/newsfirstlive-kannada/media/post_attachments/wp-content/uploads/2024/10/anu.jpg)
ಕನ್ನಡದ ಖ್ಯಾತ ನಟಿ ಅನು ಪ್ರಭಾಕರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ತಮ್ಮ ಅದ್ಭುತ ಅಭಿನಯದ ಮೂಲಕವೇ ಚಂದನವನದಲ್ಲಿ ತಮ್ಮದೇಯಾದ ಛಾಪನ್ನು ಮೂಡಿಸಿದ್ದಾರೆ. ಟೈಟಾನಿಕ್ ಹೀರೋಯಿನ್ ಅಂತಲೇ ಫೇಮಸ್ ಆಗಿದ್ದಾರೆ ನಟಿ ಅನು ಪ್ರಭಾಕರ್. ಇನ್ನೂ ಪತಿ ರಘು ಮುಖರ್ಜಿ ಕೂಡ ಸ್ಯಾಂಡಲ್ವುಡ್ನಲ್ಲಿ ನಟನಾಗಿ ಗುರುತಿಸಿಕೊಂಡವರು.
ಇದನ್ನೂ ಓದಿ:BBK11: ಯಾವನಾದ್ರು ಅಪ್ಪನಿಗೆ ಹುಟ್ಟಿದ್ರೆ.. ಚೈತ್ರಾ ಖಡಕ್ ಲುಕ್ಕು, ಘರ್ಜನೆಗೆ ಜಗದೀಶ್ ಸ್ಟನ್ ಆದ್ರಾ?
ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಌಕ್ವೀವ್ ಆಗಿರೋ ನಟಿ ಆಗಾಗ ತಮ್ಮ ಮುದ್ದಾದ ಮಗಳ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ನಟಿ ತಮ್ಮ ಮಗಳನ್ನು ಮುದ್ದಾಗಿ ಬೆಳೆಸುತ್ತಿದ್ದಾರೆ. ನಟಿಯ ಮಗಳು ನಂದನಾಗೆ ಸದ್ಯ ಆರು ವರ್ಷ. ಅಂದಹಾಗೆ ಇತ್ತೀಚೆಗೆ ನಟಿ ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ತಮ್ಮ ಮಗಳ ಬಗ್ಗೆ ಮಾತಾಡಿದ್ದಾರೆ.
ನಾವು ಸಿನಿಮಾಗಳಲ್ಲಿ ಕೆಲಸ ಮಾಡುವವರಾಗಿದ್ದರೂ ಮಗಳಿಗೆ ಸಿನಿಮಾ ನೋಡಲು ಥಿಯೇಟರ್‌ಗಳಿಗೆ ಕರೆದೊಯ್ದಿಲ್ಲ. ಮೊಟ್ಟ ಮೊದಲ ಬಾರಿಗೆ ನನ್ನ ಮಗಳಿಗೆ ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಸಿನಿಮಾವನ್ನು ನೋಡಲು ಥಿಯೇಟರ್ಗೆ ಕರೆದುಕೊಂಡು ಹೋಗಿದ್ದೇವು. ಪ್ರಕೃತಿ ಮತ್ತು ಪ್ರಾಣಿಗಳ ಬಗ್ಗೆ ಅವರಿಗೆ ಒಲವು ಇರುವುದರಿಂದ ಕರೆದುಕೊಂಡು ಹೋಗಿದ್ದೆ. ಆದಷ್ಟು ಪೋಷಕರಾಗಿ ನಾವು ಮನೆಯಲ್ಲಿಯೂ ಸಹ ಮಕ್ಕಳಿಗೆ ಸ್ಕ್ರೀನ್‌ಟೈಮ್ ಅನ್ನು ಮಿತಿಗೊಳಿಸಲು ಪ್ರಯತ್ನಿಸುತ್ತೇವೆ. ಆದರೆ ನಮ್ಮ ಮಗಳು ಟಿವಿಯಲ್ಲಿ ರಘು ಮತ್ತು ನನ್ನ ಗ್ಲಿಂಪ್ಸ್ಗಳನ್ನು ನೋಡಿದ್ದಾಳೆ. ಆದರೆ ನಾವು ಸಿನಿಮಾದಲ್ಲಿ ಮಾಡಿದ್ದು ಆಕೆಯ ಅರಿವಿಗೆ ಬಂದಿಲ್ಲ. ಸದ್ಯಕ್ಕೆ ಆಕೆಗೆ ಯಾವುದೇ ಸಿನಿಮಾದ ಬಗ್ಗೆ ಆಸಕ್ತಿ ಇಲ್ಲ ಅಂತ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮೌನ ಮುರಿದ ಕಿಚ್ಚ ಸುದೀಪ್.. ಬಿಗ್ಬಾಸ್ನಲ್ಲಿ ಅವಮಾನ ಆಗಿದ್ದು ನಿಜನಾ? ಡೈರೆಕ್ಟರ್ ಪ್ರಕಾಶ್ ಬಗ್ಗೆ ಹೇಳಿದ್ದೇನು?
ಶಿವರಾಜ್‌ಕುಮಾರ್ ಜೊತೆಗೆ 1990ರಲ್ಲಿ 'ಹೃದಯ ಹೃದಯ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ವಿಷ್ಣುವರ್ಧನ್ ಜೊತೆಗೆ 'ಸೂರಪ್ಪ', 'ಹೃದಯವಂತ', 'ಜಮೀನ್ದಾರ', 'ವರ್ಷ', 'ಸಾಹುಕಾರ' ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ರಮೇಶ್ ಅರವಿಂದ್ ಹಾಗೂ ಅನು ಪ್ರಭಾಕರ್ ಜೋಡಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು. ಇದಾದ ಬಳಿಕ ಅವರು ಕನ್ನಡದ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಕೂಡ ಆಗುತ್ತಿದ್ದಾರೆ. 'ನನ್ನಮ್ಮ ಸೂಪರ್‌ಸ್ಟಾರ್' ರಿಯಾಲಿಟಿ ಶೋನಲ್ಲಿ ಅನು ಅವರು ಜಡ್ಜ್ ಆಗಿದ್ದರು. ಸದ್ಯ ಮುದ್ದಾದ ಮಗಳ ಜೊತೆಗೆ ದಂಪತಿ ಕಾಲ ಕಳೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ