/newsfirstlive-kannada/media/post_attachments/wp-content/uploads/2025/03/deepika-das7.jpg)
ಕನ್ನಡದ ಬಿಗ್ಬಾಸ್ ಸೀಸನ್ 7 ಹಾಗೂ 9ರ ಮಾಜಿ ಸ್ಪರ್ಧಿ, ನಟಿ ದೀಪಿಕಾ ದಾಸ್ ಸದ್ಯ ಹ್ಯಾಪಿ ಮೂಡ್ನಲ್ಲಿದ್ದಾರೆ.
ಇದನ್ನೂ ಓದಿ: ಊಟವಾದ ಮೇಲೆ ಲವಂಗವನ್ನು ತಿನ್ನಬೇಕು ಏಕೆ? ಇಲ್ಲಿವೆ ಪ್ರಮುಖ 6 ಕಾರಣಗಳು
ಕನ್ನಡ ಕಿರುತೆರೆಯಲ್ಲಿ ನಾಗಿಣಿ ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು ಈ ಸುಂದರಿ ದೀಪಿಕಾ ದಾಸ್.
ಸದ್ಯ ಇಂದು ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿದ್ದಾರೆ ನಟಿ ದೀಪಿಕಾ ದಾಸ್. ಇದೇ ಖುಷಿಯಲ್ಲಿ ಇನ್ಸ್ಟಾಗ್ರಾಮ್ನಲ್ಲಿ ನೀವು ನೋಡಿದ ಮದುವೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಜೊತೆಗೆ It’s been a year for our adventures MARCH-PAST (1st) journey. Happy ANNIVERSARY D ಎಂದು ಬರೆದುಕೊಳ್ಳುವ ಮೂಲಕ ಗಂಡನಿಗೆ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ.
ನಟಿ ದೀಪಿಕಾ ದಾಸ್ 2023ರ ಮಾರ್ಚ್ 1ರಂದು ಗೋವಾದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದರು. ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮೂಲಕ ಬಹುಕಾಲದ ಗೆಳೆಯನ ಜೊತೆಗೆ ಸಪ್ತಪದಿ ತುಳಿದಿದ್ದರು.
ಇನ್ನೂ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ದೀಪಿಕಾ ದಾಸ್ ಮದುವೆ ಫೋಟೋಸ್ ನೋಡಿ ಅಭಿಮಾನಿಗಳು, ಸ್ನೇಹಿತರು ಎಲ್ಲಾ ಶಾಕ್ ಆಗಿದ್ದರು.
ದೀಪಿಕಾ ದಾಸ್ ಜೊತೆಗೆ ಮದುವೆಯಾಗಿದ್ದ ಪತಿ ದೀಪಕ್ ಗೌಡ ಅವರು ರಿಯಲ್ ಎಸ್ಟೇಟ್ ಮತ್ತು ಐಟಿ ಉದ್ಯಮಿಯಾಗಿದ್ದಾರೆ. ದೀಪಿಕಾ ದಾಸ್ ಮತ್ತು ದೀಪಕ್ ಪರಸ್ಪರ ಪ್ರೀತಿಸಿ ಮದುವೆಯಾದವರು.
ಇವರಿಬ್ಬರು ಆರಂಭದಲ್ಲಿ ಸ್ನೇಹಿತರಾಗಿದ್ದು, ಬಳಿಕ ಪ್ರೀತಿಸಿ ಮದುವೆಯಾಗಿದ್ದಾರೆ. ನಟಿ ದೀಪಿಕಾ ದಾಸ್ಗೆ ಗೋವಾದಲ್ಲೇ ಮದುವೆಯಾಗುವ ಆಗೋ ಕನಸು ಇತ್ತಂತೆ.
View this post on Instagram
ಹೀಗಾಗಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಟಿ ದೀಪಿಕಾ ದಾಸ್ ಉದ್ಯಮಿ ದೀಪಕ್ ಎಂಬುವವರ ಜೊತೆ ಮಾರ್ಚ್ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.