‘ಮ್ಯಾನೇಜರ್‌ ಕ್ಷಮೆ ಕೇಳಬೇಕು’.. SBI ಬ್ಯಾಂಕ್​ಗೆ ನುಗ್ಗಿ ಪಟ್ಟು ಹಿಡಿದ ಕನ್ನಡಿಗರಿಂದ ತೀವ್ರ ಆಕ್ರೋಶ

author-image
Veena Gangani
Updated On
‘ಮ್ಯಾನೇಜರ್‌ ಕ್ಷಮೆ ಕೇಳಬೇಕು’.. SBI ಬ್ಯಾಂಕ್​ಗೆ ನುಗ್ಗಿ ಪಟ್ಟು ಹಿಡಿದ ಕನ್ನಡಿಗರಿಂದ ತೀವ್ರ ಆಕ್ರೋಶ
Advertisment
  • ಕನ್ನಡ ಭಾಷೆಗೆ ಬ್ಯಾಂಕ್ ಮ್ಯಾನೇಜರ್ ಅಪಮಾನ ಹಿನ್ನೆಲೆ
  • ಚಂದಾಪುರ SBI ಬ್ಯಾಂಕ್ ಶಾಖೆ ಮುಂಭಾಗ ಪ್ರತಿಭಟನೆ
  • SBI ಬ್ಯಾಂಕ್ ಶಾಖೆ ಮ್ಯಾನೇಜರ್ ವಿರುದ್ಧ ತೀವ್ರ ಆಕ್ರೋಶ

ಬೆಂಗಳೂರು: ಕನ್ನಡ ಭಾಷೆಗೆ ಬ್ಯಾಂಕ್ ಮ್ಯಾನೇಜರ್ ಅಪಮಾನ ಮಾಡಿದ್ದ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರರು ಚಂದಾಪುರ SBI ಬ್ಯಾಂಕ್ ಶಾಖೆಗೆ ನುಗ್ಗಿ ಪ್ರತಿಭಟನೆ ಮಾಡಿದ್ದಾರೆ.

ಇದನ್ನೂ ಓದಿ: ಜಸ್ಟ್‌ 7 ತಿಂಗಳಲ್ಲಿ 25 ಮದುವೆ.. 23 ವರ್ಷದ ಸುಂದರಿ ಸಂಚು ಬಾಲಿವುಡ್‌ ಸಿನಿಮಾನೂ ಮೀರಿಸಿದ ಸ್ಟೋರಿ!

publive-image

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿರೋ SBI ಬ್ಯಾಂಕ್​ಗೆ ಏಕಾಏಕಿ ಬಂದು ಆಕ್ರೋಶ ಹೊರ ಹಾಕಿದ್ದಾರೆ. ಕನ್ನಡದ ಬಗ್ಗೆ ಅವಹೇಳನ ಮಾಡುವ ಕಿಡಿಗೇಡಿಗಳಿಗೆ ನುಗ್ಗಿ ಹೊಡೆಯುವ ಕೆಲ್ಸಾ ಮಾಡ್ತೀವಿ. ಪೊಲೀಸರ ಮುಂದಿಟ್ಟು ಪ್ರತಿಭಟನೆ ಹತ್ತಿಕ್ಕಿದರೆ ಕೇಳುವವರು ಯಾರೂ ಇಲ್ಲ. ಮಹಾರಾಷ್ಟ್ರ ಮಾದರಿಯಂತೆ ನುಗ್ಗಿ ಹೊಡೆಯುತ್ತೇವೆ ಅಂತ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

publive-image

ಕನ್ನಡ ಭಾಷೆಯಲ್ಲಿ ಮಾತನಾಡುವುದಿಲ್ಲ. ಗ್ರಾಹಕರೊಬ್ಬರು ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಯಾವುದೇ ಕಾರಣಕ್ಕೂ ಕನ್ನಡ ಮಾತನಾಡುವುದಿಲ್ಲ ಅಂತ ಹೇಳಿ ಹಿಂದಿಯಲ್ಲಿ ಮಾತ್ರ ಮಾತನಾಡುತ್ತೆನೆ ಎಂದು ಧಿಮಾಕು ತೋರಿಸಿದ್ದಾರೆ. ಕನ್ನಡ ಭಾಷೆಗೆ ಅಪಮಾನ ಮಾಡಿದಕ್ಕೆ ನಮ್ಮ ಮುಂದೆ ಬಂದು ಕನ್ನಡಿಗರಿಗೆ ಕ್ಷಮೆ ಕೊರಬೇಕು ಎಂದು ಆಗ್ರಹಿಸಬೇಕು ಅಂತ ಬೀಗಿ ಪಟ್ಟು ಹಿಡಿದಿದ್ದಾರೆ.

publive-image

ಇನ್ನೂ, ಬ್ಯಾಂಕ್ ಮ್ಯಾನೇಜರ್ ವಿಡಿಯೋ ವೈರಲ್​ ಆಗುತ್ತಿದ್ದಂತೆ ಮ್ಯಾನೇಜರ್ ವರ್ಗಾವಣೆ ಮಾಡಿದ್ದಾರೆ. ಕನ್ನಡಿಗರ ಹೋರಾಟಕ್ಕೆ ಹೆದರಿ ರಾತ್ರೋರಾತ್ರಿ ಟ್ರಾನ್ಸ್​ಪರ್ ಮಾಡಲಾಗಿದೆ. ಹೊರ ರಾಜ್ಯಕ್ಕೆ ವರ್ಗಾವಣೆಗೊಳಿಸಿ ಎಂದು ನಿನ್ನೆ ರಾತ್ರಿಯೇ ಆದೇಶ ನೀಡಲಾಗಿತ್ತು. ಹೀಗಾಗಿ ಆ ಬ್ಯಾಂಕ್​ ಮ್ಯಾನೇಜರ್ ಅನ್ನು ಮಾಡಲಾಗಿತ್ತು. ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯನವರೇ ಟ್ವಿಟ್​ ಮಾಡುವ ಮೂಲಕ ಮ್ಯಾನೇಜರ್ ನಡೆ ಖಂಡಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment