ಮುದ್ದಾದ ಮಗಳ ಜೊತೆಗೆ ಅದಿತಿ ಪ್ರಭುದೇವ ದಂಪತಿ; ನೇಸರಳ ಕ್ಯೂಟ್​ನೆಸ್​ಗೆ ಫ್ಯಾನ್ಸ್​ ಫಿದಾ

author-image
Veena Gangani
Updated On
ಮುದ್ದಾದ ಮಗಳ ಜೊತೆಗೆ ಅದಿತಿ ಪ್ರಭುದೇವ ದಂಪತಿ; ನೇಸರಳ ಕ್ಯೂಟ್​ನೆಸ್​ಗೆ ಫ್ಯಾನ್ಸ್​ ಫಿದಾ
Advertisment
  • ಹೊಸ ವರ್ಷದ ದಿನವೇ ಫ್ಯಾನ್ಸ್​ಗೆ ಸಿಹಿ ಸುದ್ದಿ ಕೊಟ್ಟಿದ್ದ ಅದಿತಿ ಪ್ರಭುದೇವ
  • 2022ರಲ್ಲಿ ಯಶಸ್ಸು ಚಂದ್ರಕಾಂತ್​ ಜೊತೆ ಮದುವೆಯಾಗಿದ್ದ ಕನ್ನಡದ ನಟಿ
  • ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ಸ್ಟಾರ್ ನಟಿ

ಸ್ಯಾಂಡಲ್‌ವುಡ್ ಖ್ಯಾತ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ಸು ಚಂದ್ರಕಾಂತ್ ಸಖತ್​ ಖುಷಿಯಲ್ಲಿದ್ದಾರೆ. ನಟಿ ಅದಿತಿ ಪ್ರಭುದೇವ ದಂಪತಿ ಅವರ ಮುದ್ದಾದ ಮಗಳ ಜೊತೆಗೆ ಮೊದಲ ವರ್ಷದ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿದ್ದಾರೆ ಮಾಡಿದ್ದಾರೆ.

ಇದನ್ನೂ ಓದಿ:ದರ್ಶನ್ ಭೇಟಿಯಾಗಲು 7 ಜನರಿಗೆ ಮಾತ್ರ ಅವಕಾಶ; ಗೌಪ್ಯತೆ ಕಾಪಾಡಲು ಪತ್ನಿ ವಿಜಯಲಕ್ಷ್ಮಿ ಮನವಿ

publive-image

2022ರಲ್ಲಿ ಉದ್ಯಮಿ ಯಶಸ್ಸು ಚಂದ್ರಕಾಂತ್​ ಪಟ್ಲಾ ಅವರನ್ನು ಸ್ಯಾಂಡಲ್​ವುಡ್​ ಮುದ್ದಾದ ನಟಿ ಅದಿತಿ ಪ್ರಭುದೇವ ವಿವಾಹವಾಗಿದ್ದರು. ಹೊಸ ವರ್ಷದ ದಿನವೇ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದರು.

ಯುಗಾದಿ ಹಬ್ಬದ ದಿನ ಅಂದರೆ ಏಪ್ರಿಲ್ 4ರಂದು ನಟಿ ಅದಿತಿ ಪ್ರಭುದೇವ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿತ್ತು. ಯುಗಾದಿ ಹಬ್ಬದಂದು ತಾಯಿ ಆದ ಖುಷಿಯ ಜೊತೆಗೆ ನಮ್ಮ ಮನೆ ಮಹಾಲಕ್ಷ್ಮಿ ಅಂತಾ ಮಗುವಿನ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

publive-image

ಇದೀಗ ಮುದ್ದಿನ ಮಗಳಾದ ನೇಸರಳ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋ ಶೇರ್ ಮಾಡಿಕೊಳ್ಳುವುದರ ಜೊತೆಗೆ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಹಾಗೂ ನಿಮ್ಮ ಮನೆ, ಮನಗಳಲ್ಲಿ ಸದಾ ಪ್ರೀತಿಯ ಜ್ಯೋತಿ ಬೆಳಗುತ್ತಿರಲಿ ಎಂದು ಆಶಿಸುತ್ತಾ ಈ ದೀಪಾವಳಿ ನಿಮಗೆ ಸಾಕಷ್ಟು ಖುಷಿ, ಆರೋಗ್ಯ, ನೆಮ್ಮದಿಯನ್ನು ತರಲಿ ಎಂದು ಹಾರೈಸುತ್ತೇವೆ ಅಂತ ಬರೆದುಕೊಂಡಿದ್ದಾರೆ.

ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಅದಿತಿ ಮಗಳು ನೇಸರಳ ಕ್ಯೂಟ್​ನೆಸ್​ಗೆ ಫಿದಾ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment