ನ್ಯೂಯಾರ್ಕ್​ ಮೇಯರ್ ಎಲೆಕ್ಷನ್​​ನಲ್ಲಿ ಭಾರತ ಮೂಲದ ಮಮ್ದಾನಿಗೆ ಗೆಲುವು.. ಕಂಗನಾ ಆಕ್ರೋಶ, ಹೇಳಿದ್ದೇನು..?

author-image
Ganesh
Updated On
ನ್ಯೂಯಾರ್ಕ್​ ಮೇಯರ್ ಎಲೆಕ್ಷನ್​​ನಲ್ಲಿ ಭಾರತ ಮೂಲದ ಮಮ್ದಾನಿಗೆ ಗೆಲುವು.. ಕಂಗನಾ ಆಕ್ರೋಶ, ಹೇಳಿದ್ದೇನು..?
Advertisment
  • ನ್ಯೂಯಾರ್ಕ್​ನ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ
  • ಜೋಹ್ರಾನ್ ಮಮ್ದಾನಿ ಯಾರು? ಭಾರತದ ಸಂಪರ್ಕ ಹೇಗಾಯ್ತು?
  • ನ್ಯೂಯಾರ್ಕ್​ ಜನರಿಗೆ ಜೋಹ್ರಾನ್ ಮಮ್ದಾನಿ ಕೊಟ್ಟ ಭರವಸೆ ಏನು?

ನ್ಯೂಯಾರ್ಕ್​ನ ಮೇಯರ್ (New York Mayor) ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಡೆಮಾಕ್ರಟಿಕ್ ಮತ್ತು ರಿಪಬ್ಲಿಕ್ ಪಕ್ಷಗಳು ಮೇಯರ್ ಸ್ಥಾನದ ಅಭ್ಯರ್ಥಿ ಆಯ್ಕೆ ಮಾಡಲು ಪ್ರೈಮರಿ ಚುನಾವಣೆ ನಡೆಸುತ್ತಿವೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ (Zohran Mamdani) ಪ್ರೈಮರಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಶೇ.43.5 ರಷ್ಟು ಮತ ಪಡೆದು ಮೇಯರ್ ಅಭ್ಯರ್ಥಿಯಾಗಿ ಜೋಹ್ರಾನ್ ಮಮ್ದಾನಿ ಆಯ್ಕೆಯಾಗಿದ್ದಾರೆ. ನ್ಯೂಯಾರ್ಕ್​ನ ಹಾಲಿ ಮೇಯರ್ ಆ್ಯಂಡ್ರೂ ಕೂಮೋರನ್ನು ಸೋಲಿಸಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ವಿಶೇಷ.

ಇದನ್ನೂ ಓದಿ: ಕಾರು ಓವರ್​ ಟೇಕ್ ಗಲಾಟೆ.. ಅನಂತ್ ಕುಮಾರ್ ಹೆಗಡೆ ವಿರುದ್ಧ ಎಫ್​ಐಆರ್..!

publive-image

ಜೋಹ್ರಾನ್ ಮಮ್ದಾನಿ ಆಯ್ಕೆಗೆ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೋಪ ವ್ಯಕ್ತಪಡಿಸಿದ್ದಾರೆ. ಜೋಹ್ರಾನ್ ಮಮ್ದಾನಿ ಶೇ.100 ರಷ್ಟು ಕಮ್ಯೂನಿಸ್ಟ್ ಹುಚ್ಚ ಎಂದು ಡೋನಾಲ್ಡ್ ಟ್ರಂಪ್ ಕರೆದಿದ್ದಾರೆ. ಜೋರಾನ್ ಮೊಮ್ದಾನಿಯನ್ನು ಬೆಂಬಲಿಸಿದವರನ್ನು ಡೋನಾಲ್ಡ್ ಟ್ರಂಪ್ ಟೀಕಿಸಿದ್ದಾರೆ. ಈ ಹಿಂದೆ ಮೂಲಭೂತವಾದಿ ಎಡಪಂಥೀಯರು ಇದ್ದರು, ಆದರೆ ಇದು ಹಾಸ್ಯಾಸ್ಪದ ಎಂದು ಟ್ರಂಪ್ ಹೇಳಿದ್ದಾರೆ. ಜೋಹ್ರಾನ್ ಮಮ್ದಾನಿ ಸ್ಮಾರ್ಟ್ ಅಲ್ಲ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಟ್ರೂತ್​ನಲ್ಲಿ ಡೋನಾಲ್ಡ್ ಟ್ರಂಪ್ ಟೀಕಿಸಿದ್ದಾರೆ. ನಮ್ಮ ಪ್ಯಾಲೆಸ್ಟೈನಿ ಸೆನೆಟರ್​ಗಳು ಜೋಹ್ರಾನ್ ಮಮ್ದಾನಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಟ್ರಂಪ್ ಕಿಡಿಕಾರಿದ್ದಾರೆ.

ಕಂಗನಾ ಕೂಡ ಟೀಕೆ..!

ಜೊಹ್ರಾನ್ ಮೆಮ್ದಾನಿಯನ್ನು ಸಂಸದೆ, ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಟೀಕಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಂಗನಾ.. ಇವರ ತಾಯಿ ಮೀರಾ ನಾಯರ್,  ಅತ್ಯುತ್ತಮ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರು. ಪದ್ಮಶ್ರೀ ಪುರಸ್ಕೃತರು. ಭಾರತದಲ್ಲಿ ಹುಟ್ಟಿ ಬೆಳೆದ ಇವರು, ನ್ಯೂಯಾರ್ಕ್​​ನಲ್ಲಿದ್ದಾರೆ. ಅವರು ಪ್ರಸಿದ್ಧ ಲೇಖಕ ಮೆಹಮೂದ್ ಮಮ್ದಾನಿ (ಗುಜರಾತಿ ಮೂಲದವರು)ಯನ್ನು ವಿವಾಹವಾದರು. ಇವರ ಮಗನ ಹೆಸರು ಜೋಹ್ರಾನ್ ಮಹ್ದಾನಿ. ಈತ ಭಾರತೀಯರಿಗಿಂತ ಹೆಚ್ಚು ಪಾಕಿಸ್ತಾನಿಯಾಗಿ ಕಾಣುತ್ತಾರೆ. ಈಗ ಅವರು ಹಿಂದೂ ಧರ್ಮ ಅಳಿಸಿಹಾಕಲು ಸಿದ್ಧರಾಗಿದ್ದಾರೆ. ವಾಹ್!! ಎಲ್ಲೆಡೆ ಒಂದೇ ಕಥೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ. 

ಜೋಹ್ರಾನ್ ಮಮ್ದಾನಿ ಯಾರು?

ಜೋಹ್ರಾನ್ ಮಮ್ದಾನಿ, ಪ್ಯಾಲೆಸ್ಟೀನ್ ಪರ ನಿಲುವು ಹೊಂದಿರುವ ನಾಯಕ. ಜೋಹ್ರಾನ್ ಮಮ್ದಾನಿಗೆ ಇನ್ನೂ 33 ವರ್ಷ ವಯಸ್ಸು. ಒಂದು ವೇಳೆ ಏನಾದರೂ ರಿಪಬ್ಲಿಕ್ ಪಕ್ಷದ ಮೇಯರ್ ಅಭ್ಯರ್ಥಿಯನ್ನು ಸೋಲಿಸಿ ಜೋಹ್ರಾನ್ ಮಮ್ದಾನಿ ಆಯ್ಕೆಯಾದರೆ 1914ರ ಬಳಿಕ ಈಗ ಅತಿ ಕಿರಿಯ ಮೇಯರ್ ಆಗಲಿದ್ದಾರೆ. ಜೋಹ್ರಾನ್ ಮಮ್ದಾನಿ ಚುನಾವಣಾ ಪ್ರಚಾರ ಭಾಷಣಗಳಲ್ಲಿ ನ್ಯೂಯಾರ್ಕ್​ನಲ್ಲಿ ಉಚಿತ ಸಿಟಿ ಬಸ್ ಸೌಲಭ್ಯ ನೀಡುವ ಭರವಸೆ ನೀಡಿದ್ದಾರೆ. ಬ್ಯುಸಿನೆಸ್, ಶ್ರೀಮಂತ ವ್ಯಕ್ತಿಗಳ ಮೇಲೆ 10 ಬಿಲಿಯನ್ ಡಾಲರ್ ತೆರಿಗೆ ವಿಧಿಸಿ, ಹಣ ಸಂಗ್ರಹಿಸಿ, ಜನರಿಗೆ ಉಚಿತ ಸೌಲಭ್ಯ ನೀಡಿಕೆ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ದೆಹಲಿ ಪ್ರವಾಸದಲ್ಲಿ ಏನೆಲ್ಲ ಆಯ್ತು..? ಹೈಕಮಾಂಡ್​ ಗರಂ ಆಗಿದ್ದು ಯಾಕೆ..?

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯುಹು ನ್ಯೂಯಾರ್ಕ್​ಗೆ ಭೇಟಿ ನೀಡಿದ್ರೆ ಬಂಧಿಸಬೇಕು ಎಂದು ಜೋಹ್ರಾನ್ ಮಮ್ದಾನಿ ಹೇಳಿದ್ದಾರೆ. ಬೆಂಜಮಿನ್ ನೇತಾನ್ಯುಹು ವಿರುದ್ಧ ಕೋರ್ಟ್ ಬಂಧಿಸಲು ಈ ಹಿಂದೆಯೇ ತೀರ್ಪು ನೀಡಿದೆ. ಹೀಗಾಗಿ ಬಂಧಿಸಬೇಕು ಎಂದು ಜೋಹ್ರಾನ್ ಮಮ್ದಾನಿ ಹೇಳಿದ್ದಾರೆ. ಈ ಮೂಲಕ ಇಸ್ರೇಲ್ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಜೋಹ್ರಾನ್ ಮಮ್ದಾನಿ ಪತ್ನಿ ರಾಮಾ ದುವಾಜಿ ಸಿರಿಯಾದ ಡಮಾಸ್ಕಸ್ ಮೂಲದವರು. ಜೋಹ್ರಾನ್ ಮಮ್ದಾನಿ ತಂದೆ ಮೊಹಮ್ಮದ್ ಮೆಮ್ದಾನಿ ಭಾರತ ಮೂಲದವರಾಗಿದ್ದು ಉಗಾಂಡದಲ್ಲಿ ಪ್ರೊಫೆಸರ್ ಆಗಿದ್ರು. ತಾಯಿ ಫಿಲಂ ಮೇಕರ್ ಮೀರಾ ನಾಯರ್. ಹೀಗಾಗಿ ಜೋರಾನ್ ಮೋಮ್ದಾನಿ ಭಾರತ ಮೂಲದವರು. ಈಗ ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಯಾರಾಗ್ತಾರೆ ಎಂಬ ಕುತೂಹಲ ಇದೆ.

ಇದನ್ನೂ ಓದಿ: ಸಿದ್ದು ಮುಂದೆ ಶಾಸಕರ ಸಿಟ್ಟು ಸ್ಫೋಟ.. BR ಪಾಟೀಲ್​, ರಾಜು ಕಾಗೆಗೆ ಸಿಎಂ ಬುದ್ಧಿಮಾತು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment