/newsfirstlive-kannada/media/post_attachments/wp-content/uploads/2024/04/Dwarakish1.jpg)
ಬೆಂಗಳೂರು: ಕನ್ನಡದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ (81)​ ಅವರು ಇಂದು ಸಾವನ್ನಪ್ಪಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಹಿರಿಯ ನಟ ದ್ವಾರಕೀಶ್ ಇಂದು ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಸಿನಿಮಾದ ಕುಳ್ಳನ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ನಟ ದ್ವಾರಕೀಶ್ ಅವರ ಸಾವಿನ ಸುದ್ದಿ ತಿಳಿದ ಸ್ಯಾಂಡಲ್‌ವುಡ್ ಗಣ್ಯರು ಅವರ ನಿವಾಸಕ್ಕೆ ಆಗಮಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/04/bhavya1.jpg)
ಇದನ್ನೂ ಓದಿ:Dwarakish: ನಾಳೆ ಸಾರ್ವಜನಿಕ ದರ್ಶನಕ್ಕೆ ಅವಕಾಶ, ಬಳಿಕ ಅಂತ್ಯಕ್ರಿಯೆ.. ಸ್ಥಳ? ಸಮಯ? ಇಲ್ಲಿದೆ ಮಾಹಿತಿ
ಈ ಬಗ್ಗೆ ಹಿರಿಯ ನಟಿ ಭವ್ಯಾ ಅವರು ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ್ದಾರೆ. ಕನ್ನಡ ಇಂಡಸ್ಟ್ರಿಯ 'ಗಾಡ್ ಫಾದರ್' ದ್ವಾರಕೀಶ್. ಏನ್ ಮಾತನಾಡಬೇಕು ಅಂತಾ ಗೊತ್ತಾಗುತ್ತಿಲ್ಲ. ಅವರೊಂದು ಸಿನಿಮಾ ರಂಗಕ್ಕೆ ಶಕ್ತಿ ಇದ್ದಂತೆ. ನಟ, ನಿರ್ದೇಶಕ, ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಒಂದು ಪರಿಪೂರ್ಣ ಜೀವನ ನಡೆಸಿಕೊಂಡು ಬಂದವರು. ಇವತ್ತು ನಮ್ಮನ್ನ ಅಗಲಿದ್ದಾರೆ. ಅವರೊಂದು ಹೆಮ್ಮೆ. ವಿದೇಶದಲ್ಲಿ ಸಿನಿಮಾ ಶೂಟ್ ಮಾಡಿದ್ದಾರೆ. ಅವರ ಬ್ಯಾನರ್‌ನಲ್ಲಿ ಕೆಲಸ ಮಾಡೋದು ಅಂದ್ರೆ ಒಂದು ಭಾಗ್ಯ. ಅವರು ಒಂದು ದಿನ ಕಾಲ್ ಮಾಡಿ ಒಂದು ಸಿನಿಮಾ ಮಾಡುತ್ತಿದ್ದೇನೆ. ನೀನು ಅದರಲ್ಲಿ ಆ್ಯಕ್ಟ್ ಮಾಡ್ಬೇಕು ಅಂತ ಬಹಳ ಆತ್ಮೀಯವಾಗಿ ಮಾತನಾಡಿದ್ದರು. ಪ್ರತಿದಿನ ಆ ಪ್ರತಿಕ್ಷಣ ನೆನಪು ಮಾಡಿಕೊಳ್ಳುತ್ತೀನಿ. ನನಗೆ ಅವರ ಸಿನಿಮಾದಿಂದ ಒಂದು ಬ್ರೇಕ್, ಸ್ಟಾರ್ ಡಂ ಸಿಕ್ಕಿದೆ. ನಿಜವಾಗಲೂ ಆರ್ಟಿಸ್ಟ್‌ಗಳಿಗೆ ಅಂತ ಕ್ಯಾರೆಕ್ಟರ್ ಸಿಗೋದು ಕಷ್ಟ. ಆದರೆ ದೇವರಾಗಿ ಬಂದು ನನಗೆ ಆ ಅವಕಾಶ ಕೊಟ್ಟರು. ಆದಾದ ಮೇಲೆ ಅನೇಕ ಗಾಸಿಪ್ ಬಂತೂ ಆದರೂ ಅದ್ಯಾವುದಕ್ಕೂ ಅವರು ತಲೆ ಕಡಿಸಿಕೊಂಡಿರಲಿಲ್ಲ. ಕಳೆದ ವರ್ಷ ಅವರ ಹುಟ್ಟುಹಬ್ಬವನ್ನ ಆಚರಿಸಿದ್ದೇವು. ಆದರೆ ಇವತ್ತು ನಮ್ಮನ್ನ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಕೇಳಿಕೊಳ್ಳುತ್ತೇನೆ ಅಂತಾ ಕಣ್ಣೀರಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/04/karthik-mahesh.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10ರ ವಿನ್ನರ್​ ಕಾರ್ತಿಕ್ ಮಹೇಶ್​ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೇರೆ ದೇಶದಲ್ಲಿ ಹೋಗಿ ಶೂಟಿಂಗ್​ ಮಾಡಬಹುದು ಅಂತ ಮೊದಲನೇ ಬಾರಿಗೆ ದ್ವಾರಕೀಶ್ ಅವರೇ ತೋರಿಸಿ ಕೊಟ್ಟರು. ಅವರಿಗೆ ಅಷ್ಟು ಧೈರ್ಯ ಇತ್ತು. ಏನೇ ಮಾಡಿದ್ರೂ ಸಾಧಿಸಿ ತೋರಿಸುತ್ತೇನೆ ಅಂತಾ ಇದ್ದರು. ಆದರೆ ಈ ವೇಳೆ ಹೆಚ್ಚಾಗಿ ಏನು ಮಾತಾಡೋಕೆ ಆಗೋದಿಲ್ಲ. ಅವರ ಜೊತೆ ಒಂದು ಬಾರಿಯಾದ್ರೂ ನಟನೆ ಮಾಡಬೇಕು ಅಂತಾ ತುಂಬಾ ಜನಕ್ಕೆ ಆಸೆ ಇರುತ್ತದೆ. ಅವರು ಸಿನಿಮಾಗಳ ಮೂಲಕವೇ ಬದುಕಿದ್ದಾರೆ. ಕೊನೆಯುಸಿರಿನ ತನಕ ಕೂಡ ಅವರು ಸಿನಿಮಾ ಮಾಡಬೇಕು ಅಂತಾ ಅಂದುಕೊಂಡಿದ್ದರು. ತುಂಬಾ ದೊಡ್ಡ ನಟ ಅವರು ಅಂತಾ ಭಾವುಕರಾಗಿ ಮಾತನಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us