/newsfirstlive-kannada/media/post_attachments/wp-content/uploads/2025/06/karna10.jpg)
ಕರ್ಣ ಈ ವರ್ಷದ ಬಹು ನಿರೀಕ್ಷಿತ ಧಾರಾವಾಹಿ. ದೊಡ್ಡ ತಾರಾಬಳಗ ಹೊಂದಿರೋ ಸೀರಿಯಲ್ ಇದು. ವರ್ಷದಿಂದ ಈ ಪ್ರಾಜೆಕ್ಟ್ ಸದ್ದು ಮಾಡುತ್ತಿದೆ. ಅವ್ರು ಹೀರೋ ಆಗ್ತಾರೆ, ಇವ್ರು ಹೀರೋಯಿನ್ ಆಗ್ತಾರೆ ಎಂಬ ಚರ್ಚೆ ಆಗಾಗ ಮುನ್ನೆಲೆಗೆ ಬರ್ತಾನೆ ಇತ್ತು. ಈಗ ಅದಕ್ಕೆಲ್ಲಾ ಬ್ರೇಕ್ ಬಿದ್ದು ಕರ್ಣನ ಪ್ರೋಮೋಗಳು ಸದ್ದು ಮಾಡ್ತಿವೆ.
ಇದನ್ನೂ ಓದಿ:ತಮಿಳು Sa Re Ga Ma Pa ವೇದಿಕೆ ಮೇಲೆ ಶಿವಾನಿಗೆ ಬಿಗ್ ಸರ್ಪ್ರೈಸ್.. ಏನದು?
ನಟ ಕಿರಣ್ ರಾಜ್ಗೆ ಜೋಡಿಯಾಗಿ ಭವ್ಯಾ ಗೌಡ ಅಭಿನಯಿಸ್ತಿದ್ದಾರೆ. ಇಬ್ಬರ ಕುಡಿನೋಟದ ಕಲರ್ಫುಲ್ ಸಾಂಗ್ಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಕರ್ಣ ಡಾಕ್ಟರ್ ಆಗಿರುತ್ತಾನೆ. ಕಾಲೇಜ್ನಲ್ಲಿ ಮೋಸ್ಟ್ ಟ್ಯಾಲೆಂಟೆಡ್ ಮೆಡಿಕಲ್ ಸ್ಟೂಡೆಂಟ್ ಈ ನಾಯಕ. ಅದೇ ಕಾಲೇಜ್ನಲ್ಲಿ ನಿಧಿ ಕೂಡ ಮೆಡಿಕಲ್ ಓದಿರುತ್ತಾಳೆ. ಜೂನಿಯರ್ ನಿಧಿಗೆ ಸೀನಿಯರ್ ಆಗಿರೋ ಕರ್ಣನ ಮೇಲೆ ಲವ್ ಆ್ಯಟ್ ಫಸ್ಟ್ ಸೈಟ್ ಆಗುತ್ತೆ. ಇದು ಪ್ರೋಮೋದಲ್ಲಿ ತೋರಿಸಲಾದ ದೃಶ್ಯಗಳು. ಸದ್ಯ ಇದೇ ಜೂನ್ 16ರಿಂದ ಕರ್ಣ ತೆರೆಗೆ ಬರ್ತಿದ್ದಾನೆ. ಈ ಕುರಿತು ಅನೌನ್ಸ್ ಮಾಡಿ, ಒಂದಿಷ್ಟು ತೆರೆಹಿಂದಿನ ವಿಶ್ವಲ್ಸ್ ಶೇರ್ ಮಾಡಿದ್ದಾರೆ ನಟ ಕಿರಣ ರಾಜ್.
ಇನ್ನೂ ನಮ್ರತಾ ನಿತ್ಯಾ ಅನ್ನೋ ಪಾತ್ರ ಮಾಡ್ತಿದ್ದಾರೆ. ನಿತ್ಯಾ, ನಿಧಿ ಇಬ್ಬರೂ ಅಕ್ಕ-ತಂಗಿ. ಅಜ್ಜಿ ಜೊತೆಗೆ ಜೀವನ ಮಾಡ್ತಾ ಇರುತ್ತಾರೆ. ಅಜ್ಜಿ ಪಾತ್ರದಲ್ಲಿ ಹಿರಿಯ ನಟಿ ಗಾಯತ್ರಿ ಪ್ರಭಾಕರ್ ಅವರು ಕಾಣಿಸಿಕೊಳ್ತಿದ್ದಾರೆ. ನಿತ್ಯಾ ಪ್ರ್ಯಾಕ್ಟಿಕಲ್ ಹುಡುಗಿ. ನಿಧಿ ಭಾವನಾತ್ಮ ಹುಡುಗಿ. ಎಲ್ಲರ ಮನೆಯಲ್ಲೂ ಇರೋ ಹಾಗೇ ಅಕ್ಕ ತಂಗಿ ನಡುವೆ ಇರೋ ಕೋಳಿ ಜಗಳ, ಹುಸಿ ಮುನಿಸು ಸಹಜವಾಗಿಯೇ ನಿತ್ಯ-ನಿಧಿ ನಡುವೆ ಇರುತ್ತೆ. ಶೂಟಿಂಗ್ ನಡೀತಿರೋ ವಿಡಿಯೋಗಳೂ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ.
ನಮ್ರತಾ ಪಾತ್ರದ ಪ್ರೋಮೋ ಹೊರಬರಬೇಕಿದ್ದು, ತುಂಬಾ ಸ್ಪೆಷಲ್ ಆಗಿ ಪ್ರೋಮೋ ರಿಲೀಸ್ ಮಾಡಲಿದೆ ತಂಡ. ಮಲ್ಲೇಶ್ವರಂ ಸುತ್ತಮುತ್ತ ಶೂಟಿಂಗ್ ನಡೀತಿದೆ. ಭವ್ಯಾ ಹಾಗೂ ನಮ್ರತಾ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿತಿರೋ ವಿಶ್ವಲ್ಸ್ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಕರ್ಣ ಯಾವಾಗ ಬರ್ತಾನೋ ಅಂತ ವೀಕ್ಷಕರು, ಫ್ಯಾನ್ಸ್ ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ