/newsfirstlive-kannada/media/post_attachments/wp-content/uploads/2023/06/Kamala-Sahoni.jpg)
ಜನಪ್ರಿಯ ಗೂಗಲ್​​ ಸದಾ ಒಳ್ಳೆಯ ವಿಚಾರಗಳನ್ನು ತನ್ನ ಡೂಡಲ್ ಮೂಲಕ ಹಂಚಿಕೊಳ್ಳುತ್ತಿರುತ್ತದೆ. ಕೆಲವೊಮ್ಮೆ ವಿಶ್ವಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸುತ್ತಿರುತ್ತದೆ. ಅದರಂತೆಯೇ ಇಂದು ಜೀವರಸಾಯನಶಾಸ್ತ್ರಜ್ನೆ ಡಾ. ಕಮಲಾ ಸೊಹೋನಿ ಅವರನ್ನು ಸ್ಮರಿಸಿಕೊಂಡಿದೆ.
ಗೂಗಲ್​ ವಿಶೇಷ ಡೂಡಲ್​ ರಚಿಸಿದೆ. ಅದರಲ್ಲಿ​ ಡಾ ಕಮಲಾ ಸೊಹೋನಿ ಅವರ ಭಾವಚಿತ್ರವನ್ನು ವಿಶೇಷವಾಗಿ ರಚಿಸುವ ಮೂಲಕ ಅವರ ಜನ್ಮ ದಿನವನ್ನು ಸ್ಮರಿಸಿಕೊಂಡಿದೆ.
ಅಂದಹಾಗೆಯೇ ಡಾ ಕಮಲಾ ಸೊಹೋನಿ ಅವರಿಗಿಂದು 112ನೇ ಜನ್ಮದಿನ. ಜೂನ್​18, 1912ರಲ್ಲಿ ಇಂದೋರ್​ನಲ್ಲಿ ಜನಿಸಿದರು. ಹಾಗಾಗಿ ಈ ದಿನವನ್ನು ಭಾರತೀಯರಿಗೆ ನೆನಪು ಮಾಡುವ ಕೆಲಸವನ್ನು ಗೂಗಲ್​ ಮಾಡಿದೆ.
ಅಂದಹಾಗೆಯೇ ಡಾ ಕಮಲಾ ಸೊಹೋನಿ ವೈಜ್ನಾನಿಕ ಕ್ಷೇತ್ರದಲ್ಲಿ ಪಿಎಚ್​ಡಿ ಮಾಡಿ ಸಾಧನೆಗೈದ ಮೊದಲ ಮಹಿಳೆಯ ಎಂಬ ಹೆಗ್ಗಳಿಕೆ ಇವರಿಗೆ ಸಂದಿದೆ. ಕಮಲಾ ಅವರು ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್​ ಕಾಲದಲ್ಲಿ ತೆಂಗಿನ ಮರದಿಂದ ತೆಗೆಯುವ ನೀರಾ ಬಗ್ಗೆ ಸಂಶೋಧನೆ ನಡೆಸಿದರು. ಇದು ಅಪೌಷ್ಟಿಕ ಮಕ್ಕಳು ಮತ್ತು ಗರ್ಭಿಣಿ ಆರೋಗ್ಯ ಸುಧಾರಿಸುತ್ತದೆ ಎಂಬುದನ್ನು ಸಾಬೀತು ಪಡಿಸಿದರು. ನೀರಾದಲ್ಲಿ ಮಿಟಮಿನ್​ ಎ, ಮಿಟಮಿನ್​ಸಿ ಮತ್ತು ಕಬ್ಬಿಣ ಅಂಶವನ್ನು ಹೊಂದಿದೆ ಎಂಬುದನ್ನು ಕಂಡುಕೊಂಡರು. ಹಾಗಾಗಿ ಇದೇ ಕೆಲಸಕ್ಕೆ ಕಮಲಾ ಸೆಹೋನಿ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆದರು. ಜೂನ್​ 28,1998ರಲ್ಲಿ ದೆಹಲಿಯಲ್ಲಿ ನಿಧನರಾದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ