Advertisment

ಇಂದಿರಾ ಎಮರ್ಜೆನ್ಸಿ ಸಿನಿಮಾ ವಿವಾದ.. ಪ್ರಿಯಾಂಕಾ ಗಾಂಧಿಗೆ ಕಂಗನಾ ಹೇಳಿದ್ದೇನು? VIDEO

author-image
admin
Updated On
ಇಂದಿರಾ ಎಮರ್ಜೆನ್ಸಿ ಸಿನಿಮಾ ವಿವಾದ.. ಪ್ರಿಯಾಂಕಾ ಗಾಂಧಿಗೆ ಕಂಗನಾ ಹೇಳಿದ್ದೇನು? VIDEO
Advertisment
  • ಎಮರ್ಜೆನ್ಸಿ ಬಿಡುಗಡೆಗೂ ಮುನ್ನ ರಾಜಕೀಯದಲ್ಲಿ ಸಂಚಲನ
  • ಇಂದಿರಾ ಜೀವನ ಹಾಗೂ 1975ರ ತುರ್ತು ಪರಿಸ್ಥಿತಿ ಕುರಿತ ಸಿನಿಮಾ
  • ಪ್ರಿಯಾಂಕಾಗೆ ನೀವು ಸಿನಿಮಾ ಇಷ್ಟಪಡುತ್ತೀರಿ ಎಂದ ಕಂಗನಾ

ಮಾಜಿ ಪ್ರಧಾನಿ ಇಂದಿರಾಗಾಂಧಿ ಜೀವನ ಹಾಗೂ 1975ರ ತುರ್ತು ಪರಿಸ್ಥಿತಿ ಕುರಿತ ಎಮರ್ಜೆನ್ಸಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಜನವರಿ 17ರಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ನಿರ್ಮಾಣ, ನಿರ್ದೇಶಿಸಿ, ಅಭಿನಯಿಸಿರುವ ಎಮರ್ಜೆನ್ಸಿ ಸಿನಿಮಾವನ್ನ ಬಿಡುಗಡೆ ಮಾಡಲಾಗುತ್ತಿದೆ.

Advertisment

ಕಂಗನಾ ರಣಾವತ್ ಅವರ ಎಮರ್ಜೆನ್ಸಿ ಸಿನಿಮಾ ಬಿಡುಗಡೆಗೂ ಮುನ್ನವೇ ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇಂದಿರಾಗಾಂಧಿ ಅವರ ಬಗ್ಗೆ ಯಾವುದೇ ಸೆನ್ಸೇಷನ್ ಮಾಡದೇ ಸಿನಿಮಾ ನಿರ್ಮಾಣ ಮಾಡಲಾಗಿದೆ ಎನ್ನಲಾಗಿದ್ದು, ಕತೆ-ಚಿತ್ರಕಥೆಯ ಮೇಲೆ ಕುತೂಹಲ ಹೆಚ್ಚಾಗಿದೆ.

publive-image

ಎಮರ್ಜೆನ್ಸಿ ಸಿನಿಮಾದ ಪ್ರಮೋಷನ್ ಮಧ್ಯೆಯೇ ನಟಿ ಕಂಗನಾ ರಣಾವತ್ ಅವರು ಸ್ಫೋಟಕ ಹೇಳಿಕೆಯನ್ನ ನೀಡಿದ್ದಾರೆ. ಕಂಗನಾ ರಣಾವತ್ ಅವರು ತಮ್ಮ ಎಮರ್ಜೆನ್ಸಿ ಸಿನಿಮಾ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Toxic ಫಸ್ಟ್​ ಲುಕ್ ರಿಲೀಸ್.. ಫಾರಿನ್ ಗರ್ಲ್​ ಜೊತೆ ರಾಕಿ ರೊಮ್ಯಾನ್ಸ್, ಫ್ಯಾನ್ಸ್ ಖುಷ್ 

Advertisment

ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ ಕಂಗನಾ ರಣಾವತ್ ಅವರು ಎಮರ್ಜೆನ್ಸಿ ಸಿನಿಮಾದಲ್ಲಿ 1975ರ ಜೂನ್ 25 ರಂದು ದೇಶದ ಮೇಲೆ ಎಮರ್ಜೆನ್ಸಿ ಹೇರಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ನಿರ್ಮಾಣ ಮಾಡಲಾಗಿದೆ. ಸಿನಿಮಾದಲ್ಲಿ ಯಾವುದೇ ಸೆನ್ಸೇಷನ್ ಮಾಡಿಲ್ಲ. ಇಂದಿರಾಗಾಂಧಿ ಅವರನ್ನು ಘನತೆಯಿಂದ ಸಿನಿಮಾದಲ್ಲಿ ತೋರಿಸಲಾಗಿದೆ. ಇಂದಿರಾಗಾಂಧಿ ಜೀವನದ ಬಗ್ಗೆ ಸಂಶೋಧನೆ ಮಾಡಿ ಸಿನಿಮಾ ಚಿತ್ರೀಕರಿಸಲಾಗಿದೆ ಎಂದಿದ್ದಾರೆ.


">January 8, 2025

ಪ್ರಿಯಾಂಕಾ ಗಾಂಧಿಗೆ ಪ್ರೀತಿಯ ಆಹ್ವಾನ!
ಇಂದಿರಾ ಗಾಂಧಿ ಅವರ ಎಮರ್ಜೆನ್ಸಿ ಕುರಿತಾದ ಈ ಸಿನಿಮಾ ಇದೇ ಜನವರಿ 17 ರಂದು ಬಿಡುಗಡೆ ಮಾಡಲಾಗುತ್ತಿದೆ. ನಟಿ, ಸಂಸದೆ ಕಂಗನಾ ರಣಾವತ್ ಅವರು ಸಿನಿಮಾದ ಪ್ರೀಮಿಯರ್ ಶೋ ನೋಡಲು ಬರುವಂತೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಗೆ ಆಹ್ವಾನ ಕೊಟ್ಟಿದ್ದಾರೆ.

Advertisment

ಸಂಸತ್‌ನಲ್ಲಿ ಭೇಟಿ ಮಾಡಿರುವ ಕಂಗನಾ ರಣಾವತ್ ಅವರು ನಾನು ಎಮರ್ಜೆನ್ಸಿ ಸಿನಿಮಾಗೆ ಪ್ರಿಯಾಂಕಾ ಗಾಂಧಿರನ್ನು ಆಹ್ವಾನಿಸಿದ್ದೇನೆ. ನೀವು ಸಿನಿಮಾವನ್ನು ಇಷ್ಟಪಡುತ್ತೀರಿ ಎಂದು ಹೇಳಿದ್ದೇನೆ. ಅವರು ಎಮರ್ಜೆನ್ಸಿ ಸಿನಿಮಾವನ್ನು ನೋಡುತ್ತಾರಾ ಕಾದು ನೋಡಬೇಕು ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment