/newsfirstlive-kannada/media/post_attachments/wp-content/uploads/2025/02/vijay-surya.jpg)
ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಖ್ಯಾತಿ ಪಡೆದಿರೋ ನಟ ವಿಜಯ ಸೂರ್ಯ ದೃಷ್ಟಿಬೊಟ್ಟು ಸೀರಿಯಲ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಕಿರುತೆರೆ ಸ್ಟಾರ್​ ನಟ ವಿಜಯ ಸೂರ್ಯ ಅವರು ಮತ್ತೊಂದು ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್‌ನಲ್ಲಿ ಟಾಕ್ಸಿಕ್ ಹವಾ; ಹೊಸ ದಾಖಲೆ ಬರೆಯಲು ಸಜ್ಜಾದ ಯಶ್ ಸಿನಿಮಾ!
/newsfirstlive-kannada/media/post_attachments/wp-content/uploads/2025/02/vijay-surya1.jpg)
ನಟ ವಿಜಯ ಸೂರ್ಯ ಅವರು ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋದಲ್ಲಿ ನಟ ವಿಜಯ ಸೂರ್ಯ ಅವರು ತಮ್ಮ ರೆಬೆಲ್​ ಆಗೊರೋ ಮೈಕಟ್ಟನ್ನು ತೋರಿಸಿದ್ದಾರೆ. ಇದೇ ಲುಕ್​ನಲ್ಲಿ ನೆಚ್ಚಿನ ನಟನನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.
View this post on Instagram
ಇದೇ ಖುಷಿಯಲ್ಲಿ ನಟನಿಗೆ ಭಿನ್ನ ವಿಭಿನ್ನವಾಗಿ ಕಾಮೆಂಟ್ಸ್​ ಕೂಡ ಮಾಡಿದ್ದಾರೆ. ನಟ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡ ಫೋಟೋಗೆ ರಾಕ್​ ಸ್ಟಾರ್​, ಸೂಪರ್ ಹೀರೋ, ರೆಬೆಲ್​ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ. ಸದ್ಯ ನಟ ವಿಜಯ್​ ಸೂರ್ಯ ಅವರು, ಕಲರ್ಸ್​ ಕನ್ನಡ ವಾಹಿನಿಗೆ ಮತ್ತೆ ಮರಳಿದ್ದಾರೆ. ದತ್ತಾ ಭಾಯ್ ಪಾತ್ರದಲ್ಲಿ ರಗಡ್​ ಆಗಿ ಕಾಣಿಸಿಕೊಳ್ತಿದ್ದಾರೆ. ಗಟ್ಟಿಮೇಳ ನಂತರ ನಟ, ನಿರ್ಮಾಪಕ ರಕ್ಷ್ ದೃಷ್ಟಿಬೊಟ್ಟು ಧಾರಾವಾಹಿಗೆ ಬಂಡವಾಳ ಹಾಕಿದ್ದಾರೆ. ಶ್ರೀ ಸಾಯಿ ಆಂಜನೇಯ ಕಂಪನಿ ಪ್ರೆಜೆಂಟ್ಸ್​ ಸಂಸ್ಥೆ ಅಡಿ ​ದೃಷ್ಟಿಬೊಟ್ಟು ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us