/newsfirstlive-kannada/media/post_attachments/wp-content/uploads/2024/06/RMG-SECURITY.jpg)
ರಾಮನಗರ: ಕನಕಪುರ ತಾಲೂಕಿನ ಕಬ್ಬಾಳು ದೇವಾಲಯದಲ್ಲಿ ಭಯಾನಕ ಕೃತ್ಯವೊಂದು ನಡೆದಿದ್ದು, ಅಲ್ಲಿನ ಸೆಕ್ಯುರಿಟಿ ಬೀಗದ ಕೀನಲ್ಲಿ ಭಕ್ತರೊಬ್ಬರ ತಲೆಗೆ ಹೊಡೆದು ಬುರುಡೆ ಬಿಚ್ಚಿದ್ದಾನೆ.
ವಿಐಪಿ ಗೇಟ್ನಲ್ಲಿ ಬಂದ ಭಕ್ತರ ಮೇಲೆ ಹಲ್ಲೆ ಸೆಕ್ಯುರಿಟಿ ನಾಗರಾಜ್ ಮಾಡಿದ್ದಾನೆ. ಪರಿಣಾಮ ಭಕ್ತ ಮಹೇಶ್ ತಲೆಯಿಂದ ರಕ್ತ ಚಿಮ್ಮಿದೆ. ರಕ್ತವನ್ನು ನೋಡಿದ ಇತರೆ ಭಕ್ತರು ಗಾಬರಿಯಾಗಿದ್ದಾರೆ. ಹಲ್ಲೆ ಮಾಡಿದ ಸೆಕ್ಯುರಿಟಿ ಮೇಲೆ ಕ್ರಮ ಆಗಬೇಕು, ನನಗೆ ನ್ಯಾಯ ಸಿಗಬೇಕು ಎಂದು ದೇವಾಲಯದ ಒಳಗೆ ಭಕ್ತ ಮಹೇಶ್ ಕೂತಿದ್ದಾನೆ.
ಸ್ಥಳಕ್ಕೆ ದೇವಾಲಯದ ಆಡಳಿತ ಮಂಡಳಿ, ಇಓ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸೆಕ್ಯುರಿಟಿ ಮೇಲೆ ಕ್ರಮ ಕೈಗೊಳ್ಳುವುದಾಗಿ ದೇವಾಲಯದ ಇಓ ತಿಳಿಸಿದ್ದಾರೆ. ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವರ ದರ್ಶನ ಪಡೆಯುವ ವಿಚಾರದಲ್ಲಿ ಗಲಾಟೆಯಾಗಿ ವಿಕೋಪಕ್ಕೆ ಹೋಗಿದೆ ಎನ್ನಲಾಗಿದೆ.
ಇದನ್ನೂ ಓದಿ:ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ಬೈಎಲೆಕ್ಷನ್.. ಆ ಮೂರು ಕ್ಷೇತ್ರಗಳು ಯಾವುದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ