/newsfirstlive-kannada/media/post_attachments/wp-content/uploads/2024/12/KAGANA.jpg)
ಬೆಂಗಳೂರಲ್ಲಿ ಕೆಲಸ ಮಾಡ್ತಿದ್ದ ಟೆಕ್ಕಿ ಅತುಲ್ ಸುಭಾಷ್ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿದೆ. ಸೋಶಿಯಲ್​ ಮೀಡಿಯಾದಿಂದ ಹಿಡಿದು ಕೋರ್ಟ್​ ಅಂಗಳದರೆಗೂ ಚರ್ಚೆ ಆಗ್ತಿದೆ. ಕೇಸ್​ಗೆ ಸಂಬಂಧಿಸಿದಂತೆ ತನಿಖೆಗಳು ನಡೆಯುತ್ತಿದ್ದು, ನ್ಯಾಯಕ್ಕಾಗಿ ಆಗ್ರಹ ಜೋರಾಗಿದೆ.
ಅತುಲ್ ಜೀವ ತೆಗೆದುಕೊಂಡ ಪ್ರಕರಣ ಸುಪ್ರೀಂಕೋರ್ಟ್​ ಮೆಟ್ಟೆಲೇರಿದೆ. ದುಡುಕಿನ ನಿರ್ಧಾರಕ್ಕೂ ಮುನ್ನ ಅತುಲ್ ಉತ್ತರ ಪ್ರದೇಶದ ಜಿಲ್ಲಾ ಜಡ್ಜ್​ ವಿರುದ್ದ ಆರೋಪಿಸಿದ್ರು. ಈ ಹಿನ್ನಲೆ ಜಿಲ್ಲಾ ಜಡ್ಜ್​ ವಿರುದ್ಧ ತನಿಖೆ ನಡೆಸಿ ಅಂತ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಗೆ ವಕೀಲರು ಪತ್ರ ಬರೆದಿದ್ದಾರೆ.
ಕಿಡಿ ಹೊತ್ತಿಸಿದ ಕಂಗನಾ..
ಜಸ್ಟಿಸ್​​​ ಫಾರ್​​​ ಅತುಲ್​​ ಅಭಿಯಾನ ನಡೀತಿರುವ ಹೊತ್ತಲ್ಲೇ ಬಿಜೆಪಿ ಸಂಸದೆ ಕಂಗನಾ ರಣಾವತ್​ ಶಾಕಿಂಗ್​ ಹೇಳಿಕೆ ನೀಡಿದ್ದಾರೆ.. ಘಟನೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಕಂಗನಾ, ಈ ರೀತಿಯ ಪ್ರಕರಣದ ಬಗ್ಗೆ ನಿರಂತರ ಪರಿಶೀಲನೆ ನಡೆಸಬೇಕು. ಇಂತಹ ಪ್ರಕರಣಗಳಲ್ಲಿ ಶೇ.99ರಷ್ಟು ಪುರುಷರು ತಪ್ಪಿತಸ್ಥರು ಅಂತ ಹೇಳಿ ಮತ್ತೊಂದು ಚರ್ಚೆಗೆ ಕಾರಣರಾಗಿದ್ದಾರೆ.
ಇದನ್ನೂ ಓದಿ:Justice Is Due ಅತುಲ್ ಸುಭಾಷ್ ಕೇಸ್‌ಗೆ ಹೊಸ ಟ್ವಿಸ್ಟ್; ಮಗನ ಮುಂದಿಟ್ಟುಕೊಂಡ ಟೆಕ್ಕಿ ಪತ್ನಿ ಮಾಡಿದ್ದೇನು?
ಅತುಲ್​ ಅವರ ವಿಡಿಯೋ ಹೃದಯವಿದ್ರಾವಕವಾಗಿದೆ. ಇಡೀ ದೇಶ ಆಘಾತದಲ್ಲಿದೆ. ಮದುವೆಯು ನಮ್ಮ ಭಾರತೀಯ ಸಂಪ್ರದಾಯದೊಂದಿಗೆ ಸಂಪರ್ಕ ಹೊಂದಿರುವವರೆಗೂ ಅದು ಉತ್ತಮವಾಗಿದೆ. ಆದರೆ ಕಮ್ಯುನಿಸಂ, ಸಮಾಜವಾದ ಮತ್ತು ಸ್ತ್ರೀವಾದದ ಧೋರಣೆಗಳು ಮದುವೆಯ ಸಾಂಪ್ರದಾಯಿಕತೆಯ ಹಳಿ ತಪ್ಪಿಸುತ್ತವೆ. ನಕಲಿ ಸ್ತ್ರಿವಾದ ಖಂಡನೀಯ. ಕೋಟ್ಯಾಂತರ ರೂಪಾಯಿ ಸುಲಿಗೆ ಮಾಡಲಾಗುತ್ತಿತ್ತು. ಶೇಕಡ 99ರಷ್ಟು ಮದುವೆಗಳಲ್ಲಿ ಪುರುಷರ ತಪ್ಪೇ ಹೆಚ್ಚಿರುತ್ತದೆ. ಹಾಗಾಗಿಯೇ ಇಂತಹ ತಪ್ಪುಗಳು ನಡೆಯುತ್ತವೆ ಎಂದು ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ.
ಸೋಶಿಯಲ್​ ಮೀಡಿಯಾದಲ್ಲಿ ಅತುಲ್ ಸಾವಿನ ನ್ಯಾಯಕ್ಕಾಗಿ ಕೂಗು ಹೆಚ್ಚಾಗಿದೆ. ಜಸ್ಟಿಸ್​ ಫಾರ್​​ ಅತುಲ್​​ ಎಂಬ ಹ್ಯಾಶ್​ಟ್ಯಾಗ್​​ ಬಳಸಿ ನ್ಯಾಯ ಕೇಳ್ತಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಟೆಕ್ಕಿ ದುರಂತ.. ಅತುಲ್ ಸುಭಾಷ್ ಪತ್ನಿ ಆರೋಪಗಳೆಲ್ಲಾ ಸುಳ್ಳಾ? ಸ್ಫೋಟಕ ಸತ್ಯಗಳು ಬಯಲು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us