ಜೋಗತಿ ವೇಷ ಧರಿಸಿದ ಸ್ಯಾಂಡಲ್​ವುಡ್​ ನಟ.. ಯಾರಿದು ಗೆಸ್​ ಮಾಡಿ..!

author-image
Veena Gangani
Updated On
ಜೋಗತಿ ವೇಷ ಧರಿಸಿದ ಸ್ಯಾಂಡಲ್​ವುಡ್​ ನಟ.. ಯಾರಿದು ಗೆಸ್​ ಮಾಡಿ..!
Advertisment
  • ನಟನ ವಿನೂತನ ಪ್ರಯತ್ನಕ್ಕೆ ಅಭಿಮಾನಿಗಳಿಂದ ಶುಭ ಹಾರೈಕೆ
  • ಡಿಫರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡ ಸ್ಯಾಂಡಲ್​ವುಡ್​ ನಟ
  • ಹುಟ್ಟು ಹಬ್ಬದ ದಿನವೇ ಫ್ಯಾನ್ಸ್​ಗೆ ಗುಡ್‌ ನ್ಯೂಸ್‌ ಕೊಟ್ಟ ಹೀರೋ

ಸ್ಯಾಂಡಲ್​ವುಡ್​ ನಟ ಇದೇ ಮೊದಲ ಬಾರಿಗೆ ಡಿಫರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಈ ನಟನ ಮುಂದಿನ ಸಿನಿಮಾಗೆ ಫ್ಯಾನ್ಸ್​ ಶುಭ ಹಾರೈಸುತ್ತಿದ್ದಾರೆ. ಅವರು ಬೇರೆ ಯಾರು ಅಲ್ಲ ಅವರೇ ಶ್ರೀನಗರ ಕಿಟ್ಟಿ.

ಇದನ್ನೂ ಓದಿ:ಚಿಕ್ಕಮ್ಮನ ಮದ್ವೆ ಆಗುವಂತೆ ಯುವಕನಿಗೆ ಹಿಗ್ಗಾಮುಗ್ಗಾ ಹಲ್ಲೆ.. ಬಲವಂತವಾಗಿ ಹಣೆಗೆ ತಿಲಕ ಹಚ್ಚಿಸಿದ ಚಿಕ್ಕಪ್ಪ..!

publive-image

ಹೌದು, ನಾಗಶೇಖರ್‌ ನಿರ್ದೇಶನದಲ್ಲಿ ನಟ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್‌ ನಟನೆಯ ʻಸಂಜು ವೆಡ್ಸ್‌ ಗೀತಾ 2’ ಸಿನಿಮಾ ಇತ್ತೀಚೆಗೆ ತೆರೆಕಂಡಿತು. ಈ ಚಿತ್ರದ ಯಶಸ್ಸಿನ ನಂತರ, ಶ್ರೀನಗರ ಕಿಟ್ಟಿ ತಮ್ಮ ಮುಂದಿನ ʻವೇಷಗಳುʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಕಿಟ್ಟಿ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

publive-image

ಶ್ರೀನಗರ ಕಿಟ್ಟಿಯವರ ಹುಟ್ಟುಹಬ್ಬದಂದು ʻವೇಷಗಳುʼ ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಗ್ರೀನ್‌ ಟ್ರೀ ಸ್ಟುಡಿಯೋಸ್‌ನಿಂದ ರಿಲೀಸ್‌ ಆಗಿರುವ ಪೋಸ್ಟರ್‌ನಲ್ಲಿ ದ್ವಿಪಾತ್ರದಲ್ಲಿ ಶ್ರೀನಗರ ಕಿಟ್ಟಿಯವರು ಕಾಣಿಸಿಕೊಂಡಿದ್ದಾರೆ. ರವಿ ಬೆಳಗೆರೆ ಅವರು ಜೋಗತಿಯರ ಜೀವನದ ಆಗು ಹೋಗುಗಳ ಬಗ್ಗೆ ಬರೆದಿರುವ ವೇಶಗಳು ಎಂಬ ಸಣ್ಣ ಕಥೆಯನ್ನಾಧರಿಸಿ ಅದೇ ಹೆಸರಿನಲ್ಲಿ ಈ ಸಿನಿಮಾ ತಯಾರಾಗುತ್ತಿದೆ.

ಜುಲೈ 8ರಂದು ಶ್ರೀನಗರ ಕಿಟ್ಟಿ ಅವರ ಹುಟ್ಟುಹಬ್ಬ ಇತ್ತು. ಅದೇ ದಿನ‌ ಭಾವನಾ ಬೆಳಗೆರೆ ಹಾಗೂ ಶ್ರೀನಗರ ಕಿಟ್ಟಿ ಅರ್ಪಿಸುವ ‘ವೇಷಗಳು’ ಸಿನಿಮಾದ ಟೈಟಲ್ ಟೀಸರ್ ರಿಲೀಸ್​ ಮಾಡಲಾಗಿದೆ. ಇನ್ನೂ ರಿಲೀಸ್​ ಆಗಿರೋ ಟೀಸರ್​ನಲ್ಲಿ ನಟ ಶ್ರೀನಗರ ಕಿಟ್ಟಿ ಅವರು ಬಸಪ್ಪ ಹಾಗೂ ಬಸಮ್ಮ ಜೋಗತಿಯಾಗಿ ಎರಡು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment