Advertisment

ವಿನೇಶ್ ಫೋಗಟ್ ಗೆಲುವಿನ ಬಗ್ಗೆ ಕಂಗನಾ ರಣಾವತ್ ವ್ಯಂಗ್ಯ; ರೊಚ್ಚಿಗೆದ್ದ ಜನ..!

author-image
Ganesh
Updated On
ವಿನೇಶ್ ಫೋಗಟ್ ಗೆಲುವಿನ ಬಗ್ಗೆ ಕಂಗನಾ ರಣಾವತ್ ವ್ಯಂಗ್ಯ; ರೊಚ್ಚಿಗೆದ್ದ ಜನ..!
Advertisment
  • ಕುಸ್ತಿಯಲ್ಲಿ ಫೈನಲ್‌ಗೆ ಎಂಟ್ರಿಯಾದ ವಿನೇಶ್ ಪೋಗಟ್
  • ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಪಕ್ಕಾ
  • ಕಂಗನಾ ಪೋಸ್ಟ್​ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ

2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ವಿನೇಶ್ ಪೋಗಾಟ್​ ಇತಿಹಾಸ ನಿರ್ಮಿಸಿದ್ದಾರೆ. ಮಹಿಳೆಯರ 50 ಕೆಜಿ ವಿಭಾಗದ ಸೆಮಿಫೈನಲ್​​ನಲ್ಲಿ ಕ್ಯೂಬಾದ ಕುಸ್ತಿಪಟು ಯಸ್ನೆಲಿಸ್​ ಗುಜ್ಮನ್ ಸೋಲಿಸಿ ಫೈನಲ್ ಪ್ರವೇಶ ಮಾಡಿದ್ದಾರೆ. ಇದರೊಂದಿಗೆ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಫೋಗಾಟ್ ಸಾಧನೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ.

Advertisment

ಕಂಗನಾ ಹೇಳಿದ್ದೇನು..?
ವಿನೇಶ್ ಫೋಗಟ್ ಫೈನಲ್ ಪ್ರವೇಶದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಸಂಸದೆ ಕಂಗನಾ ರಣಾವತ್, ಭಾರತಕ್ಕೆ ಮೊದಲ ಚಿನ್ನ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ವಿನೇಶ್ ಫೋಗಟ್ ಒಮ್ಮೆ ಚಳವಳಿಯಲ್ಲಿ ಭಾವಹಿಸಿದ್ದರು. ಈ ವೇಳೆ ಅವರು ಮೋದಿ ನಿಮ್ಮ ಸಮಾಧಿಯನ್ನೂ ಅಗೆಯುತ್ತಾರೆ ಎಂದು ಹೇಳಿದ್ದರು. ಅದರ ಹೊರತಾಗಿಯೂ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಅತ್ಯುತ್ತಮ ತರಬೇತಿ, ತರಬೇತುದಾರರು ಮತ್ತು ಸೌಲಭ್ಯಗಳನ್ನು ಪಡೆದರು. ಇದು ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ಉತ್ತಮ ನಾಯಕ ಎಂದು ಬೆರೆದುಕೊಂಡಿದ್ದಾರೆ.

ಚಿನ್ನದ ನಿರೀಕ್ಷೆಯಲ್ಲಿ ಭಾರತ 
29 ವರ್ಷದ ಕುಸ್ತಿಪಟು ವಿನೇಶ್ ಫೋಗಟ್ ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಶರಣ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಇದರ ವಿರುದ್ಧ ದೇಶದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ವಿನೇಶ್ ಫೋಗಟ್ ದೀರ್ಘಕಾಲದವರೆಗೆ ಕುಸ್ತಿಯಿಂದ ದೂರ ಉಳಿದಿದ್ದರು. ವಿನೇಶ್ ಫೋಗಟ್ ಒಲಿಂಪಿಕ್ಸ್​​ಗೆ ಪ್ರವೇಶಿಸಿದ ಕೂಡಲೇ ಸಂಚಲನ ಮೂಡಿಸಿದ್ದಾರೆ.

https://twitter.com/SumitPhephana/status/1820887872188162537

Advertisment

ಇದನ್ನೂ ಓದಿ:IND vs SL: ಪ್ರತಿಷ್ಠೆಯ ಪ್ರಶ್ನೆ.. ಕೋಚ್ ಗಂಭೀರ್ ಇವತ್ತು ಈ ಆಟಗಾರರಿಗೆ ಕೊಕ್ ಕೊಡಲಿದ್ದಾರೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment