/newsfirstlive-kannada/media/post_attachments/wp-content/uploads/2025/05/darmanna2.jpg)
ರಂಗಭೂಮಿ ಹಿನ್ನಲೆಯಿಂದ ಬಂದ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದಾರೆ ನಟ ಧರ್ಮಣ್ಣ ಕಡೂರು. 2016ರಲ್ಲಿ ತೆರೆಕಂಡ ರಾಮಾ ರಾಮಾ ರೇ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದಾದ ಬಳಿಕ ಮುಗುಳುನಗೆ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:ಎಲ್ಲರೂ ಅಚ್ಚರಿ ಪಡುವಂತೆ ಮನೆ ಕಟ್ಟಿಸಿದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ; ಫೋಟೋಸ್ ಇಲ್ಲಿವೆ
ಇದೀಗ ನಟ ಧರ್ಮಣ್ಣ ಕಡೂರು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹೌದು, ಧರ್ಮಣ್ಣ ಕಡೂರು ಕುಟುಂಬ ಹೊಸ ಮನೆಗೆ ಕಾಲಿಟ್ಟಿದೆ. ಈ ಖುಷಿ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಮನೆಯ ಗೃಹಪ್ರವೇಶದ ಫೋಟೋಗಳನ್ನು ಹಂಚಿಕೊಂಡ ನಟ, ದೇವರ ಆಶೀರ್ವಾದ ನಿಮ್ಮಗಳ ಪ್ರೀತಿಯಿಂದ 60 ರೂಪಾಯಿ ಮನೆ ಬಾಡಿಗೆಯಿಂದ ಇವತ್ತು ಇಂತ ಒಂದು ಗೂಡನ್ನು ಕಟ್ಟಿಕೊಂಡಿದ್ದೇವೆ. ಅ ಗೂಡಿಗೆ ತುಂಬಾ ಇಷ್ಟ ಪಟ್ಟು ಪ್ರೀತಿಯಿಂದ ಇಟ್ಟ ಹೆಸರು ಇದು "ಅ" ಎಂದು ಬರೆದುಕೊಂಡಿದ್ದಾರೆ.
ಇನ್ನೂ ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ಧರ್ಮಣ್ಣ ಹೊಸ ಮನೆಗೆ ಅ ಅಂತ ಹೆಸರನ್ನು ಇಡಲು ಕಾರಣವೇನು ಅಂತ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ನಟನೆ ಉತ್ತರ ಕೊಡಬೇಕಿದೆ.
ಮತ್ತೊಂದು ವಿಶೇಷ ಏನೆಂದರೆ ಧರ್ಮಣ್ಣ ಕಡೂರು ಅವರು ಕೆಂಪು, ಹಳದಿ ಬಣ್ಣದ ಕನ್ನಡದ ಬಾವುಟದ ಕಲರ್ ಮಧ್ಯೆ ಅ ಎಂದು ಬರೆಸಿದ್ದಾರೆ. ಇದನ್ನೇ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ