ಕಾವೇರಿ ವಿವಾದ.. ಕಿಡಿ ಹೊತ್ತಿಸಿದ ನಟ ದರ್ಶನ್​​ ಹೇಳಿಕೆ; ಯಾವುದು ಆ ತಮಿಳು ಸಿನಿಮಾ..?

author-image
Bheemappa
Updated On
ಕಾವೇರಿ ವಿವಾದ.. ಕಿಡಿ ಹೊತ್ತಿಸಿದ ನಟ ದರ್ಶನ್​​ ಹೇಳಿಕೆ; ಯಾವುದು ಆ ತಮಿಳು ಸಿನಿಮಾ..?
Advertisment
  • ದರ್ಶನ್ ಕೆಂಡಕಾರಿದ ಆ ವಿತರಕ ಯಾರು? ಆ ಸಿನಿಮಾ ಯಾವುದು?
  • ದರ್ಶನ್ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ
  • ಕರ್ನಾಟಕದಲ್ಲಿ ರಿಸೆಂಟ್​ ಆಗಿ ದೊಡ್ಡ ಹಿಟ್​ ಬಾರಿಸಿದ ತಮಿಳು ಸಿನಿಮಾ?

ರಾಜ್ಯದಲ್ಲಿ ಕಾವೇರಿ ಕಿಚ್ಚು ಹೊತ್ತಿ ಉರಿಯುವಾಗಲೇ ನಟ ದರ್ಶನ್ ಆಡಿದ ಮಾತೊಂದು ಸ್ಯಾಂಡಲ್​ವುಡ್​​ನಲ್ಲಿ ಕೋಲಾಹಲ ಸೃಷ್ಟಿಸಿದೆ. ಹೋರಾಟ, ಪ್ರತಿಭಟನೆ ಅಂದಾಗ ಸಿನಿಮಾ ಸ್ಟಾರ್ಸ್​ ಯಾಕೆ ಬರಲ್ಲ ಅನ್ನೋ ಪ್ರಶ್ನೆಗೆ ಸಿಡಿದೆದ್ದ ಚಾಲೆಂಜಿಂಗ್ ಸ್ಟಾರ್​, ಕನ್ನಡದ ಆ ವಿತರಕನಿಗೆ ಟಾಂಗ್ ಕೊಟ್ಟಿದ್ದಾರೆ. ಅಷ್ಟಕ್ಕೂ, ದರ್ಶನ್ ಕೆಂಡಕಾರಿದ ಆ ವಿತರಕ ಯಾರು? ಯಾವ ಸಿನಿಮಾದ ಬಗ್ಗೆ ಮಾತಾಡಿದ್ರು?

ನಾಡು ನುಡಿ, ಜಲ ಭಾಷೆ ವಿಚಾರ ವಿವಾದ ಅಂತ ಬಂದಾಗೆಲ್ಲ ಸಿನಿಮಾ ಸ್ಟಾರ್ಸ್​ ಎಲ್ಲಿ ಎಂಬ ಕೂಗು ಸಾಮಾನ್ಯ. ಅದು ಕಾವೇರಿ ಗಲಾಟೆ ಆದ್ರೂ ಸರಿನೇ. ಮಹಾದಾಯಿ ಹೋರಾಟ ಆದ್ರೂ ಅಷ್ಟೇ. ಹಾಗಾಗಿ ಸಂಪ್ರದಾಯದಂತೆ ಈ ಸಲವೂ ಕಾವೇರಿ ಗಲಾಟೆಯಲ್ಲಿ ಸ್ಯಾಂಡಲ್​ವುಡ್​ ಸ್ಟಾರ್​ಗಳ ಪಾತ್ರ ಏನು ಅನ್ನೋದು ಚರ್ಚೆ ಆಗ್ತಿದೆ. ಆರಂಭದಲ್ಲಿ ಮೌನವಾಗಿದ್ದ ಸಿನಿಮಾ ಹೀರೋಗಳು ಆಮೇಲೆ ಒಬ್ಬೊಬ್ಬರೇ ರೈತರ ಪರ ಧ್ವನಿ ಎತ್ತಿ ನಾವು ಜೊತೆಯಲ್ಲಿದ್ದೇವೆ ಅನ್ನೋ ಸಂದೇಶ ರವಾನಿಸಿದ್ದಾರೆ. ಆದರೆ ದೈಹಿಕವಾಗಿ ಹೋರಾಟಕ್ಕೆ ಬರಬೇಕು ಅನ್ನೋ ಕೂಗು ಜೋರಾಗಿದೆ. ಈ ನಡುವೆ ನಟ ದರ್ಶನ್​ ಕೊಟ್ಟಿರೋ ಹೇಳಿಕೆಯೊಂದು ಕಾವೇರಿ ಹೋರಾಟಗಾರರಲ್ಲಿ ಕಿಚ್ಚು ಹೊತ್ತಿಸಿದ್ದು, ಸಿನಿಮಾ ಇಂಡಸ್ಟ್ರಿಗೂ ಶಾಕ್ ಕೊಟ್ಟಿದೆ.

[caption id="attachment_20392" align="alignnone" width="800"]publive-image ಕಾವೇರಿ ನದಿ[/caption]

ರೈತರ ಸಮಸ್ಯೆ, ಕಾವೇರಿ ಹೋರಾಟ ಅಂದಾಕ್ಷಣ ಸಿನಿಮಾ ನಟರು ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿ, ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿ ಸುಮ್ಮನಾಗ್ತಾರೆ. ಅವ್ರು ರೈತರ ಪರ ಇಲ್ಲ ಅನ್ನೋ ಆಕ್ರೋಶ ಭುಗಿಲೆದ್ದಿದೆ. ಇಂಥಾ ಆಕ್ರೋಶದ ಹೇಳಿಕೆಗಳ ವಿರುದ್ಧ ನಟ ದರ್ಶನ್ ಸಿಡಿದೆದ್ದಿದ್ದಾರೆ. ಕನ್ನಡ ಸಿನಿಮಾ ನೋಡದ ನೀವು ಕನ್ನಡ ನಟರನ್ನ ಕರೆಯುವ ಹಕ್ಕಿಲ್ಲ ಅಂತ ಕೆಂಡಕಾರಿದ್ದಾರೆ.

6 ಕೋಟಿ ಕೊಟ್ಟು 36 ಕೋಟಿ ಗಳಿಸಿದವ್ರನ್ನ ಕೇಳಿ!

ಕಾವೇರಿ ಹೋರಾಟಕ್ಕೆ ಸಿನಿಮಾ ಸ್ಟಾರ್ಸ್​ ಬರಬೇಕು ಅನ್ನೋರಿಗೆ ನಟ ದರ್ಶನ್ ಟಾಂಗ್ ಕೊಟ್ಟಿದ್ದಾರೆ. ಮೈಸೂರಿನ ಬನ್ನೂರಿನ ಕಾರ್ಯಕ್ರಮದಲ್ಲಿ ಮಾತಾಡಿದ ಚಾಲೆಂಜಿಂಗ್ ಸ್ಟಾರ್​, ನೀವು ಕನ್ನಡ ಸಿನಿಮಾನೇ ನೋಡಲ್ಲ, ನಾವ್ಯಾಕೆ ಹೋರಾಟಕ್ಕೆ ಬರಬೇಕು ಅನ್ನೋ ಪ್ರಶ್ನೆ ಮುಂದಿಟ್ಟಿದ್ದಾರೆ. ಈ ವೇಳೆ ತಮಿಳು ಚಿತ್ರವೊಂದರ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿರುವ ದರ್ಶನ್, ಆ ಚಿತ್ರವನ್ನ ಕರ್ನಾಟಕದಲ್ಲಿ ವಿತರಣೆ ಮಾಡಿದ ಡಿಸ್ಟ್ರೂಬ್ಯೂಟರ್​​ ಮೇಲೂ ಆಕ್ರೋಶ ಹೊರಹಾಕಿದ್ದಾರೆ.

ಮೊನ್ನೆ ಮೊನ್ನೆ ತಮಿಳು ಸಿನಿಮಾ ರಿಲೀಸ್ ಆಯಿತು. ಅದರ ವಿತರಕರೊಬ್ಬರು 6 ಕೋಟಿ ರೂಪಾಯಿಗೆ ತಗೊಂಡು 36 ರಿಂದ 37 ಕೋಟಿ ರೂಪಾಯಿ ಮಾಡ್ದ. ಆ ಸಿನಿಮಾವನ್ನು ತಮಿಳು ಜನರು ನೋಡಿದ್ರಾ?. ಕನ್ನಡದವರು ತಾನೇ ನೋಡಿರೋದು.

ದರ್ಶನ್, ನಟ

ದರ್ಶನ್ ಹೇಳಿದ್ದು ಜೈಲರ್ ಸಿನಿಮಾ ಬಗ್ಗೆನಾ?

ಇತ್ತೀಚೆಗಷ್ಟೇ ಬಿಡುಗಡೆಯಾದ ತಮಿಳು ಸಿನಿಮಾವನ್ನ 6 ಕೋಟಿಗೆ ವಿತರಕರು ತಗೊಂಡ್ರು, 36 ಕೋಟಿ ದುಡ್ಡು ಮಾಡಿಕೊಡ್ತು ಎಂದಿರುವ ದರ್ಶನ್, ಆ ನಟನ ಬಗ್ಗೆ ಮಾತಾಡಲ್ಲ, ಅವ್ರು ತುಂಬಾ ದೊಡ್ಡೋರು ಎಂದಿದ್ದಾರೆ. ಆದರೆ ಆ ಸಿನಿಮಾ ಯಾವುದು? ಆ ನಟ ಯಾರು ಅಂತ ರಿವೀಲ್ ಮಾಡಿಲ್ಲ. ಬಟ್, ಸಿನಿಮಾ ಇಂಡಸ್ಟ್ರಿಯ ಅ ಆ ಇ ಈ ಬಲ್ಲವರು ದರ್ಶನ್ ಹೇಳಿದ್ದು ಯಾರ ಬಗ್ಗೆ ಅಂತ ಅರ್ಥೈಸಿಕೊಳ್ಳುವಷ್ಟು ಬುದ್ದಿವಂತರು ಅನ್ನೋದನ್ನ ಮರೆಯುವಂತಿಲ್ಲ. ನಟ ದರ್ಶನ್ ಪರೋಕ್ಷವಾಗಿ ಹೇಳಿದ್ದು ರಜಿನಿಕಾಂತ್ ನಟನೆಯ ಜೈಲರ್ ಚಿತ್ರದ ಬಗ್ಗೇ ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ ಕರ್ನಾಟಕದಲ್ಲಿ ರಿಸೆಂಟ್​ ಆಗಿ ದೊಡ್ಡ ಹಿಟ್​ ಬಾರಿಸಿದ್ದು ಜೈಲರ್ ಸಿನಿಮಾನೇ.

ಜೈಲರ್ ವಿತರಣೆ ಮಾಡಿದ್ದು ಜಯಣ್ಣ ಕಂಬೈನ್ಸ್​!

ಜೈಲರ್ ಸಿನಿಮಾನ ಕರ್ನಾಟಕದಲ್ಲಿ ವಿತರಣೆ ಮಾಡಿದ್ದು ಜಯಣ್ಣ ಕಂಬೈನ್ಸ್​. ಹಾಗಾಗಿ ದರ್ಶನ್ ಪರೋಕ್ಷವಾಗಿ ಹೇಳಿದ್ದು ಜಯಣ್ಣ ಕಂಬೈನ್ಸ್​ ಬಗ್ಗೆನೇ ಅನ್ನೋದನ್ನ ಅಲ್ಲೆಗಳೆಯುವಂತಿಲ್ಲ. ಹಾಗ್ನೋಡಿದ್ರೆ ಜಯಣ್ಣ ಜೈಲರ್ ಸಿನಿಮಾನ ಒಬ್ಬರೇ ಡಿಸ್ಟ್ರೂಬ್ಯೂಷನ್ ಮಾಡಿಲ್ವಂತೆ. ಕೆವಿಎನ್ ಜೊತೆ ಸೇರಿ ವಿತರಣೆ ಮಾಡಿದ್ರಂತೆ. ಸೋ ದರ್ಶನ್ ಅವರ ಹೇಳಿಕೆ ಬಗ್ಗೆ ಮಾತಾಡಲ್ಲ ಎಂದಿದ್ದಾರೆ ಎಂಬ ಮಾಹಿತಿ ನ್ಯೂಸ್​ಫಸ್ಟ್​ಗೆ ಸಿಕ್ಕಿದೆ.

[caption id="attachment_6847" align="alignnone" width="800"]publive-image ಜೈಲರ್ ಸಿನಿಮಾದಲ್ಲಿ ತಮನ್ನಾ ಮತ್ತು ರಜನಿಕಾಂತ್ ಡ್ಯಾನ್ಸ್​[/caption]

ದರ್ಶನ್ ನೇರ ನುಡಿ ಹಾಗೂ ಇದ್ದಕ್ಕಿದ್ದಾಗೆ ಹೇಳುವ ಸ್ವಭಾವದವರು. ಅವ್ರು ಹೇಳೋ ರೀತಿ ಕಹಿ ಅನಿಸಿದ್ರು ಹೇಳಿದ್ರಲ್ಲಿ ನಿಜಾನ ಇರುತ್ತೆ. ಹಾಗಂತ ಅವರು ಹೇಳಿದ್ದೇ ನಿಜ ಅಲ್ವಾ ಅಂತ ಒಪ್ಪಿಕೊಳ್ಳೋಕು ಆಗಲ್ಲ. ಕನ್ನಡದಲ್ಲಿ ಒಳ್ಳೆ ಒಳ್ಳೆ ಸಿನಿಮಾಗಳನ್ನ ಮಾಡಿ, ಸ್ಟಾರ್ ನಟರು ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಿ ಆಗ ತಮಿಳು, ತೆಲುಗು ಯಾರ್ ನೋಡ್ತಾರೆ ಅಂತ ಕೇಳೋರು ಇದ್ದಾರೆ.

ಜನ ಸಿನಿಮಾ ಸ್ಟಾರ್ಸ್​ನ ಯಾಕೆ ಕರೀತಾರೆ?

ಹೋರಾಟ, ಪ್ರತಿಭಟನೆ ಅಥವಾ ಮತ್ಯಾವುದಾದರೂ ಸಂಕಷ್ಟದ ಪರಿಸ್ಥಿತಿಗಳಿಗೆ ಜನ ಸಿನಿಮಾ ಸ್ಟಾರ್ಸ್​ನ ಯಾಕೆ ಕರೀತಾರೆ ಅಂದ್ರೆ ಅವ್ರು ಹೇಳಿದ್ರು ಬೇರೆಯವರು ಕೇಳಬಹುದು. ಹೆಚ್ಚು ಜನಕ್ಕೆ ತಲುಪಬಹುದು ಅನ್ನೋ ಉದ್ದೇಶಕ್ಕೆ. ಇಲ್ಲಿ ನಿರ್ದೇಶಕ, ನಿರ್ಮಾಪಕ, ವಿತರಕ ಅಭಿಮಾನಿಗಳಿಗೆ ಮುಖ್ಯವಾಗಿರಲ್ಲ. ಎನಿ ವೇ.. ದರ್ಶನ್ ಅವರ ಈ ಹೇಳಿಕೆ ಈಗ ಪರ-ವಿರೋದದ ಚರ್ಚೆಗೆ ಕಾರಣವಾಗಿದೆ. ಕೆಲವ್ರು ಸರಿ ಅಂತ ಒಪ್ಪಿದ್ರೆ, ಇನ್ ಕೆಲವ್ರು ತಪ್ಪು ಅಂತ ವಾದಿಸ್ತಿದ್ದಾರೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment