Advertisment

ರೇಣುಕಾಸ್ವಾಮಿ ಮನೆಯಲ್ಲೇ ದರ್ಶನ್ ಪರ ಮಾತು.. ನಟ ಗಣೇಶ್ ರಾವ್ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಾಗ ಆಗಿದ್ದೇನು..?

author-image
Ganesh
Updated On
ರೇಣುಕಾಸ್ವಾಮಿ ಮನೆಯಲ್ಲೇ ದರ್ಶನ್ ಪರ ಮಾತು.. ನಟ ಗಣೇಶ್ ರಾವ್ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಾಗ ಆಗಿದ್ದೇನು..?
Advertisment
  • ರೇಣುಕಾಸ್ವಾಮಿ ಮನೆಯಲ್ಲಿ ಗಣೇಶ್ ರಾವ್ ಮಾತನಾಡಿದ್ದು ಏನು?
  • ರೇಣುಕಾಸ್ವಾಮಿ ಕುಟುಂಬಸ್ಥರ ಬಗ್ಗೆ ಗಣೇಶ್ ರಾವ್ ಹೇಳಿದ್ದೇನು?
  • ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾರೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇತ್ತ ರೇಣುಕಾಸ್ವಾಮಿ ಸಾವಿಗೆ ಬಹುತೇಕರು ರೇಣುಕಾ ಕುಟುಂಬದ ಮೇಲೆ ಮರುಕಪಟ್ಟಿದ್ದಾರೆ. ಮೇಲಿಂದ ಮೇಲೆ ರಾಜಕಾರಣಿಗಳು, ಸೆಲೆಬ್ರೆಟಿಗಳು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳ್ತಿದ್ದಾರೆ. ಅವರ ಮನೆಗೆ ಸ್ಯಾಂಡಲ್​ವುಡ್​ನ ಹಿರಿಯ ನಟ ಗಣೇಶ್ ರಾವ್ ಕೂಡ ಭೇಟಿ ನೀಡಿದ್ದರು.

Advertisment

ಚಿತ್ರದುರ್ಗದ VRS ಬಡಾವಣೆಯಲ್ಲಿರುವ ರೇಣುಕಾಸ್ವಾಮಿ ನಿವಾಸಕ್ಕೆ ನಟ ಗಣೇಶ್ ರಾವ್ ಭೇಟಿ ನೀಡಿರೋದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೆ ಕಾರಣ ಗಣೇಶ್ ರಾವ್, ರೇಣುಕಸ್ವಾಮಿ ನಿವಾಸದಲ್ಲಿ ದರ್ಶನ್ ಪರ ಮಾತನಾಡಿದ್ದಾರೆ. ಇದು ರೇಣುಕಾಸ್ವಾಮಿ ಕುಟುಂಬಸ್ಥರ ಹಾಗೂ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಲಾಗಿತ್ತು.

ಇದನ್ನು ಓದಿ:MS ಧೋನಿ ಅಭಿಮಾನಿಗಳಿಗೆ ಕೊನೆಗೂ ಸಿಕ್ಕೇಬಿಡ್ತು ಗುಡ್​ನ್ಯೂಸ್​..

publive-image

ಈ ಬಗ್ಗೆ ನ್ಯೂಸ್​ಫಸ್ಟ್​ ಜೊತೆ ಮಾತನಾಡಿರುವ ಗಣೇಶ್ ರಾವ್.. ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಬೇಕು ಅನ್ನೋ ಆಸೆ ಇತ್ತು. ಪ್ರಕರಣದಿಂದ ಈಗಾಗಲೇ ಅವರ ಮನೆಯವರು ನೊಂದಿದ್ದಾರೆ. ನಾನು ಕೊಲೆಯನ್ನು ಸಮರ್ಥನೆ ಮಾಡಲು ಆಗಲ್ಲ. ದರ್ಶನ್ ಪರವಾಗಿ ನಾನು ಮಾತನಾಡಿದ್ದೇನೆ. ಆದರೆ ದರ್ಶನ್ ಕೊಲೆ ಮಾಡಿದ್ದಾರೆ ಎನ್ನಲಾಗಿರುವ, ಬಿಂಬಿಸುತ್ತಿರುವ ದೃಶ್ಯಗಳ ಪರವಾಗಿ ನಾನು ಮಾತನಾಡಿಲ್ಲ. ಅದು ಯಾರು ಮಾಡಿದರೂ ತಪ್ಪೇ. ದರ್ಶನ್ ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ಹೈಲೈಟ್ಸ್​​ ಆದರು. ಆರೋಪ ಸ್ಥಾನದಲ್ಲಿ 18 ಜನ ಇದ್ದಾರೆ ಅನ್ನೋದನ್ನ ಮರೆಯಬಾರದು ಎಂದರು.

ನಾನು ಚಿತ್ರರಂಗದ ಪರವಾಗಿ ಮಾತನಾಡಿಲ್ಲ. ದೊಡ್ಡವರು ಇದ್ದಾರೆ ಎಂದು ಇಷ್ಟು ದಿನ ಸುಮ್ಮನಿದ್ದೆ. ಅವರೆಲ್ಲ ದರ್ಶನ ಪರ ಮಾತನಾಡುತ್ತಾರೆ ಅಂದುಕೊಂಡಿದ್ದೆ. ನನ್ನ ಭೇಟಿ ವೇಳೆ ರೇಣುಕಾಸ್ವಾಮಿಯ ತಂದೆ, ತಾಯಿ ಹಾಗೂ ಪತ್ನಿಯ ಜೊತೆ ಮಾತನಾಡಿದೆ. ಅವರ ಅಜ್ಜಿ, ಅಕ್ಕನ ಜೊತೆಗೂ ಮಾತನಾಡಿದ್ದೇನೆ. ಅದೊಂದು ಸಾಂತ್ವನದ ಭೇಟಿ. ಮಾನವೀಯತೆ ದೃಷ್ಟಿಯಿಂದ ಭೇಟಿ ಮಾಡಿದ್ದೇನೆ. ಈ ವೇಳೆ ಯಾವುದೇ ವಾಗ್ವಾದ ಕೂಡ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

Advertisment

ಇದನ್ನೂ ಓದಿ:ರಾಮಾಚಾರಿ ಬದುಕಲ್ಲಿ ದೊಡ್ಡ ತಿರುವು.. ಚಾರು ಜೊತೆ ಮನೆಯಿಂದ ಹೊರದಬ್ಬಿದ ವೈಶಾಖ, ಆದರೆ..!

publive-image

ದರ್ಶನ್ ಪ್ರಕರಣದಲ್ಲಿ ಪೊಲೀಸರ ಹೇಳಿಕೆಯನ್ನು ಒಪ್ಪುವುದಾದರೆ ಒಪ್ಪಿಕೊಳ್ಳೋಣ. ಅವರು ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದ್ದಾರೆ. ಘಟನೆ ಬಳಿಕ ಸಾಂದರ್ಭಿಕ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಇಲ್ಲಿ ದರ್ಶನ್ ಹೊಡೆದಿದ್ದಾರೆ ಅನ್ನೋದು ಪ್ರೂವ್ ಆಗಿಲ್ಲ. ಅದಕ್ಕೆ ಸಾಕ್ಷ್ಯ ಸಿಕ್ಕಿಲ್ಲ. ದರ್ಶನ್ ಆರೋಪಿ ಸ್ಥಾನದಲ್ಲಿದ್ದಾರೆ. ಅವರ ಮೇಲಿನ ಆರೋಪ ಸಾಬೀತಾದರೆ ಶಿಕ್ಷೆ ಅನುಭವಿಸಲಿ. ಅವರು ಸೆಲೆಬ್ರಿಟಿಯಾದ ಕಾರಣ ಎ1, ಎ2 ಎಂದು ನಂಬರ್ ಕೊಟ್ಟಿದ್ದಾರೆ. ಅದೊಂದು ಸೀರಿಯಲ್ ನಂಬರ್ ಅಷ್ಟೇ.

ನಾನು ಪೊಲೀಸ್ ಅಧಿಕಾರಿಗಳ ಜೊತೆ, ಕಾನೂನು ತಜ್ಞರ ಜೊತೆಯೂ ಮಾತನಾಡಿದ್ದೇನೆ. ಎ2 ಆದ ಮಾತ್ರಕ್ಕೆ ಅವರು ಅಪರಾಧಿ ಅಂತಲ್ಲ. ನಾನು ಅವರ ಜೊತೆ ಒಡೆನಾಟ ಮಾಡಿದ್ದೇನೆ. ಅವರು ಹೇಗಿದ್ದಾರೆ ಅನ್ನೋದು ಗೊತ್ತಿದೆ. ಅವರಲ್ಲಿ ಸಾಯಿಸುವಷ್ಟು ಕ್ರೂರತನ ಇಲ್ಲ. ರೇಣುಕಾಸ್ವಾಮಿ ಮನೆಗೆ ನಾನು ಹೋಗಿದ್ದು ವಾಸ್ತವ ಮಾತನಾಡಲು. ಅಲ್ಲಿ ಪರ-ವಿರೋಧ ಅಂತಾ ಇಲ್ಲ. ಇವರೇ ಕೊಲೆ ಮಾಡಿದ್ದಾರೆ ಅಂತಾ ಅವರಿಗೂ ಗೊತ್ತೇ ಇಲ್ಲ ಎಂದಿದ್ದಾರೆ.

Advertisment

ಇದನ್ನೂ ಓದಿ:ಶಿವಂ ದುಬೆಗೆ ಸಿಗಬೇಕಿದ್ದ ಅವಕಾಶ ನೀಡಿದ್ದ ಗಂಭೀರ್​.. ಸಂಜು ಹೀಗೆ ಮಾಡಿದ್ದು ಸರಿಯೇ ಎಂದು ಬೇಸರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment