Dwarakish No More: ಕರುನಾಡ ಕುಳ್ಳ, ನಟ, ನಿರ್ಮಾಪಕ ದ್ವಾರಕೀಶ್‌ ನಿಧನ

author-image
admin
Updated On
Dwarakish No More: ಕರುನಾಡ ಕುಳ್ಳ, ನಟ, ನಿರ್ಮಾಪಕ ದ್ವಾರಕೀಶ್‌ ನಿಧನ
Advertisment
  • 81 ವರ್ಷದ ಕನ್ನಡ ಚಲನಚಿತ್ರದ ಹಿರಿಯ ನಟ ದ್ವಾರಕೀಶ್ ನಿಧನ
  • ದ್ವಾರಕೀಶ್ ಅವರ ಪೂರ್ಣ ಹೆಸರು ಬಂಗ್ಲೆ ಶಾಮಾ ದ್ವಾರಕೀಶ್
  • 1 ಲಕ್ಷ ರೂ. ಬಂಡವಾಳದಲ್ಲಿ ಮೇಯರ್ ಮುತ್ತಣ್ಣ ಸಿನಿಮಾ ನಿರ್ಮಾಣ

ಕನ್ನಡ ಚಲನಚಿತ್ರದ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ.. ಅನಾರೋಗ್ಯದ ಹಿನ್ನೆಲೆಯಲ್ಲಿ 81 ವರ್ಷದ ಹಿರಿಯ ನಟ ವಿಧಿವಶರಾಗಿದ್ದಾರೆ. ದ್ವಾರಕೀಶ್ ಅವರು ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇದು ಬೆಂಗಳೂರಿನ ನಿವಾಸದಲ್ಲಿ ನಟ ದ್ವಾರಕೀಶ್ ಅವರು ಕೊನೆಯುಸಿರೆಳೆದಿದ್ದಾರೆ.

ದ್ವಾರಕೀಶ್ ಅವರು ಕನ್ನಡ ನಾಡಿನ ಕುಳ್ಳ ಎಂದೇ ಖ್ಯಾತಿಗಳಿಸಿದ್ದರು. ದ್ವಾರಕೀಶ್ ಅವರ ಪೂರ್ಣ ಹೆಸರು ಬಂಗ್ಲೆ ಶಾಮಾ ದ್ವಾರಕೀಶ್. 1942 ಆಗಸ್ಟ್ 19ರಂದು ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಿಸಿದ್ದರು. ದ್ವಾರಕೀಶ್ ಅವರ ತಂದೆ ಶಮಾರಾವ್ ಮತ್ತು ತಾಯಿ ಜಯಮ್ಮ, ಪತ್ನಿ ಅಂಬುಜ.

ಇದನ್ನೂ ಓದಿ: Breaking: ಕನ್ನಡ ಹಿರಿಯ ನಟ ದ್ವಾರಕೀಶ್​ ಇನ್ನಿಲ್ಲ

ನಟ ದ್ವಾರಕೀಶ್ ಅವರು ಮೊದಲ ಬಾರಿಗೆ 1995ರಲ್ಲಿ 2000 ರೂಪಾಯಿ ವೆಚ್ಚದಲ್ಲಿ ಮಮತೆಯ ಬಂಧನ ಸಿನಿಮಾ ನಿರ್ಮಾಣ ಮಾಡಿದ್ದರು. ಇದಾದ ಮೇಲೆ ಮೇಯರ್ ಮುತ್ತಣ್ಣ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕನಾಗಿ ಬಡ್ತಿ ಪಡೆದರು.

ದ್ವಾರಕೀಶ್ ಅವರು ಬರೋಬ್ಬರಿ 1 ಲಕ್ಷ ರೂಪಾಯಿ ಬಂಡವಾಳದಲ್ಲಿ ಮೇಯರ್ ಮುತ್ತಣ್ಣ ಸಿನಿಮಾ ನಿರ್ಮಾಣ ಮಾಡಿ ದಾಖಲೆ ಬರೆದಿದ್ದರು. ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ನೀ ಬರೆದ ಕಾದಂಬರಿ ದ್ವಾರಕೀಶ್ ನಿರ್ದೇಶನದ ಮೊದಲ ಚಿತ್ರವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment