/newsfirstlive-kannada/media/post_attachments/wp-content/uploads/2025/02/KANGRA-FORT-3.jpg)
ನಮ್ಮ ದೇಶದಲ್ಲಿರುವ ಪ್ರತಿಯೊಂದು ಕೋಟೆಯೂ ಕೂಡ ತನ್ನ ಪುರಾತನ ಚರಿತೆಯನ್ನು ಹೇಳುತ್ತವೆ. ತನ್ನ ಹಿಂದಿನ ಗತವೈವಭದ ಗುರುತನ್ನು ಮೌನವಾಗಿ ನುಡಿಯುತ್ತವೆ. ಒಂದು ಕಾಲದಲ್ಲಿ ಭಾರತದ ಪ್ರತಿಯೊಂದು ಕೋಟೆಯೂ ಸಂಪತ್ತಿನಿಂದ ತುಂಬಿತ್ತು. ದಾಳಿಕೋರರು ಬಂದು ಲೂಟಿ ಹೊಡೆದುಕೊಂಡು ಹೋದರೂ ಕೂಡ ಮುಗಿಯದಷ್ಟು ಸಂಪತ್ಭರಿತ ದೇಶ ಇದಾಗಿತ್ತು. ಇಲ್ಲಿನ ಸಂಪತ್ತಿನ ಆಸೆಗಾಗಿಯೇ ಆಚೆಯಿಂದ ಅನೇಕ ರಾಜರುಗಳು ಆಕ್ರಮಣ ಮಾಡಿದರು. ದೇವಸ್ಥಾನದಿಂದ ಹಿಡಿದು ಪ್ರತಿಯೊಬ್ಬ ರಾಜನ ಕೋಟೆಯ ಸಂಪತ್ತನ್ನು ಕೂಡ ಕೊಳ್ಳೆ ಹೊಡೆದರು. ಆದ್ರೆ ಹಿಮಾಚಲ ಪ್ರದೇಶದಲ್ಲಿರುವ ಈ ಒಂದು ಕೋಟೆಯಲ್ಲಿ ಇಂದಿಗೂ ಕೂಡ ಎಂದಿಗೂ ಮುಗಿಯದ ಸಂಪತ್ತು ಇದೆ ಎಂದು ಹೇಳಲಾಗುತ್ತದೆ.
ಹಿಮಾಚಲ ಪ್ರದೇಶದಲ್ಲಿರುವ ಈ ಕೋಟೆಯನ್ನು ಅತ್ಯಂತ ಪುರಾತನ ಕೋಟೆಯೆಂದು ಹೇಳಲಾಗುತ್ತದೆ. ಇದನ್ನು ಕಂಗರಾ ಕಿಲ್ಲೆ ಎಂಬ ಹೆಸರಿನಿಂದಲೇ ಕರೆಯುತ್ತಾರೆ. ಹಿಮಾಚಲ ಪ್ರದೇಶದ ಕಂಗರಾ ಜಿಲ್ಲೆಯಲ್ಲಿದೆ. ಇದು ಸುಮಾರು 463 ಎಕರೆಯಲ್ಲಿ ವ್ಯಾಪ್ತಿಯಲ್ಲಿ ಹರಡಿಕೊಂಡದೆ. ಹಿಮಾಚಲ ಪ್ರದೇಶದಲ್ಲಿರುವ ಎಲ್ಲಾ ಕೋಟೆಗಳಿಗಿಂತ ಇದು ಅತ್ಯಂತ ವಿಶಾಲವಾದ ಕೋಟೆಯೆಂದು ಕರೆಯುತ್ತಾರೆ. ಇದರ ಹಿಂದೆ ಅನೇಕ ಕಥೆಗಳಿವೆ. ಈ ಕೋಟೆಯ ಸಂಪತ್ತಿನ ಬಗ್ಗೆ ಇಂದಿಗೂ ಕೂಡ ಮಾತನಾಡಲಾಗುತ್ತದೆ.
ಈ ಕಂಗಢ ರಾಜ್ಯವನ್ನು ರಜಪೂತ ಸಮುದಾದಯ ಕಟೋಚ್ ವಂಶದವರು ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ. ಆ ರಾಜ ತಾನು ತ್ರಿಗಟ ಸಾಮ್ರಾಜ್ಯದ ವಂಶಜನೆಂದು ಪ್ರಮಾಣವನ್ನು ನೀಡಿದ್ದ. ಈ ತ್ರಿಗತ ಸಾಮ್ರಾಜ್ಯದ ಉಲ್ಲೇಖ ಮಹಾಭಾರತದಲ್ಲಿಯೂ ಕೂಡ ಕೇಳಿ ಬರುತ್ತದೆ. ಏಪ್ರಿಲ್ 4 1905ರಲ್ಲಿ ನಡೆದ ಒಂದು ಭೀಕರ ಭೂಕಂಪದಿಂದಾಗಿ ಬ್ರಿಟಿಷರು ಈ ಕೋಟೆಯನ್ನು ತೊರೆದು ಹೋದರು. ಭೂಕಂಪದಿಂದಾಗಿ ಈ ಕೋಟೆಗೂ ಕೂಡ ಭಯಂಕರ ಹಾನಿಯಾಯ್ತು. ಇದರೊಂದಿಗೆ ಅತ್ಯಂತ ಅಮೂಲ್ಯವಾದ ಕಲಾಕೃತಿಗಳು, ಕಟ್ಟಗಳು ನಷ್ಟವಾಗಿ ಹೋದವು. ಆದರೂ ಕೂಡ ಈ ಒಂದು ಕೋಟೆ ಇತಿಹಾಸದ ಅನೇಕ ಕಥೆಗಳನ್ನೊಳಗೊಂಡಿದೆ.
ಒಂದು ಮೂಲಗಳು ಹೇಳುವ ಪ್ರಕಾರ ಈ ಒಂದು ಕೋಟೆಯ ಒಟ್ಟು 21 ಬಾವಿಗಳಲ್ಲಿ ಭಾರೀ ನಿಕ್ಷೇಪಗಳನ್ನು ತುಂಬಿಡಲಾಗಿತ್ತು ಎಂದು ಹೇಳಲಾಗುತ್ತದೆ. ಪ್ರತಿಯೊಂದು ಬಾವಿಯೂ 4 ಮೀಟರ್ ಉದ್ದ ಹಾಗೂ 2.5 ಮೀಟರ್ ಅಗಲ ಇದ್ದವೆಂದು ಇತಿಹಾಸ ಹೇಳುತ್ತದೆ. 1890ರ ದಶಕದಲ್ಲಿ ಮೊಹಮ್ಮದ್ ಘಜ್ನಿ ಈ ಕೋಟೆಯ ಮೇಲೆ ಆಕ್ರಮಣ ಮಾಡಿ ಸುಮಾರು 8 ಬಾವಿಗಳಲ್ಲಿ ಅಡಗಿದ್ದ ಸಂಪತ್ತನ್ನು ಲೂಟಿ ಮಾಡಿದನು ಎಂದು ಹೇಳಲಾಗುತ್ತದೆ. ಇನ್ನು ಬ್ರಿಟಿಷರು 5 ಬಾವಿಗಳನ್ನು ಲೂಟಿ ಹೊಡೆದರು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ.
ಇದನ್ನೂ ಓದಿ:ಮಹಿಳಾ ದಿನಾಚರಣೆಯಂದು ದೇಶದ ಯಶಸ್ವಿ ವನಿತೆಯರಿಗೆ ಮೋದಿ ಬಿಗ್ ಗಿಫ್ಟ್; ಏನದು ಗೊತ್ತಾ?
ಇನ್ನೂ 8 ಬಾವಿಗಳು ಹಾಗೆಯೇ ಉಳಿದುಕೊಂಡಿವೆ. ಮುಗುಚಿ ಹೋಗಿರುವ ಈ ಕೋಟೆಯ ಅನೇಕ ಕಡೆಯಲ್ಲಿ ಆ ಬಾವಿಗಳಲ್ಲಿ ಎಂದೂ ಮುಗಿಯದ ಸಂಪತ್ತು ಅಡಗಿದೆ ಎಂದು ಹೇಳಲಾಗುತ್ತದೆ. ಆದ್ರೆ ಇದರ ಸತ್ಯಾಸತ್ಯತೆಗಳು ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಈ ಒಂದು ಕೋಟೆ ನೋಡಲು ಬಯಸುವವರು ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ಸರಳವಾಗಿ ಟ್ಯಾಕ್ಸಿ ಇಲ್ಲವೇ ಬಸ್ ಹಿಡಿದುಕೊಂಡು ಹೋಗಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ