newsfirstkannada.com

ಸುಬ್ಬಲಕ್ಷ್ಮೀ ಸಂಸಾರ ಸೀರಿಯಲ್‌ನ ಸ್ಟಾರ್ ಜೋಡಿಯಿಂದ ಗುಡ್‌ನ್ಯೂಸ್‌!

Share :

Published May 12, 2024 at 10:20am

Update May 12, 2024 at 10:23am

  ನಟ ಭವಾನಿ ಸಿಂಗ್​ ಅವರ ಮನೆಯಲ್ಲಿ ಸಂತಸದ ವಾತಾವರಣ

  ರಕ್ಷಾ ಬಂಧನ ಧಾರಾವಾಹಿ ಮೂಲಕ ಎಲ್ಲರ ಮನೆ ಮಾತಾಗಿದ್ದ ನಟ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ದಂಪತಿ ಫೋಟೋ

ಕಿರುತೆರೆ ನಟ ನಟ ಭವಾನಿ ಸಿಂಗ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದ ವಿಚಾರವನ್ನು ಅಭಿಮಾನಿಗಳೊಂದಿಗೆ ನಟ ಭವಾನಿ ಸಿಂಗ್ ಹಂಚಿಕೊಂಡಿದ್ದಾರೆ. ನಟ ಭವಾನಿ ಸಿಂಗ್ ಅವರು ಚರಣದಾಸಿ, ಸುಬ್ಬಲಕ್ಷ್ಮೀ ಸಂಸಾರ, ರಕ್ಷಾ ಬಂಧನ ಧಾರಾವಾಹಿ ಮೂಲಕ ಎಲ್ಲರ ಮನೆ ಮಾತಾಗಿದ್ದರು. ಇದೀಗ ಕಿರುತೆರೆ ನಟ ಭವಾನಿ ಸಿಂಗ್ ಅವರು ಅಭಿಮಾನಿಗಳಿಗೆ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದಾರೆ.

ಇದನ್ನೂ ಓದಿ: ಅಪ್ಪ, ಅಮ್ಮ.. ಬದುಕಿಸಿ ಬಿಡಿ.. ಕರುಳು ಹಿಂಡುತ್ತೆ ಪ್ರವಾಹದಲ್ಲಿ ಫ್ಯಾಮಿಲಿ ಕಳೆದುಕೊಂಡ ಪುಟಾಣಿಯ ಕಣ್ಣೀರ ಕತೆ

ಹೌದು, ನಟ ಭವಾನಿ ಸಿಂಗ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದೀಗ ನಟ ಭವಾನಿ ಸಿಂಗ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ನಟ ಭವಾನಿ ಸಿಂಗ್ ಮತ್ತು ಪಂಕಜಾ ಶಿವಣ್ಣ ಕಳೆದ 2019 ನವೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಇಬ್ಬರು ಕೂಡ ಒಂದೇ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದ್ದರು. ಪಂಕಜಾ ಮತ್ತು ಭವಾನಿ ಸಿಂಗ್ ಸುಬ್ಬಲಕ್ಷ್ಮೀ ಸಂಸಾರ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದ್ದರು. ಅದರ ಜೊತೆಗೆ ಭವಾನಿ ಸಿಂಗ್ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು.

ಸದ್ಯ ಈ ಸ್ಟಾರ್​ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿ ವಿಚಾರವನ್ನು ನಟ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಬ್ಬಲಕ್ಷ್ಮೀ ಸಂಸಾರ ಸೀರಿಯಲ್‌ನ ಸ್ಟಾರ್ ಜೋಡಿಯಿಂದ ಗುಡ್‌ನ್ಯೂಸ್‌!

https://newsfirstlive.com/wp-content/uploads/2024/05/bhavani1.jpg

Load More