Advertisment

ಕಂಗನಾ ಅರೆ ಬೆತ್ತಲೆ ಫೋಟೋ ಶೇರ್ ಮಾಡಿದ ಕಾಂಗ್ರೆಸ್ ನಾಯಕಿ; ಬಿಜೆಪಿ ಕೆಂಡಾಮಂಡಲ; ಆಗಿದ್ದೇನು?

author-image
admin
Updated On
ಕಂಗನಾ ಅರೆ ಬೆತ್ತಲೆ ಫೋಟೋ ಶೇರ್ ಮಾಡಿದ ಕಾಂಗ್ರೆಸ್ ನಾಯಕಿ; ಬಿಜೆಪಿ ಕೆಂಡಾಮಂಡಲ; ಆಗಿದ್ದೇನು?
Advertisment
  • ಹಿಮಾಚಲ ಪ್ರದೇಶದ ’ಮಂಡಿ‘ ಕ್ಷೇತ್ರದಿಂದ ಕಂಗನಾ ರಣಾವತ್ ಸ್ಪರ್ಧೆ
  • 20 ವರ್ಷದಲ್ಲಿ ಹುಡುಗಿಯಿಂದ ರಾಣಿವರೆಗಿನ ಪಾತ್ರದಲ್ಲಿ ಅಭಿನಯಿಸಿದ್ದೇನೆ
  • ಕಾಂಗ್ರೆಸ್ ನಾಯಕಿ ಸುಪ್ರಿಯಾ ಫೋಟೋ ಪೋಸ್ಟ್‌ಗೆ ಕಂಗನಾ ಕೆಂಡಾಮಂಡಲ

ನವದೆಹಲಿ: ಲೋಕಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್, ಬಿಜೆಪಿ ನಾರಿಯರ ವಾಕ್ಸಮರ ರಂಗೇರಿದೆ. ನಟಿ ಕಂಗನಾ ರಣಾವತ್ ವಿರುದ್ಧ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಫೋಟೋ ಶೇರ್ ಮಾಡಿದ್ದಾರೆ ಎನ್ನಲಾಗಿದ್ದು, ಈ ಫೋಟೋ ವೈರಲ್ ಆಗಿದ್ದು, ತೀವ್ರ ಸಂಚಲನ ಸೃಷ್ಟಿಸಿದೆ.

Advertisment

ಬಿಜೆಪಿ ಹೈಕಮಾಂಡ್ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನತೆ ತಮ್ಮ ಇನ್ಸ್‌ಸ್ಟಾಗ್ರಾಂನಲ್ಲಿ ಕಂಗನಾ ಅವರ ಫೋಟೋ ಶೇರ್ ಮಾಡಿ ಇದನ್ನ ನೋಡಿದರೆ ಯಾವ ಭಾವನೆ ಮೂಡುತ್ತದೆ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ:ಬಿಜೆಪಿ 5ನೇ ಪಟ್ಟಿ ರಿಲೀಸ್​​​.. ನಟಿ ಕಂಗನಾ ರಣಾವತ್​ಗೆ ಲೋಕಸಭಾ ಟಿಕೆಟ್​​!

ಸುಪ್ರಿಯಾ ಶ್ರೀನತೆ ಅವರು ಶೇರ್ ಮಾಡಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು, ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಷ್ಟೊಂದು ಕೆಟ್ಟದಾಗಿ ಕಮೆಂಟ್ ಮಾಡುವ ಇವರನ್ನು ಪಕ್ಷದಿಂದಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisment

publive-image

ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರು ಸುಪ್ರಿಯಾ ಅವರ ಫೋಸ್ಟ್‌ ಶೇರ್ ಮಾಡಿಕೊಂಡು ಕಿಡಿಕಾರಿದ್ದಾರೆ. ಪ್ರೀತಿಯ ಸುಪ್ರಿಯಾ ಜೀ, ನಾನು ಕಳೆದ 20 ವರ್ಷದ ವೃತ್ತಿ ಜೀವನದಲ್ಲಿ ಎಲ್ಲಾ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಸಿನಿಮಾದಲ್ಲಿ ಹುಡುಗಿಯಿಂದ ರಾಣಿವರೆಗೂ, ದೇವತೆ, ಚಂದ್ರಮುಖಿ, ತಲೈವಿ ಹೀಗೆ ನಾನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಮ್ಮ ಮಕ್ಕಳನ್ನು ನಾವು ಪೂರ್ವಗ್ರಹಗಳ ಸಂಕೋಲೆಯಿಂದ ಮುಕ್ತಗೊಳಿಸಬೇಕು. ಪ್ರತಿಯೊಬ್ಬ ಮಹಿಳೆಯರಿಗೂ ಗೌರವ ಸಲ್ಲಿಸಬೇಕು ಎಂದಿದ್ದಾರೆ.


">March 25, 2024

ಕಾಂಗ್ರೆಸ್ ನಾಯಕಿಯ ಫೋಟೋ ಶೇರ್ ಸಂಚಲನ ಸೃಷ್ಟಿಸಿದ ಮೇಲೆ ಸುಪ್ರಿಯಾ ಅವರು ಸ್ಪಷ್ಟನೆ ನೀಡಿದ್ದಾರೆ. ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಡಿಲೀಟ್ ಮಾಡಲಾಗಿದ್ದು, ನನ್ನ ಖಾತೆಯಲ್ಲಿ ಯಾರೋ ಪೋಸ್ಟ್ ಮಾಡಿದ್ದಾರೆ. ಕಂಗನಾ ಅವರ ಅರೆ ಬೆತ್ತಲೆಯ ಫೋಟೋ ಶೇರ್ ಮಾಡಿರೋದು ನನ್ನಲ್ಲ ಎಂದು ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment