/newsfirstlive-kannada/media/post_attachments/wp-content/uploads/2025/07/Archana-K-Lakshminarasimhaswamy.jpg)
ಕನ್ನಡ ಕಿರುತೆರೆಯ ಕ್ಯೂಟ್ ನಟಿಯರಲ್ಲಿ ಇವರು ಕೂಡ ಒಬ್ಬರು. ಮನೆದೇವ್ರು, ಮಧುಬಾಲ ಧಾರಾವಾಹಿ ಮೂಲಕ ಸಖತ್ ಫೇಮಸ್ ಆಗಿದ್ದರು ನಟಿ ಅರ್ಚನಾ ಲಕ್ಷ್ಮೀ ನರಸಿಂಹಸ್ವಾಮಿ. ಸದ್ಯ ಪತಿ ಹಾಗೂ ಮುದ್ದಾದ ಮಗಳು ವಿಯಾರ ಶರ್ಮಾ ಜೊತೆ ಸುಖ ಸಂಸಾರ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಸರೋಜಾ ದೇವಿಗೆ ತುಂಬಾನೇ ಕಾಡಿದ ನೋವು ಅದು.. ಅಂದಿನಿಂದ ಚೇತರಿಸಿಕೊಳ್ಳಲು ತುಂಬಾ ವರ್ಷಗಳು ಬೇಕಾಯಿತು..
ಗೌರಿ ಗಣೇಶ ಹಬ್ಬದಂದು ಅರ್ಚನಾ ಅವರು ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಕಳೆದ ಏಪ್ರಿಲ್ ತಿಂಗಳಲ್ಲಿ ಅಮೆರಿಕಾದಿಂದ ಬೆಂಗಳೂರಿಗೆ ಬಂದ ಅರ್ಚನಾ ಮಗಳಿಗೆ ವಿಯಾರ ಶರ್ಮಾ ಎಂದು ಹೆಸರು ಇಟ್ಟಿದ್ದರು. ಈ ನಾಮಕರಣ ಸಮಾರಂಭಕ್ಕೆ ಕನ್ನಡ ಕಿರುತೆರೆಯ ಕಲಾವಿದರು, ನಟ ಧನಂಜಯ ಕೂಡ ಆಗಮಿಸಿದ್ದರು.
ವಿಶೇಷ ಎಂದರೆ ನಟಿ ಅರ್ಚನಾ ಅವರ ಪತಿ ವಿಘ್ನೇಶ್ ಶರ್ಮಾ ಕೂಡ ಗಣೇಶ ಚತುರ್ಥಿಯಂದು ಜನಿಸಿದ್ದಾರಂತೆ. ಸದ್ಯ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದಾದ ಕುಟುಂಬ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಕನ್ನಡ, ತೆಲುಗು, ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ವಿಘ್ನೇಶ್ ಶರ್ಮಾ ಹಾಗೂ ವಿಯಾರ ಶರ್ಮಾ ಜೊತೆಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಅಲ್ಲದೇ ನಮ್ಮ ಮಗು ನಮ್ಮ ದಿನಚರಿಗಳನ್ನು ಮಾತ್ರವಲ್ಲ, ನನ್ನ ಹೃದಯವನ್ನೂ ಬದಲಾಯಿಸಿತು. ನೀವು ತಂದೆಯಾಗುವುದನ್ನು ನೋಡುವುದು ನನಗೆ ನಿಮ್ಮನ್ನು ಹೊಸ ಬೆಳಕಿನಲ್ಲಿ ನೋಡುವಂತೆ ಮಾಡಿತು. ನೀವು ಅವಳನ್ನು ಹಿಡಿದಿಟ್ಟುಕೊಳ್ಳುವ, ರಕ್ಷಿಸುವ, ಅವಳನ್ನು ನಗಿಸುವ ರೀತಿ ಅದು ಮತ್ತೆ ಮತ್ತೆ ನಿನ್ನನ್ನು ಪ್ರೀತಿಸುವಂತೆ, ಆದರೆ ಈ ಬಾರಿ ಇನ್ನೂ ಆಳವಾಗಿ. ನನಗೆ ಎಂದಿಗೂ ಅಗತ್ಯವಿರಲಿಲ್ಲ ಎಂದು ನನಗೆ ತಿಳಿದಿರದ ಮೃದುತ್ವ, ನಿದ್ದೆಯಿಲ್ಲದ ರಾತ್ರಿಗಳಲ್ಲಿ ನಮ್ಮನ್ನು ಸ್ಥಿರಗೊಳಿಸುವ ಶಕ್ತಿ ಮತ್ತು ನಮ್ಮ ಮನೆಯ ಪ್ರತಿಯೊಂದು ಮೂಲೆಯನ್ನೂ ತುಂಬುವ ಪ್ರೀತಿಯನ್ನು ನೀವು ನನಗೆ ತೋರಿಸಿದ್ದೀರಿ. ಅವಳ ದೃಷ್ಟಿಯಲ್ಲಿ, ನಾನು ನಮ್ಮಿಬ್ಬರ ಅತ್ಯುತ್ತಮ ಭಾಗಗಳನ್ನು ನೋಡುತ್ತೇನೆ ಮತ್ತು ನಿಮ್ಮಲ್ಲಿ, ನಾನು ಮತ್ತೆ ಮತ್ತೆ ಆಯ್ಕೆ ಮಾಡುವ ವ್ಯಕ್ತಿಯನ್ನು ನೋಡುತ್ತೇನೆ. ಈ ಅಧ್ಯಾಯವು ಇದೀಗ ಪ್ರಾರಂಭವಾಗಿದೆ, ಆದರೆ ನೀವು ನನ್ನ ಪಕ್ಕದಲ್ಲಿದ್ದಾಗ, ಇದು ಈಗಾಗಲೇ ನಾವು ಬದುಕಿದ ಅತ್ಯಂತ ಸುಂದರವಾದ ಕಥೆಯಾಗಿದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ