newsfirstkannada.com

ನಾಯಿ ಬೊಗಳಿದ್ದಕ್ಕೆ ನಟಿಗೆ ಕಿರುಕುಳ.. ನಡುರೋಡಲ್ಲಿ ಅನಿತಾ ಭಟ್‌ಗೆ ಟಾರ್ಚರ್‌ ಆರೋಪ; ಆಗಿದ್ದೇನು?

Share :

Published March 20, 2024 at 6:08pm

Update March 20, 2024 at 6:25pm

    ನಾಯಿ ಬೊಗಳಿದ್ದಕ್ಕೆ ಖ್ಯಾತ ನಟಿ ಜೊತೆ ಕೆಲವರಿಂದ ಕಿರಿಕ್ ಆರೋಪ

    ಸ್ನೇಹಿತೆ ಜೊತೆ ಇದ್ದಾಗ ಸಂಪಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

    ಕ್ಷಮೆ ಕೇಳಿ ಕಾರಿನಲ್ಲಿ ಕುಳಿತರೂ ಕಲ್ಲು ಎತ್ತಿಕೊಂಡು ಬಂದ್ರಾ ಎಂದ ಅನಿತಾ

ಬೆಂಗಳೂರು: ಸ್ನೇಹಿತೆ ಜೊತೆ ನಟಿ ಅನಿತಾ ಭಟ್ ಅವರು ನಾಯಿಯನ್ನು ಹಿಡಿದುಕೊಂಡು ಹೋಗುವಾಗ ಅದು ಬೊಗಳಿದೆ ಎಂದು ಕೆಲವರು ಜಗಳ ತೆಗೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಸಂಪಿಗೆಹಳ್ಳಿ ಠಾಣೆಗೆ ಹೋಗಿ ದೂರು ದಾಖಲು ಮಾಡಲು ಮುಂದಾಗಿದ್ದಾರೆ.

ನಗರದ ಜಕ್ಕೂರು ಬಳಿ ತನ್ನ ಸ್ನೇಹಿತೆ ಜೊತೆ ನಾಯಿ ಹಿಡಿದುಕೊಂಡು ಅನಿತಾ ಭಟ್ ಅವರು ಹೋಗುತ್ತಿದ್ದರು. ಈ ವೇಳೆ ನಟಿಯವರ ನಾಯಿ ಬೊಗಳಿದೆ ಎಂದು ಕೆಲವರು ಜಗಳ ತೆಗೆದಿದ್ದಾರೆ. ಹೀಗಾಗಿ ನಟಿ ಮತ್ತು ಸ್ನೇಹಿತೆ ಕ್ಷಮೆಯಾಚಿಸಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದರು. ಆದ್ರೆ ಕ್ಷಮೆ ಕೇಳಿದರು ಜಗಳ ತೆಗೆದ ಕೆಲವರು ಇಬ್ಬರಿಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಳಿಕ ಇಬ್ಬರು ಕಾರಿನಲ್ಲಿ ಕುಳಿತುಕೊಂಡರೂ ಕಲ್ಲು ಎತ್ತಿಕೊಂಡು ಕಾರ್ ಗ್ಲಾಸ್ ಒಡೆಯಲು ಬಂದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಅನಿತಾ ಭಟ್ ಅವರು ನಾಲ್ಕೈದು ಮಂದಿಯ ವಿರುದ್ಧ ದೂರು ನೀಡಲು ಸಂಪಿಗೆಹಳ್ಳಿಯ ಠಾಣೆಗೆ ತೆರಳಿದ್ದಾರೆ. ಅನಿತಾ ಭಟ್ ಅವರು ಕನ್ನಡದ ಡೇಸ್ ಆಫ್ ಬೋರಾಪುರ, ಟಗರು, ಹೊಸ ಕ್ಲೈಮ್ಯಾಕ್ಸ್‌ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಯಿ ಬೊಗಳಿದ್ದಕ್ಕೆ ನಟಿಗೆ ಕಿರುಕುಳ.. ನಡುರೋಡಲ್ಲಿ ಅನಿತಾ ಭಟ್‌ಗೆ ಟಾರ್ಚರ್‌ ಆರೋಪ; ಆಗಿದ್ದೇನು?

https://newsfirstlive.com/wp-content/uploads/2024/03/ANITHA_BHAT.jpg

Load More