ಸಂಜಯ್ ದತ್​ರನ್ನು ಮೀಟ್​ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್.. ಏನಿದರ ಸ್ಪೆಷಲ್?

author-image
Bheemappa
Updated On
ಸಂಜಯ್ ದತ್​ರನ್ನು ಮೀಟ್​ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್.. ಏನಿದರ ಸ್ಪೆಷಲ್?
Advertisment
  • ಕಾಟೇರ ಸಿನಿಮಾದ ಯಶಸ್ಸಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್
  • ಸಂಜಯ್ ದತ್ ಜೊತೆ ದರ್ಶನ್ ಸಿನಿಮಾ ಏನಾದರೂ ಮಾಡ್ತಿದ್ದಾರಾ?
  • ಕೆಡಿ ಸಿನಿಮಾದ ಪವರ್​ ಫುಲ್ ಪಾತ್ರದಲ್ಲಿ ಸಂಜಯ್ ದತ್ ನಟನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಫುಲ್ ಧಮಾಕ ಬಾರಿಸಿದೆ. ಇಂಡಸ್ಟ್ರಿಯಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ. ಸಿನಿಮಾದ ಕಥೆ ಹಾಗೂ ದರ್ಶನ್ ಅವರ ಅಭಿನಯವನ್ನು ಇಡೀ ನಾಡೇ ಕೊಂಡಾಡುತ್ತಿದೆ. ಕಾಟೇರಾ ಸಿನಿಮಾ ಸಕ್ಸಸ್​​ನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಾಲಿವುಡ್ ಸ್ಟಾರ್ ಸಂಜಯ್ ದತ್‌ರನ್ನು ಭೇಟಿ ಮಾಡಿದ್ದಾರೆ.

publive-image

ಕಾಟೇರ ಸಿನಿಮಾದ ಸಕ್ಸಸ್ ಸಂಭ್ರಮ ನಡುವೆ ಇದೀಗ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್‌ರನ್ನು ದರ್ಶನ್ ಮೀಟ್ ಮಾಡಿದ್ದಾರೆ. ಕೆಜಿಎಫ್ ಸಿನಿಮಾದ ಸಕ್ಸಸ್ ನಂತರ ಸಂಜಯ್ ದತ್ ಸೌತ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇದೀಗ ಕನ್ನಡ ಸಿನಿಮಾ ‘ಕೆಡಿ’ಯಲ್ಲಿ ಪವರ್‌ಫುಲ್ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ.

ಕೆಡಿ ಚಿತ್ರವನ್ನು ಡೈರೆಕ್ಟರ್ ಪ್ರೇಮ್ ನಿರ್ದೇಶಿನ ಮಾಡಿದ್ದು ಚಿತ್ರತಂಡ ಆಯೋಜಿಸಿದ್ದ ಪಾರ್ಟಿಯಲ್ಲಿ ಸಂಜಯ್ ದತ್ ಭಾಗಿಯಾಗಿದ್ದರು. ಇದೇ ವೇಳೆ ದರ್ಶನ್ ಅವರು ಸಂಜಯ್ ದತ್‌ರನ್ನು ಭೇಟಿ ಮಾಡಿ, ಕೆಲ ಸಮಯ ಕಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment