/newsfirstlive-kannada/media/post_attachments/wp-content/uploads/2024/09/DARSHAN_PHOTO.jpg)
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್​ ಆರೋಪದ ಮೇಲೆ ಪರಪ್ಪನ ಅಗ್ರಹಾರದಿಂದ ಸೆಂಟ್ರಲ್ ಜೈಲ್​ಗೆ ದರ್ಶನ್ ಶಿಫ್ಟ್​ ಆಗಿದ್ದಾರೆ. ಇಂದು ದರ್ಶನ್ ನ್ಯಾಯಾಂಗ ಬಂಧನ ಅಂತ್ಯವಾಗಿದೆ. ಹೀಗಾಗಿ ನಿನ್ನೆ ರಾತ್ರಿಯಿಂದಲೇ ನಟ ದರ್ಶನ್​ ಟೆನ್ಷನ್ ಶುರುವಾಗಿದೆ.
/newsfirstlive-kannada/media/post_attachments/wp-content/uploads/2024/09/Darshan-In-jail-2.jpg)
ಪರಪ್ಪನ ಅಗ್ರಹಾರದಿಂದ ನಟ ದರ್ಶನ್​ನನ್ನು ಆಗಸ್ಟ್​ 29ರಂದು ಸೆಂಟ್ರಲ್ ಜೈಲಿಗೆ ಶಿಫ್ಟ್​ ಮಾಡಲಾಗಿತ್ತು. ಇಂದಿಗೆ 13 ದಿನಗಳ ನ್ಯಾಯಾಂಗ ಬಂಧನ ಅಂತ್ಯವಾಗಿದೆ. ಮತ್ತೆ ಎಲ್ಲಿ ನ್ಯಾಯಾಂಗ ವಿಸ್ತರಣೆ ಮಾಡುತ್ತಾರೆ ಎಂಬ ಆತಂಕ ಮನೆಮಾಡಿದೆ. ಇಂದು ನಟ ದರ್ಶನ್​ ಬಳ್ಳಾರಿ ಜೈಲ್‌ನ ವಿಸಿ ಮೂಲಕ ಕೋರ್ಟ್ ಕಛೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್​ ಮುಂದೆ ಹಾಜರಾಗಲಿದ್ದಾರೆ.
/newsfirstlive-kannada/media/post_attachments/wp-content/uploads/2024/08/Darshan-Bellary-Jail-1.jpg)
ಈ ವೇಳೆ ಸೆಂಟ್ರಲ್ ಜೈಲಿನಿಂದ ಬೇರೆ ಜೈಲಿಗೆ ಶಿಫ್ಟ್‌ಗೆ ಮಾಡಲು ದರ್ಶನ್​ ಮನವಿ ಮಾಡೋ ಸಾಧ್ಯತೆ ಇದೆ. ಈಗಾಗಲೇ ಬೇರೆ ಜೈಲ್ ಶಿಫ್ಟ್‌ಗೆ ಕುಟುಂಬಸ್ಥರೊಂದಿಗೆ ದರ್ಶನ್ ಚರ್ಚೆ ಮಾಡಿದ್ದಾರಂತೆ. ನ್ಯಾಯಾಂಗ ಬಂಧನದ ತೀರ್ಮಾನ, ಬೇಲ್ ಅರ್ಜಿ ಸಲ್ಲಿಕೆ ಬಳಿಕ ಶಿಫ್ಟ್‌ಗೆ ದರ್ಶನ್ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ. ಆರೋಗ್ಯದ ಹಿತದೃಷ್ಟಿಯಿಂದ ಬೆಂಗಳೂರು ಹತ್ತಿರದ ಜೈಲ್ ಶಿಫ್ಟ್‌ಗೆ ದರ್ಶನ್ ಕುಟುಂಬಸ್ಥರ ಚಿಂತನೆ ನಡೆಸಿದ್ದಾರಂತೆ. ಹೀಗಾಗಿ ಇಂದು ದರ್ಶನ ವಕೀಲರಿಂದ ಸಲಹೆ ಪಡೆದು ಶಿಫ್ಟ್‌ಗೆ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us