್ ರಿಲೀಸ್ ಹೋಗಿದ್ದಾರೆ.. ಅದು ಕೂಡ ಅವರದ್ದೇ..

ಕರುನಾಡ ಚಕ್ರವರ್ತಿ ಶಿವಣ್ಣನ ವೃತ್ತಿ ಬದುಕಿಗೆ 40 ವರ್ಷ

ವೃತ್ತಿ ಬದುಕಿನಲ್ಲಿ ಸುದೀರ್ಘವಾಗಿ ಪ್ರಯಾಣಿಸೋದು ಸುಲಭದ ಮಾತಲ್ಲ. ಡಾ.ರಾಜ್​ ಕುಮಾರ್ ಮಗ ಎನಿಸಿಕೊಂಡ್ರೂ​.. ತಮ್ಮ ಸ್ವಂತ ನಟನೆ.. ಕಲೆಯಿಂದ ಶಿವಣ್ಣ ತಮ್ಮ 40 ವರ್ಷ ಸಿನಿ ಜರ್ನಿ ಪೂರೈಸಿದ್ದಾರೆ. ಈ ಸಾಧನೆಯ ಅಂಗವಾಗಿ ಈ ಮೊದಲೇ ಪ್ಲಾನ್ ಆದಂತೆ ಶಿವಣ್ಣನ ಜೀವನ ಚರಿತ್ರೆಯ ಶ್ರೀಮುತ್ತು ಪುಸಕ್ತ ರಿಲೀಸ್ ಆಗಿದೆ. ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಶಿವಣ್ಣ ದಂಪತಿ ಸಮ್ಮುಖದಲ್ಲಿ ಪುಸ್ತಕ ರಿಲೀಸ್ ಆಗಿದೆ. ಈ ಕಾರ್ಯಕ್ರಮದಲ್ಲಿ ಹಾಡು-ನೃತ್ಯದ ಮೂಲಕ ಶಿವಣ್ಣ ನೆರೆದಿದ್ದವರನ್ನ ರಂಜಿಸಿದ್ರು.

ಇದನ್ನೂ ಓದಿ: ಸರ್ಕಾರಕ್ಕೆ ಕಾಲ್ತುಳಿತದ ಡ್ಯಾಮೇಜ್, ಸಿಎಂ-ಡಿಸಿಎಂಗೆ ದಿಢೀರ್ ಬುಲಾವ್.. ದೆಹಲಿಯಲ್ಲಿ ಇಂದು ‘ಹೈ’ ಟಾಕ್!

publive-image

ಶಿವಣ್ಣನಿಗೆ ಕನ್ನಡದಲ್ಲೇ ಶುಭ ಹಾರೈಸಿದ ಕಮಲ್ ಹಾಸನ್

ಇತ್ತೀಚೆಗಷ್ಟೆ ಕನ್ನಡ ಬಗ್ಗೆ ತಮಿಳು ನಟ ಕಮಲ್​ ಹಾಸನ್ ಎಲ್ಲಾ ತಿಳಿದ ಮೇಧಾವಿಯಂತೆ ಕನ್ನಡದ ಬಗ್ಗೆ ಮಾತನಾಡಿ ಆಕ್ರೋಶ ಭುಗಿಲೆಬ್ಬಿಸಿದ್ರು. ಆದಾದ್ಮೇಲೆ ಥಗ್​ಲೈಫ್ ಸಿನಿಮಾ ಬ್ಯಾನ್, ಅದು ಮಕಾಡೆ ಮಲಗಿದ್ದು ಇತಿಹಾಸ. ಇದೀಗ ಕಮಲ್​ ಹಾಸನ್​, ಶಿವಣ್ಣನ 40 ವರ್ಷದ ಸಿನಿ ಜರ್ನಿಗೆ ವಿಶ್ ಮಾಡಿದ್ದಾರೆ. ಅದು ಕೂಡ ಅಪ್ಪಟ ಕನ್ನಡದಲ್ಲಿ ಅನ್ನೋದು ವಿಶೇಷ.

ಏನಂದ್ರು ಕಮಲ್ ಹಾಸನ್..?

ಶಿವಣ್ಣ ಚೆನ್ನಾಗಿದ್ದೀರಾ..? ಎಂದು ಕನ್ನಡದಲ್ಲೇ ಕೇಳಿರುವ ನಟ ಕಮಲ್‌ ಹಾಸನ್‌ ʻನಿಮ್ಮ 50 ವರ್ಷದ ವಾರ್ಷಿಕೋತ್ಸವಕ್ಕೆ ಇಬ್ಬರೂ ಕೂತು ಮತ್ತೆ ಮಾತನಾಡೋಣʼ ಎಂದಿದ್ದಾರೆ. ಮುಂದುವರೆದು ಯಾವಾಗಲೂ ಹೀಗೆ ನಗುತಲಿರಿ. ಇನ್ನೂ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡಿ. ನಮ್ಮ ಪ್ರೀತಿ ಹೀಗೆ ಮುಂದುವರೆಯಲಿದೆ ಎಂದಿದ್ದಾರೆ.

ಜೊತೆಗೆ ಶಿವಣ್ಣನಿಗೆ ತೆಲುಗು ಸ್ಟಾರ್​ ನಟರಾದ ಅಕ್ಕಿನೇನಿ ನಾಗಾರ್ಜುನ.. ವಿಜಯ್​ ದೇವರಕೊಂಡ ಶುಭ ಹಾರೈಸಿದ್ದಾರೆ. 40 ವರ್ಷ ಪೂರೈಸೋದು ಸುಲಭದ ಮಾತಲ್ಲ ಅಂತಾ ಹಾಡಿಹೊಗಳಿದ್ದಾರೆ. ಒಟ್ನಲ್ಲಿ, ಶಿವಣ್ಣನ ಈ ಸಾಧನೆಗೆ ಅನೇಕರು. ದೇಶ-ವಿದೇಶಗಳಿಂದ ಶುಭ ಹಾರೈಸುತ್ತಿದ್ದಾರೆ.. ಭೈರತಿ ರಣಗಲ್ಲಿನ ಸಾಧನೆ ಭಾರತೀಯ ಸಿನರಂಗದಲ್ಲಿ ಒಂದು ಮೈಲಿಗಲ್ಲು ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ.. ಸಿದ್ದರಾಮಯ್ಯ ಸರ್ಕಾರಕ್ಕೆ ಇವತ್ತು ಮಹತ್ವದ ದಿನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment