newsfirstkannada.com

ಡಿಕೆ ಕೋಟೆಯಲ್ಲಿ ಮೈತ್ರಿ ನಾಯಕರ ಒಗ್ಗಟ್ಟು ಪ್ರದರ್ಶನ; ಡಾ. ಸಿ.ಎನ್​.ಮಂಜುನಾಥ್​ ಪರ ದೇವೆಗೌಡರ ಅದ್ಧೂರಿ ಮತಬೇಟೆ

Share :

Published April 18, 2024 at 6:46am

Update April 18, 2024 at 6:54am

    ಮಹಾನುಭಾವ ಎನ್ನುತ್ತಲೇ ಡಿಕೆಶಿಗೆ ದೇವೇಗೌಡರ ಟಾಂಗ್

    ದಳಪತಿಗಳಿಂದ ಡಿಕೆ ಬ್ರದರ್ಸ್ ವಿರುದ್ಧ ಆರೋಪಗಳ ಸುರಿಮಳೆ

    ಇಂಡಿಯಾ ನಾಯಕನೇ ಇಲ್ಲದ ಕೂಟ ಎಂದು ಗೌಡರ ಟೀಕೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಆಖಾಡ ರಂಗೇರಿದೆ. ಡಿಕೆ ಬ್ರದರ್ಸ್ ಹಾಗೂ ಗೌಡರ ಕುಟುಂಬದ ನಡುವಿನ ದುಷ್ಮನಿ ಮತ್ತಷ್ಟು ಧಗಧಗಿಸ್ತಿದೆ. ಒಕ್ಕಲಿಗ ಅಧಿಪತ್ಯಕ್ಕಾಗಿ ಆರೋಪ-ಪ್ರತ್ಯಾರೋಪ ಮಾರ್ಧನಿಸ್ತಿದೆ. ಡಿಕೆ ಬ್ರದರ್ಸ್ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿರುವ ದಳಪತಿಗಳು ಕನಕಪುರದ ಕೋಟೆಗೆ ಕಾಲಿಟ್ಟು ರಣಕಹಳೆ ಮೊಳಗಿಸಿದ್ದಾರೆ.

ವೇದಿಕೆ ಮೇಲೆ ಬಿಜೆಪಿ, ಜೆಡಿಎಸ್​ ನಾಯಕರ ಸಮಾಗಮ. ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ, ಕುಮಾರಸ್ವಾಮಿ ಅಬ್ಬರ. ಹೀಗೆ ರಣಕಹಳೆ ಮೊಳಗಿಸಿದ್ದು ಡಿಕೆಶಿಯ ಕ್ಷೇತ್ರ ಕನಕಪುರ ಕೋಟೆಯಲ್ಲಿ

ಡಿಕೆ ಸಹೋದರರಿಗೆ ಟಕ್ಕರ್ ನೀಡಿದ ಜೆಡಿಎಸ್-ಬಿಜೆಪಿ ದೋಸ್ತಿ ನಾಯಕರು

ಡಿಕೆ ಬ್ರದರ್ಸ್ ವಿರುದ್ಧ ದಳಪತಿಗಳು ನೇರವಾಗಿ ಸಮರ ಸಾರಿದ್ದಾರೆ. ಟ್ರಬಲ್ ಶೂಟರ್ ಡಿಸಿಎಂ ಡಿಕೆಶಿ ಭದ್ರಕೋಟೆಯಲ್ಲಿ ನಿನ್ನೆ ಸೂರ್ಯ ಮುಳುಗುವ ಹೊತ್ತಿಗೆ ರಣಕಹಳೆ ಮೊಳಗಿಸಿದ್ರು. ಇದೇ ಮೊದಲ ಬಾರಿಗೆ ಕನಕಪುರದಲ್ಲಿ ಜೆಡಿಎಸ್-ಬಿಜೆಪಿ ದೋಸ್ತಿ ನಾಯಕರು 10 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸುವ ಮೂಲಕ ಡಿಕೆ ಸಹೋದರರಿಗೆ ಟಕ್ಕರ್ ನೀಡಿದ್ರು. ಬೃಹತ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್​.ಅಶ್ವತ್ಥ್ ನಾರಾಯಣ್ ಸೇರಿ ಹಲವು ನಾಯಕರು ಮೈತ್ರಿ ಅಭ್ಯರ್ಥಿ ಸಿ.ಎನ್.ಮಂಜುನಾಥ್ ಪರ ಅಬ್ಬರದ ಪ್ರಚಾರ ನಡೆಸಿದ್ರು.

ಇಂಡಿಯಾ ನಾಯಕನೇ ಇಲ್ಲದ ಕೂಟ ಎಂದು ಗೌಡರ ಟೀಕೆ

ಸಮಾವೇಶ ಉದ್ದೇಶಿಸಿ ಮಾತ್ನಾಡಿದ ಹೆಚ್.ಡಿ.ದೇವೇಗೌಡ್ರು ಪ್ರತಿ ಮಾತಿನಲ್ಲೂ ಡಿ.ಕೆ.ಶಿವಕುಮಾರ್​​ರನ್ನು ಟೀಕಿಸಿದ್ರು. ಇಂಡಿಯಾ ಕೂಟಕ್ಕೆ ನಾಯಕ ಯಾರು ಅನ್ನೋದನ್ನು ಬಹಿರಂಗ ಪಡಿಸಬೇಕು ಅಂತ ಸವಾಲ್ ಹಾಕುವ ಮೂಲಕ ಅಳಿಯ ಮಂಜುನಾಥ್​ ಪರ ಅದ್ಧೂರಿಯಾಗಿ ಮತಯಾಚನೆ ನಡೆಸಿದ್ರು.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆ; ಇದು ರಾಜ್ಯದ ಜನರನ್ನೇ ಬೆಚ್ಚಿಬೀಳಿಸೋ ಸ್ಟೋರಿ!

ಇನ್ನು, ಮಂಜುನಾಥ್​​ರನ್ನು ಗೆಲ್ಲಿಸಿ ಕನಕಪುರಕ್ಕೆ ಅಂಟಿರುವ ಕಳಂಕ ದೂರ ಮಾಡ್ಬೇಕು ಅಂತ ಹೆಚ್​​ಡಿಕೆ ಮನವಿ ಮಾಡಿದ್ರು. ಅಪರೂಪದ ವ್ಯಕ್ತಿ, ಹೃದಯವಂತ ಮಂಜುನಾಥ್ ಗೆಲ್ಲಿಸಬೇಕು ಅಂತ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ಮನವಿ ಮಾಡಿದ್ರು. ಈ ನಡುವೆ ಡಿಕೆಶಿ ವಿರುದ್ಧ ಮುಗಿಬೀಳೋದನ್ನ ಇಬ್ಬರೂ ನಾಯಕರು ಮರೀಲಿಲ್ಲ.

ಒಟ್ಟಾರೆ, ಒಂದೆಡೆ ಡಿಕೆಶಿ ಬ್ರದರ್ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿ. ಇನ್ನೊಂದೆಡೆ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್, ದೇವೇಗೌಡರ ಅಳಿಯ. ಈ ಎರಡೂ ಕುಟುಂಬಗಳ ಪ್ರತಿಷ್ಠೆಯ ಸಮರದಲ್ಲಿ ಯಾರ ಕೈ ಮೇಲಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಕೆ ಕೋಟೆಯಲ್ಲಿ ಮೈತ್ರಿ ನಾಯಕರ ಒಗ್ಗಟ್ಟು ಪ್ರದರ್ಶನ; ಡಾ. ಸಿ.ಎನ್​.ಮಂಜುನಾಥ್​ ಪರ ದೇವೆಗೌಡರ ಅದ್ಧೂರಿ ಮತಬೇಟೆ

https://newsfirstlive.com/wp-content/uploads/2024/04/Devegowda.jpg

Load More