Advertisment

ಕನ್ವರ್ ಯಾತ್ರೆಗೆ ಯೋಗಿ ಸರ್ಕಾರದ ರೂಲ್ಸ್​ ಏನು..? ಬಿಟೌನ್ ಬ್ಯೂಟಿ ಕಂಗನಾ- ಸೋನ್ ಸೂದ್ ಮಧ್ಯೆ ವಾರ್​

author-image
Bheemappa
Updated On
ಕನ್ವರ್ ಯಾತ್ರೆಗೆ ಯೋಗಿ ಸರ್ಕಾರದ ರೂಲ್ಸ್​ ಏನು..? ಬಿಟೌನ್ ಬ್ಯೂಟಿ ಕಂಗನಾ- ಸೋನ್ ಸೂದ್ ಮಧ್ಯೆ ವಾರ್​
Advertisment
  • ಸೋನು ಸೂದ್-ಕಂಗನಾ ರಣಾವತ್ ಮಧ್ಯೆ ಏಟು-ಎದುರೇಟು
  • ಯಾತ್ರೆಯಲ್ಲಿ ಸಿಎಂ ಯೋಗಿ ಸರ್ಕಾರದ ನಿಯಮಗಳೇನು ಗೊತ್ತಾ?
  • ಕಂಗನಾ-ಸೋನು ನಡುವೆ ಹಲಾಲ್ VS ಮಾನವೀಯತೆ ಕದನ

ಉತ್ತರಪ್ರದೇಶ ಸರ್ಕಾರದ ಅದೊಂದು ನಿರ್ಧಾರ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಇದು ಬಾಲಿವುಡ್ ನಟರ ಮಧ್ಯೆ ವಾದ-ವಿವಾದಕ್ಕೂ ಕಾರಣವಾಗಿದೆ. ಕನ್ವರ್ ಯಾತ್ರೆಗೆ ಯೋಗಿ ಸರ್ಕಾರ ಹೊರಡಿಸಿರೋ ನಿಯಮವೊಂದು ಬಾಲಿವುಡ್ ನಟ ಸೋನು ಸೂದ್-ಬಿಟೌನ್ ಬೆಡಗಿ, ಸಂಸದೆ ಕಂಗನಾ ರಣಾವತ್ ಮಧ್ಯೆ ಏಟು-ಎದುರೇಟಿಗೆ ವೇದಿಕೆಯಾಗಿದೆ.

Advertisment

ಇದನ್ನೂ ಓದಿ:KRS ಒಳಹರಿವು ಭಾರೀ ಹೆಚ್ಚಳ.. ಅಪಾಯದ ಮಟ್ಟ ಮೀರಿದ ಕಾವೇರಿಯಲ್ಲಿ ಕೊಚ್ಚಿ ಹೋದ ಯುವಕ

ದೇಶದಲ್ಲಿ ಆಗಾಗ ಧರ್ಮ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಯೋಗಿನಾಡಲ್ಲಿ ಮತ್ತೊಂದು ಸುತ್ತಿದ ಧರ್ಮದ ಕಿಚ್ಚು ಹೊತ್ತಿಕೊಳ್ಳಲು ಕಾರಣವಾಗಿದೆ. ಇದೇ ವಿಚಾರಕ್ಕೆ ಬಾಲಿವುಡ್ ನಟ-ನಟಿಯ ಮಧ್ಯ ಗುದ್ದಾಟಕ್ಕೂ ವೇದಿಕೆಯಾಗಿದೆ.

ಇದನ್ನೂ ಓದಿ: ₹1 ಪಡೆಯದೇ ವಿನೋದ್ ದೋಂಡಾಲೆ ಜೊತೆ ಸಿನಿಮಾ ಮಾಡ್ತಿದ್ದೆ.. ಕಣ್ಣೀರು ಹಾಕಿ ಸತೀಶ್​ ನೀನಾಸಂ ಹೇಳಿದ್ದೇನು?

Advertisment

publive-image

ಉತ್ತರಪ್ರದೇಶದಲ್ಲಿ ಕನ್ವರ್ ಯಾತ್ರಾ ನಾಮಫಲಕ ವಿವಾದ

ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಗಳು ರೋಟಿ ಮೇಲೆ ಉಗಿಯುವ ದೃಶ್ಯಗಳು ವೈರಲ್ ಆಗಿತ್ತು. ಹೀಗಾಗಿ ಉತ್ತರಪ್ರದೇಶ ಸರ್ಕಾರ ಕನ್ವರ್ ಯಾತ್ರೆಗೆ ಕೆಲವೊಂದು ನೀತಿ-ನಿಯಮಗಳನ್ನ ಜಾರಿಗೆ ತಂದಿತ್ತು. ಯಾತ್ರೆಗೆ ಬರುವ ವರ್ತಕರು ತಮ್ಮ ಹೆಸರನ್ನ ನಾಮಫಲಕಗಳಲ್ಲಿ ಕಡ್ಡಾಯವಾಗಿ ನಮೂದು ಮಾಡ್ಬೇಕು ಅಂತ ತಿಳಿಸಿತ್ತು. ಇದ್ರಿಂದ ವ್ಯಾಪಾರಿಗಳು ಹಿಂದೂ-ಮುಸ್ಲಿಂ ಅನ್ನೋದು ಸ್ಪಷ್ಟವಾಗುತ್ತೆ ಅಂತ ಯೋಗಿ ಸರ್ಕಾರ ಈ ರೂಲ್ಸ್ ಮಾಡಿತ್ತು. ಇದೀಗ ಈ ವಿಚಾರಕ್ಕೆ ಸೋನು ಸೂದ್ ಮತ್ತು ಕಂಗನಾ ಮಧ್ಯೆ ಕದನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​​ಗೆ​ ಬಿಗ್ ಶಾಕ್.. ರೋಹಿತ್, ಸೂರ್ಯ ಬೇರೆ ಟೀಮ್​ಗೆ ಹೋಗೋದು ಕನ್​ಫರ್ಮ್​?

ಯೋಗಿ ಸರ್ಕಾರದ ನೀತಿಯ ಬಗ್ಗೆ ಧ್ವನಿ ಎತ್ತಿದ್ದ ಬಾಲಿವುಡ್ ನಟ ಸೋನು ಸೂದ್. ಮಾನವೀಯತೆಯ ಪಾಠ ಮಾಡಿದ್ರು. ಯುಪಿ ಸರ್ಕಾರದ ನಡೆ ಬಗ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ರು.

Advertisment

‘ಮಾನವೀಯತೆ ಬೇಕು’

ಪ್ರತಿಯೊಂದು ಅಂಗಡಿಗೂ ಒಂದೇ ನಾಮಫಲಕ ಇರಬೇಕು. ಅದೇ ಮಾನವೀಯತೆ.

-ಸೋನು ಸೂದ್, ಬಾಲಿವುಡ್ ನಟ

ಇದಷ್ಟೇ ಅಲ್ಲ, ಸೋನು ಸೂದ್ ರೋಟಿ ಮೇಲೆ ವ್ಯಕ್ತಿ ಉಗುಳುವುದಕ್ಕೆ ಸಮರ್ಥನೆ ರೀತಿಯಲ್ಲಿ ಟ್ವೀಟ್ ಮಾಡಿದ್ರು. ಆಹಾರದ ಮೇಲೆ ಉಗುಳುವುದನ್ನು ರಾಮನಿಗೆ ಶಬರಿ ಕಚ್ಚಿದ ಹಣ್ಣನ್ನು ಕೊಟ್ಟಿದ್ದನ್ನ ಹೋಲಿಕೆ ಮಾಡಿ ಸಮರ್ಥಿಸಿಕೊಂಡಿದ್ರು.

‘ರಾಮ ಶಬರಿ ಕಚ್ಚಿದ್ದ ಹಣ್ಣು ತಿಂದಿದ್ದ’

ನಮ್ಮ ಶ್ರೀರಾಮ, ಶಬರಿ ಕಚ್ಚಿ ಕೊಟ್ಟ ಹಣ್ಣುಗಳನ್ನ ತಿಂದಿದ್ದಾರೆ. ಹಾಗಾದರೆ ನಾನು ಇದನ್ನ ಏಕೆ ತಿನ್ನಬಾರದು? ಅಹಿಂಸೆಯಿಂದ ಹಿಂಸೆಯನ್ನು ಸೋಲಿಸಬಹುದು. ಮಾನವೀಯತೆ ಮಾತ್ರ ಉಳಿಯಬೇಕು.

-ಸೋನು ಸೂದ್, ಬಾಲಿವುಡ್ ನಟ

Advertisment

ಸೋನು ಸೂದ್ ಮಾಡಿದ್ದ ಟ್ವೀಟ್‌ನ ಕಂಡು ಬಾಲಿವುಡ್ ಬೆಡಗಿ, ಮಂಡಿ ಸಂಸದೆ ಕಂಗನಾ ರಣಾವತ್ ಕೆರಳಿ ಕೆಂಡವಾಗಿದ್ರು. ಈ ರೀತಿ ಉಗಿಯುವವರನ್ನ ಸೋನು ಸೂದ್ ಸಮರ್ಥಿಸಕೊಳ್ತಿದ್ದಾರೆ ಅಂತ ಕಿಡಿಕಾರಿದ್ರು. ಅಲ್ಲದೇ ಸೋನು ಸೂದ್ ನಡೆಯ ಬಗ್ಗೆ ಆಕ್ಷೇಪವನ್ನ ವ್ಯಕ್ತಪಡಿಸಿ ಟ್ವೀಟ್ ಮೂಲಕ ಗೇಲಿ ಮಾಡಿದ್ದಾರೆ.

ಇದನ್ನೂ ಓದಿ: ಹೈ ಅಲರ್ಟ್; ಮತ್ತೆ ಹರಡಿದ ನಿಫಾ ವೈರಸ್​.. ಗ್ರಾಮದ 3 ಕಿಲೋ ಮೀಟರ್ ಸುತ್ತ ದಿಗ್ಬಂಧನ

publive-image

‘ಹಲಾಲ್ ಮಾನವೀಯತೆಯೇ?’

ನಿಮ್ಮ ಮಾತನ್ನ ಒಪ್ಪುತ್ತೇನೆ, ಹಲಾಲ್ ಅನ್ನು "ಮಾನವೀಯತೆ" ಎಂದು ಬದಲಿಸಬೇಕೇ? ದೇವರು ಮತ್ತು ಧರ್ಮದ ಬಗ್ಗೆ ತಮ್ಮದೇ ಆದ ವೈಯಕ್ತಿಕ ಸಂಶೋಧನೆಗಳ ಆಧಾರದ ಮೇಲೆ ಸೋನು ಅವರು ತಮ್ಮದೇ ಆದ ರಾಮಾಯಣವನ್ನ ನಿರ್ದೇಶಿಸುತ್ತಿದ್ದಾರೆ. ಅದುವೇ ಬಾಲಿವುಡ್‌ನಿಂದ ಮತ್ತೊಂದು ರಾಮಾಯಣ.

-ಕಂಗನಾ ರಣಾವತ್, ಸಂಸದೆ

Advertisment

ಕನ್ವರ್ ಯಾತ್ರೆ ವಿಚಾರಕ್ಕೆ ಬಾಲಿವುಡ್ ಮಂದಿಯ ಮಧ್ಯೆಯೇ ಧರ್ಮ ದಂಗಲ್ ಶುರುವಾಗಿದೆ. ಇದು ಸಾಮಾನ್ಯ ಜನರ ಮೇಲೆ ಯಾವ ರೀತಿ ಪರಿಣಾಮ ಬಿರುತ್ತೋ? ವೇಯ್ಟ್‌ ಅಂಡ್ ವಾಚ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment