newsfirstkannada.com

K Shivaram: ಹಿರಿಯ ನಟ ಕೆ.ಶಿವರಾಂ ಇನ್ನು ನೆನಪು ಮಾತ್ರ.. ಇಂದು ಸಂಜೆ ಅಂತ್ಯಕ್ರಿಯೆ

Share :

Published March 1, 2024 at 6:33am

    ಅಂತಿಮ ದರ್ಶನಕ್ಕೆ ಎಲ್ಲೆಲ್ಲೆಲಿ ವ್ಯವಸ್ಥೆ ಮಾಡಲಾಗಿದೆ..?

    ಅನಾರೋಗ್ಯದಿಂದ ನಿನ್ನೆ ನಿಧನರಾಗಿರುವ ಹಿರಿಯ ನಟ

    ನಟನೆಗೂ ಮೊದಲು ಐಎಎಸ್​ ಅಧಿಕಾರಿಯಾಗಿದ್ದ ಶಿವರಾಂ

90ರ ದಶಕದ ಎವರ್​ಗ್ರೀನ್​ ಸಿನಿಮಾ ಬಾ ನಲ್ಲೆ ಮಧುಚಂದ್ರಕೆ ಖ್ಯಾತಿಯ ನಟ ಕೆ.ಶಿವರಾಮ್​ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶಿವರಾಮ್​, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಇವತ್ತು ‘ವಸಂತ ಕಾವ್ಯ’ ಬರೆದ ನಟನ ಅಂತ್ಯಕ್ರಿಯೆ ನೆರವೇರಲಿದೆ.

ಹೌದು.. ನಟ, ರಾಜಕಾರಣಿ, ಮಾಜಿ ಐಎಎಸ್​ ಅಧಿಕಾರಿ ಕೆ.ಶಿವರಾಮ್​ ಇನ್ನೂ ನೆನಪು ಮಾತ್ರ. ಶಿವರಾಮ್​ ಬೆಂಗಳೂರಿನ ಹೆಚ್​ಸಿಜಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೆ.ಶಿವರಾಮ್​ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಇಹಲೋಕ ತ್ಯಜಿಸಿದ್ದಾರೆ. ರಕ್ತದೊತ್ತಡದಿಂದ ಬಳಲುತ್ತಿದ್ದ ಶಿವರಾಮ್​ ಕಳೆದ 25 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಇಹಲೋಕ ತ್ಯಜಿಸಿದ್ದಾರೆ.

ಇವತ್ತು ಬೆಂಗಳೂರಿನ ರಾಜಾಜಿನಗರದಲ್ಲಿರೋ ಕೆ. ಶಿವರಾಂ ಅವರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಬೆಳಗ್ಗೆ 7 ಗಂಟೆ ಬಳಿಕ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ಥಿವ ಶರೀರವನ್ನ ರವಾನಿಸಲಾಗುತ್ತದೆ. ನಂತರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 3ಗಂಟೆವರೆಗೆ ಕಲಾಕ್ಷೇತ್ರದಲ್ಲಿಯೇ ಅಂತಿಮ ದರ್ಶನ ನೆರವೇರಲಿದೆ.. ಬಳಿಕ ಸಂಜೆ ವೇಳೆಗೆ ಅಂತಿವಿಧಿವಿಧಾನಗಳ ಮೂಲಕ ಕೆ. ಶಿವಾರಂ ಅವರ ಅಂತ್ಯಕ್ರಿಯೆ ನೆರವೇರಲಿದೆ.

1993ರಲ್ಲಿ ತೆರೆಕಂಡ ಬಾನಲ್ಲೆ ಮಧುಚಂದ್ರಕೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕೆ.ಶಿವರಾಮ್​ ತನ್ನ ಮೊದಲ ಸಿನಿಮಾದಲ್ಲೇ ಮಿಂಚಿದ್ರು. ಭರವಸೆಯ ನಾಯಕ ಅನಿಸಿಕೊಂಡಿದ್ದ ನಟ.. ಬಳಿಕ ವಸಂತಕಾವ್ಯ, ಸಾಂಗ್ಲಿಯಾನ 3, ಪ್ರತಿಭಟನೆ, ಖಳನಾಯಕ, ನಾಗ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್, ಓ ಪ್ರೇಮ ದೇವತೆ ಸಿನಿಮಾದಲ್ಲಿ ನಟಿಸಿದ್ರು. ಟೈಗರ್ ಚಿತ್ರದಲ್ಲಿ ಕೊನೆಯ ಬಾರಿಗೆ ಬಣ್ಣ ಹಚ್ಚಿದ ನಟ ಶಿವರಾಮ್, 2007ರ ಬಳಿಕ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.

ನಟನಾಗೋಕು ಮೊದಲು ಐಎಎಸ್​ ಅಧಿಕಾರಿಯಾಗಿದ್ದ ಶಿವರಾಮ್​, 2013ರಲ್ಲಿ ಸ್ವಯಂ ನಿವೃತ್ತಿ ಪಡೆದು ರಾಜಕೀಯದಲ್ಲಿ ಸಕ್ರೀಯರಾಗಿದ್ರು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ವಿಜಯಪುರದಿಂದ ಸ್ಪರ್ಧಿಸಿ ಸೋಲುಕಂಡಿದ್ರು. ಬಳಿಕ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ರು. ಅದೇನೆ ಇರ್ಲಿ ಬಾ ನಲ್ಲೆ ಮಧುಚಂದ್ರಕೆ ಎನ್ನುತ್ತಾ ಟೈಗರ್‌ ರೀತಿ ಘರ್ಜಿಸಿದ್ದ ನಟ ಇನ್ನೂ ನೆನಪುಮಾತ್ರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

K Shivaram: ಹಿರಿಯ ನಟ ಕೆ.ಶಿವರಾಂ ಇನ್ನು ನೆನಪು ಮಾತ್ರ.. ಇಂದು ಸಂಜೆ ಅಂತ್ಯಕ್ರಿಯೆ

https://newsfirstlive.com/wp-content/uploads/2024/02/Shivaram-13.jpg

Load More