/newsfirstlive-kannada/media/post_attachments/wp-content/uploads/2024/08/bhima.jpg)
ಸ್ಯಾಂಡಲ್​ವುಡ್ ನಟ ​ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರೋ ಭೀಮ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಸುಮಾರು 400ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ಭೀಮಾ ಚಿತ್ರ ರಿಲೀಸ್ ಆಗುತ್ತಿದ್ದು, ಈಗಾಗಲೇ ಹಲವೆಡೆ ಥಿಯೇಟರ್​ಗಳಲ್ಲಿ ಶೋಗಳು ಹೌಸ್ ಫುಲ್ ಆಗಿವೆ.
/newsfirstlive-kannada/media/post_attachments/wp-content/uploads/2024/08/bhima1.jpg)
ಮಿಡ್ ನೈಟ್ ಶೋ, ಫ್ಯಾನ್ ಶೋ ಯಾವುದೂ ಇಲ್ಲದೇ ಏಕಕಾಲದಲ್ಲಿ ಭೀಮ ಸಿನಿಮಾ ಎಲ್ಲೆಡೆ ಪ್ರದರ್ಶನ ನಡೆಸಲಾಗಿದೆ. ಈಗಾಗಲೇ ಸಖತ್ ಕ್ರೇಜ್ ಹುಟ್ಟಿಸಿರೋ ಭೀಮ ಸಿನಿಮಾ ಬಿಗ್ ಓಪನಿಂಗ್ ಪಡೆದುಕೊಳ್ಳುತ್ತಾ ಅನ್ನೋದು ನಿರೀಕ್ಷೆ ಹುಟ್ಟು ಹಾಕಿದೆ. ಅದರಲ್ಲೂ ಇಂದು ದುನಿಯಾ ವಿಜಯ್ ಅವರ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ದೊಡ್ಡ ಪರದೆ ಮೇಲೆ ನೆಚ್ಚಿನ ನಟನನ್ನು ಅಭಿಮನಿಗಳು ಕಣ್ತುಂಬಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/bhima2.jpg)
ದುನಿಯಾ ವಿಜಯ್ ಅಭಿನಯದ ಭೀಮ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ದುನಿಯಾ ವಿಜಯ್ ಅವರೇ ಡೈರೆಕ್ಷನ್ ಮಾಡಿರೋದ್ರಿಂದಲೇ ಈ ನಿರೀಕ್ಷೆ ಇನ್ನೂ ಡಬಲ್ ಮಾಡಿದೆ. ಬ್ಯಾಡ್​ ಬಾಯ್ಸ್​, ಐ ಲವ್ ಯೂ ಕಣೆ, ನೂರು ರೂಪಾಯಿ ಮಿಕ್ಸ್ ಎಂಬ ​ಹಾಡುಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us