/newsfirstlive-kannada/media/post_attachments/wp-content/uploads/2025/07/deepika-das3.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್, ನಾಗಿಣಿ ಸೀರಿಯಲ್​​ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದಿದ್ದ ನಟಿ ದೀಪಿಕಾ ದಾಸ್ ಖುಷಿಯಲ್ಲಿದ್ದಾರೆ.
/newsfirstlive-kannada/media/post_attachments/wp-content/uploads/2025/07/deepika-das8.jpg)
ಸೋಷಿಯಲ್ ಮೀಡಿಯಾದಿಂದ ದೂರ ಉಳಿದುಕೊಳ್ಳುತ್ತೇನೆ ಅಂತ ಹೇಳಿದ್ದ ದೀಪಿಕಾ ದಾಸ್​ ಮತ್ತೆ ವಾಪಸ್​​ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2025/07/deepika-das7.jpg)
ಕನ್ನಡದ ನಟಿ ದೀಪಿಕಾ ದಾಸ್​ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ.
/newsfirstlive-kannada/media/post_attachments/wp-content/uploads/2025/07/deepika-das6.jpg)
ಇದೀಗ ನಟಿ ದೀಪಿಕಾ ದಾಸ್ ಮೊದಲ ಬಾರಿಗೆ ಹೊರ ರಾಜ್ಯದ ಶಕ್ತಿಪೀಠ ಕಾಮಾಕ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ದೇಶದ 51 ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿ ಬಂದಿದ್ದಾರೆ.
/newsfirstlive-kannada/media/post_attachments/wp-content/uploads/2025/07/deepika-das5.jpg)
ಇದೇ ಫೋಟೋವನ್ನು ಇನ್​ಸ್ಟಾ ಖಾತೆಯಲ್ಲಿ ನಟಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ಕೆಂಪು ಬಣ್ಣದ ಸೀರೆ, ಹಣೆಗೆ ಕುಂಕುಮ, ಕೈಯಲ್ಲಿ ಹೂವು, ಹಿಂದೆ ಕಾಮಾಕ್ಯ ದೇವಿ ದೇವಸ್ಥಾನ ಮುಂದೆ ನಿಂತು ಪೋಸ್​ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/07/deepika-das4.jpg)
ನಟಿ ದೀಪಿಕಾ ದಾಸ್​ ಭೇಟಿ ಕೊಟ್ಟ ಕಾಮಾಕ್ಯ ಕ್ಷೇತ್ರದ ಮಹತ್ವದ ಬಗ್ಗೆ ತಿಳಿದುಕೊಳ್ಳಲೇಬೇಕು. ಭಾರತದ ಪುರಾತನ ಶಕ್ತಿಪೀಠಗಳಲ್ಲಿ ಕಾಮಾಕ್ಯ ದೇವಿ ದೇವಸ್ಥಾನವು ಒಂದಾಗಿದೆ. ಗುವಾಹಟಿಯ ಪಶ್ಚಿಮ ಭಾಗದ ನಿಲಚಲ್ ಬೆಟ್ಟದ ಮೇಲೆ ದೇವಿ ನೆಲೆಸಿದ್ದಾಳೆ. ಈ ಕಾಮಾಕ್ಷಿ ಮಾತೆ ಪವರ್ ಫುಲ್’ ಶಕ್ತಿ ದೇವತೆ ಎನ್ನಿಸಿಕೊಂಡಿದ್ದಾಳೆ. ಇಲ್ಲಿ ದೇವಿ ವಿಗ್ರಹವಿಲ್ಲ, ಬದಲಾಗಿ ಯೋನಿಯನ್ನು ಪೂಜಿಸಲಾಗುತ್ತೆ.
View this post on Instagram
ಪ್ರತಿ ವರ್ಷ ಜೂನ್ ತಿಂಗಳು ಬಂದರೆ ಈ ತಾಯಿ ಮುಟ್ಟಾಗುತ್ತಾಳೆ. ಅದೇ ಕಾರಣಕ್ಕೆ ಬ್ರಹ್ಮಪುತ್ರ ನೀರು ಕೆಂಪಾಗುತ್ತದೆ ಎಂಬ ನಂಬಿಕೆ ಇದೆ. ಮುಟ್ಟಾದ 3 ದಿನಗಳ ಕಾಲ ಈ ದೇವಾಲಯ ಬಂದ್ ಮಾಡ್ತಾರೆ. ದೇವಿ ಮುಟ್ಟಾದ ಬಟ್ಟೆಯನ್ನು ಪ್ರಸಾದದ ರೂಪದಲ್ಲಿ ಹಂಚಲಾಗುತ್ತೆ. ಅನೇಕ ಗಣ್ಯ ವ್ಯಕ್ತಿಗಳು ಈ ದೇಗುಲಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ದೊಡ್ಡ ದೊಡ್ಡ ನಟರು, ರಾಜಕಾರಣಿ, ಉದ್ಯಮಿದಾರರು ನೆಚ್ಚಿನ ತಾಣ ಇದಾಗಿದೆ. ಸದ್ಯ ಪವರ್​ ಫುಲ್​ ದೇವಸ್ಥಾನಕ್ಕೆ ನಟಿ ದೀಪಿಕಾ ದಾಸ್​​ ಭೇಟಿ ಕೊಟ್ಟು ಖುಷಿ ಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us