ಸುಪ್ರೀಂಕೋರ್ಟ್ ನಿರ್ದೇಶನ ಕೊಟ್ಟರೂ, ಕರ್ನಾಟಕದಲ್ಲಿ ಥಗ್ ಲೈಫ್ ಮೂವಿ ಬಿಡುಗಡೆ ಆಗುತ್ತಿಲ್ಲ.. ಯಾಕೆ?

author-image
Bheemappa
Updated On
ಸುಪ್ರೀಂಕೋರ್ಟ್ ನಿರ್ದೇಶನ ಕೊಟ್ಟರೂ, ಕರ್ನಾಟಕದಲ್ಲಿ ಥಗ್ ಲೈಫ್ ಮೂವಿ ಬಿಡುಗಡೆ ಆಗುತ್ತಿಲ್ಲ.. ಯಾಕೆ?
Advertisment
  • ಸಿನಿಮಾ ಬ್ಯಾನ್ ಮಾಡಿಲ್ಲವೆಂದು ಕೋರ್ಟ್​​ಗೆ ಹೇಳಿದ್ದ ಸರ್ಕಾರ
  • ಬಾಕ್ಸ್ ಆಫೀಸ್​ ಕಲೆಕ್ಷನ್​​ನಲ್ಲಿ ಹಿಂದೆ ಬಿದ್ದಿರುವ ಥಗ್ ಲೈಫ್ ಚಿತ್ರ
  • ಸಿನಿಮಾ ಡಿಸ್ಟ್ರಿಬ್ಯೂಟರ್ ಒಬ್ಬರು ಈ ಕುರಿತು ಹೇಳಿದ್ದು ಏನೇನು?

ನಟ, ನಿರ್ಮಾಪಕ ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಕರ್ನಾಟಕ ಸರ್ಕಾರವು ಸಿನಿಮಾ ಬಿಡುಗಡೆ ಆದರೇ, ಥಿಯೇಟರ್‌ಗೆ, ಪ್ರೇಕ್ಷಕರಿಗೆ ಸಂಪೂರ್ಣ ಪೊಲೀಸ್ ರಕ್ಷಣೆ ನೀಡುತ್ತೇವೆ. ಕರ್ನಾಟಕದಲ್ಲಿ ಸಿನಿಮಾವನ್ನು ಅಧಿಕೃತವಾಗಿ ನಾವ್ಯಾರು ಬ್ಯಾನ್ ಮಾಡಿಲ್ಲ ಎಂದು ಕರ್ನಾಟಕ ಸರ್ಕಾರವು ಸುಪ್ರೀಂಕೋರ್ಟ್​ಗೆ ಅಫಿಡವಿಟ್ ಮೂಲಕ ತಿಳಿಸಿತ್ತು. ಇದರಿಂದಾಗಿ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಆಗಬಹುದು ಎಂಬ ವಾತಾವರಣ ಇತ್ತು. ಆದರೇ, ವಾಸ್ತವವೇ ಬೇರೆಯಾಗಿದೆ.

ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಯ ಬಳಿಕ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಹಕ್ಕು ಖರೀದಿಸಲು ಯಾವುದೇ ಸಿನಿಮಾ ವಿತರಕರು ಕೂಡ ಮುಂದೆ ಬರುತ್ತಿಲ್ಲ. ಜೊತೆಗೆ ಥಗ್ ಲೈಫ್ ಸಿನಿಮಾ ಈಗಾಗಲೇ ತಮಿಳುನಾಡಿನಲ್ಲಿ ಬಿಡುಗಡೆಯಾಗಿದೆ. ತಮಿಳುನಾಡಿನಲ್ಲೇ ಥಗ್ ಲೈಫ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮಕಾಡೆ ಮಲಗಿದೆ. ನಿರೀಕ್ಷೆಯಂತೆ ಬಾಕ್ಸ್ ಆಫೀಸ್​​ನಲ್ಲಿ ಕಲೆಕ್ಷನ್ ಆಗುತ್ತಿಲ್ಲ. ಕಮಲ್ ಹಾಸನ್‌ ಅವರ ಕಳಪೆ ಸಿನಿಮಾಗಳ ಸಾಲಿಗೆ ಥಗ್ ಲೈಫ್ ಸೇರ್ಪಡೆಯಾಗಿದೆ.

ಇದನ್ನೂ ಓದಿ:ಅಮರನಾಥ ಯಾತ್ರೆ ಭಕ್ತಾದಿಗಳ ಸಂಖ್ಯೆ ಕುಸಿಯುತ್ತಾ.. ಭಾರತದ ಇಂಟಲಿಜೆನ್ಸ್​ನಿಂದ ಭಾರೀ ಎಚ್ಚರಿಕೆ!

publive-image

ಹೀಗಾಗಿ ಇಂಥ ಸ್ಥಿತಿಯಲ್ಲಿ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಮಾಡುವುದು ಒಳ್ಳೆಯ ಬ್ಯುಸಿನೆಸ್ ಐಡಿಯಾ ಅಲ್ಲ ಅಂತ ಥಗ್ ಲೈಫ್ ಸಿನಿಮಾದ ಕರ್ನಾಟಕ ವಿತರಕ ವೆಂಕಟೇಶ್ ಕಮಲಾಕರ್ ಹೇಳಿದ್ದಾರೆ. ನಾನು ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಮಾಡಲ್ಲ ಅಂತ ಸಿನಿಮಾ ಡಿಸ್ಟ್ರಿಬ್ಯೂಟರ್ ವೆಂಕಟೇಶ್ ಕಮಲಾಕರ್ ಹೇಳಿದ್ದಾರೆ.

ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ನೀಡಿದ್ದ ಹೇಳಿಕೆಯಿಂದ ಕನ್ನಡಿಗರ ಭಾವನೆಗೆ ಧಕ್ಕೆಯಾಗಿದೆ. ಇಂಥ ಸ್ಥಿತಿಯಲ್ಲಿ ಥಗ್ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡೋದು ಸೂಕ್ತವಲ್ಲ. ಈಗ ಸಿನಿಮಾ ಬಿಡುಗಡೆ ಮಾಡುವುದು ಒಳ್ಳೆಯ ಬ್ಯುಸಿನೆಸ್ ಐಡಿಯಾ ಕೂಡ ಅಲ್ಲ ಎಂದು ವೆಂಕಟೇಶ್ ಕಮಲಾಕರ್ ಹೇಳಿದ್ದಾರೆ. ಬಹಳಷ್ಟು ಮಂದಿ ಥಗ್ ಲೈಫ್ ಸಿನಿಮಾವನ್ನು ಒಳ್ಳೆಯ ಸಿನಿಮಾ ಎಂದು ಪರಿಗಣಿಸಿಲ್ಲ. ಹೀಗಾಗಿ ಇದು ಭಾರೀ ರಿಸ್ಕ್ ಕೆಲಸ. ಲಾಭ ಇಲ್ಲದೇ ಇರುವಾಗ ಯಾವ ಥಿಯೇಟರ್ ಮಾಲೀಕರು ತಾನೇ ಸಿನಿಮಾ ಪ್ರದರ್ಶನಕ್ಕೆ ಒಪ್ಪಿಕೊಳ್ಳುತ್ತಾರೆ? ಎಂದು ಸಿನಿಮಾ ಡಿಸ್ಟ್ರಿಬ್ಯೂಟರ್ ವೆಂಕಟೇಶ್ ಕಮಲಾಕರ್ ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment