ರಾಮಾಚಾರಿ ಸೀರಿಯಲ್​ ನಟಿ ಐಶ್ವರ್ಯಾ ಸಾಲಿಮಠ ಮನೆಗೆ ಹೊಸ ಅತಿಥಿ ಆಗಮನ; ವಿಡಿಯೋ..

author-image
Veena Gangani
Updated On
ರಾಮಾಚಾರಿ ಸೀರಿಯಲ್​ ನಟಿ ಐಶ್ವರ್ಯಾ ಸಾಲಿಮಠ ಮನೆಗೆ ಹೊಸ ಅತಿಥಿ ಆಗಮನ; ವಿಡಿಯೋ..
Advertisment
  • ಸಖತ್​ ಸಂಭ್ರಮದಲ್ಲಿದ್ದಾರೆ ನಟಿ ಐಶ್ವರ್ಯಾ ಸಾಲಿಮಠ ದಂಪತಿ
  • ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಖ್ಯಾತಿ ಪಡೆದಿರೋ ನಟಿ ಐಶ್ವರ್ಯಾ
  • ರಾಮಾಚಾರಿ ಸೀರಿಯಲ್​ನಲ್ಲಿ ವೈಶಾಕಾ ಪಾತ್ರದಲ್ಲಿ ನಟಿ ಅಭಿನಯ

ಕನ್ನಡ ಕಿರುತೆರೆ ನಟಿ ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟಿ ಎಂದರೆ ಅದು ಐಶ್ವರ್ಯಾ ಸಾಲಿಮಠ. ನೆಗೆಟಿವ್ ಶೇಡ್​ನಲ್ಲಿ ಕಾಣಿಸಿಕೊಳ್ಳುವ ನಟಿ ಐಶ್ವರ್ಯಾ ಸಾಲಿಮಠ ದಂಪತಿ ಸಂಭ್ರಮದಲ್ಲಿದ್ದಾರೆ. ಹೌದು, ರಾಮಾಚಾರಿ ಧಾರಾವಾಹಿಯ ವಿಲನ್ ವೈಶಾಖ ಪಾತ್ರಧಾರಿ ಐಶ್ವರ್ಯ ವಿನಯ್ ಮನೆಗೆ ಹೊಸ ಕಾರು ಆಗಮನವಾಗಿದೆ.

ಇದನ್ನೂ ಓದಿ:ರಿಯಲ್ ಗಂಡನ ಜೊತೆ ನಟಿ ಐಶ್ವರ್ಯಾ ಸಾಲಿಮಠ ಮೋಜು ಮಸ್ತಿ; ದಂಪತಿ ಹೋಗಿದ್ದು ಎಲ್ಲಿಗೆ?

ನಟಿ ಐಶ್ವರ್ಯ ವಿನಯ್ ದಂಪತಿ ಕಿರುತೆರೆಯಲ್ಲಿ ಸಖತ್​ ಬ್ಯೂಸಿಯಾಗಿದ್ದಾರೆ. ಇದರ ಮಧ್ಯೆ ದಂಪತಿ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಬಿಳಿ ಬಣ್ಣದ ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಹ್ಯಾಚ್‌ಬ್ಯಾಕ್‌ನ್ನು ಖರೀದಿ ಮಾಡಿದ್ದಾರೆ. ನೂತನ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ ರೂ.6.49 ರಿಂದ ಹಿಡಿದು 9.60 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

publive-image

ಇನ್ನು, ಇದೇ ವಿಡಿಯೋ ನೋಡಿದ ಸ್ನೇಹಿತರು, ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಮುದ್ದು ಜೋಡಿ ಒಟ್ಟಾಗಿ ಮಹಾಸತಿ ಎಂಬ ಧಾರಾವಾಹಿಯಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿದ್ದರು. 2022 ರಲ್ಲಿ ಐಶ್ವರ್ಯಾ ಹಾಗೂ ವಿನಯ್ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದರು. ಸದ್ಯ ನಟಿ ಐಶ್ವರ್ಯಾ ರಾಮಾಚಾರಿ ಸೀರಿಯಲ್​ನಲ್ಲಿ ವಿಲನ್​ ಪಾತ್ರದಲ್ಲಿ ನಟಿಸುತ್ತಿದ್ದಾರೆ.


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment